More

    ರಿಯಲ್ ಎಸ್ಟೇಟ್ ಕಾರಣಕ್ಕೆ ಹೊಸ ಜಿಲ್ಲೆ: ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡರ ಆರೋಪ

    ಬಳ್ಳಾರಿ: ರಿಯಲ್ ಎಸ್ಟೇಟ್ ಕಾರಣಕ್ಕೆ ವಿಜಯನಗರ ಜಿಲ್ಲೆ ೋಷಿಸಲಾಗಿದೆ. ಇದರಿಂದ ಸಚಿವ ಆನಂದ ಸಿಂಗ್ ಕುಟುಂಬದವರಿಗೆ ಮಾತ್ರ ಸಂತೋಷವಾಗಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಸಚಿವ ಶ್ರೀರಾಮುಲು ಜಿಲ್ಲೆ ವಿಭಜನೆ ಪರವಾಗಿದ್ದಾರೆ. ಆನಂದ ಸಿಂಗ್ ಬಳ್ಳಾರಿಗೆ ಬಂದರೆ ೇರಾವ್ ಹಾಕಲಾಗುವುದು. ನ.26ರಂದು ಬಳ್ಳಾರಿ ಬಂದ್ ಕರೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಕುಡತಿನಿ ಶ್ರೆನಿವಾಸ ಹೇಳಿದರು.

    ರಾಜ್ಯದಲ್ಲಿ ದೊಡ್ಡದಾದ ಬೆಳಗಾವಿ ಜಿಲ್ಲೆ ವಿಭಜನೆ ಮಾಡದ ಸರ್ಕಾರ, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿರುವುದು ಖಂಡನೀಯ. ಹೊಸ ಜಿಲ್ಲೆಗಳಾಗಿ 20 ವರ್ಷ ಕಳೆದರೂ ಕೊಪ್ಪಳ, ಯಾದಗಿರಿ ಅಭಿವೃದ್ಧಿಯಾಗಿಲ್ಲ. ಜಿಲ್ಲೆಗಳನ್ನು ವಿಭಜಿಸುವುದಾದರೆ ಬೆಳಗಾವಿ, ತುಮಕೂರು, ಶಿವಮೊಗ್ಗ ಜಿಲ್ಲೆಗಳನ್ನು ಕೂಡ ವಿಭಜಿಸಲಿ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಖಂಡ ಬಳ್ಳಾರಿ ಜಿಲ್ಲೆ ಹೋರಾಟಕ್ಕೆ ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಶಾಸಕರು ಮುಂದಾಗಬೇಕು. ಈ ಕುರಿತ ನೇತೃತ್ವ ವಹಿಸಿಕೊಳ್ಳುವಂತೆ ಶಾಸಕರನ್ನು ಕೋರಲಾಗುವುದು. ಸ್ಪಂದಿಸದಿದ್ದರೆ ಶಾಸಕರ ಮನೆಮುಂದೆ ಧರಣಿ ನಡೆಸಲಾಗುವುದು. ಜಿಲ್ಲೆ ವಿಭಜನೆ ವಿರುದ್ಧ ನ.23ರಂದು ಡಿಸಿಗೆ ಮನವಿ ಸಲ್ಲಿಸಲಾಗುವುದು ಎಂದರು.

    ತುಂಗಭದ್ರಾ ರೈತ ಸಂದ ಅಧ್ಯಕ್ಷ ಪುರುಷೋತ್ತಮ ಗೌಡ ದರೂರು ಮಾತನಾಡಿ, ಸರ್ಕಾರ ದಿಢೀರನೆ ವಿಜಯನಗರ ಜಿಲ್ಲೆ ೋಷಿಸಿದೆ. ಅಧಿಕಾರ ಉಳಿಸಿಕೊಳ್ಳಲು ಜಿಲ್ಲೆ ವಿಭಜನೆಗೆ ಸಿಎಂ ಮುಂದಾಗಿದ್ದಾರೆ ಎಂದು ಆರೋಪಿಸಿದರು. ವಿವಿಧ ಸಂಟನೆಗಳ ಮುಖಂಡರಾದ ಚಾನಾಳ್ ಶೇಖರ್, ಬಸವರಾಜ ಬಿಸಿಲಹಳ್ಳಿ, ಟಪಾಲ್ ಗಣೇಶ, ಅಂಜಿನಿ ಕೊಳಗಲ್ಲು, ಪಂಪಾಪತಿ, ಮೋಹನಬಾಬು, ಸಿಂಗಾಪುರ ನಾಗರಾಜ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts