More

    Video | ನಾಗಭಕ್ತರಿಗೆ ‘ಸರ್ಪ’ರೈಸ್​: ಬಾರ್ಕೂರಿನಲ್ಲಿ ಸುಬ್ರಹ್ಮಣ್ಯ ವಿಗ್ರಹದ ಮೇಲೆ ಹರಿದಾಡಿದ ನೈಜ ಸರ್ಪ!

    ಉಡುಪಿ: ನಾಗರ ಪಂಚಮಿ ದಿನ ನೈಜ ನಾಗ ಹಾಲು ಕುಡಿದ ದೃಶ್ಯ, ಹನುಮ ಜಯಂತಿ ದಿನ ಆಂಜನೇಯ ದೇವಸ್ಥಾನದಲ್ಲಿ ಕಪಿ ಕಾಣಿಸಿಕೊಂಡ ಸುದ್ದಿ.. ಹೀಗೆ ಇಂಥವು ಹಲವಾರು ಸಲ ವರದಿಯಾಗಿವೆ. ಹೀಗಿನ ಘಟನೆಗಳು ಆಗಾಗ ಜರುಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ದೇವಸ್ಥಾನದಲ್ಲೂ ಇಂಥದ್ದೇ ಹಾಗೂ ಅಪರೂಪದ ದೃಶ್ಯವೊಂದು ಎದುರಾಗಿದ್ದು, ಭಕ್ತರಲ್ಲಿ ಒಮ್ಮೆಗೇ ಭಯ-ಭಕ್ತಿ ಎರಡೂ ಆವರಿಸಿಕೊಳ್ಳುವಂಥ ವಿದ್ಯಮಾನವೊಂದು ಜರುಗಿದೆ.

    ಈ ದೃಶ್ಯ ಇತಿಹಾಸ ಪ್ರಸಿದ್ಧ ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಮಕರ ಸಂಕ್ರಮಣದ ವಿಶೇಷ ಪೂಜೆ ಸಂದರ್ಭದಲ್ಲಿ ಈ ಅಪರೂಪದ ದೃಶ್ಯ ಕಂಡು ಬಂದಿದೆ. ಅಂದರೆ ಪಂಚಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯನ ವಿಗ್ರಹದ ಮೇಲೆ ಸರ್ಪವೊಂದು ಹರಿದಾಡಿದೆ.

    ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/VVani4U/videos/215461050243184

    ನಾಗಾರಾಧನೆಗೆ ವಿಶೇಷ ಮಹತ್ವ ಇರುವ ಕರಾವಳಿಯಲ್ಲಿ ಅದರಲ್ಲೂ ಐತಿಹಾಸಿಕ ಬಾರ್ಕೂರಿನ ದೇವಸ್ಥಾನದಲ್ಲಿ ಈ ಥರದ ದೃಶ್ಯ ಕಂಡುಬಂದಿರುವುದು ಜನರಲ್ಲಿನ ಕುತೂಹಲ ಕೆರಳಿಸಿದೆ. ಮಾತ್ರವಲ್ಲ ಸುಬ್ರಹ್ಮಣ್ಯನ ವಿಗ್ರಹದ ಮೇಲೆ ಸರ್ಪ ಹರಿದಾಡಿದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts