More

    ರೇಣುಕಾಂಬೆ ಎದುರು ಗಂಟೆ ಬಾರಿಸಲು ಸಿದ್ಧ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಕೆಲವು ಮಠಾಧೀಶರು ಹಾಗೂ ಮಹಿಳೆಯರ ಮನಸ್ಸಿಗೆ ನೋವಾಗುವಂತೆ ಬಿ.ವೈ.ರಾಘವೇಂದ್ರ ಮಾತನಾಡಿದ್ದಾರೆಂಬ ನನ್ನ ಹೇಳಿಕೆಗೆ ಬದ್ಧ. ಅವರು ಆಹ್ವಾನ ನೀಡಿದಂತೆ ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಗೆ ತೆರಳಿ ಗಂಟೆ ಬಾರಿಸಲು ಸಿದ್ಧ ಎಂದು ಹೇಳುವ ಮೂಲಕ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಸಂಸದ ಬಿ.ವೈ.ರಾಘವೇಂದ್ರ ಸವಾಲನ್ನು ಸ್ವೀಕರಿಸಿದ್ದಾರೆ.

    ನಾನು ದೈವಭಕ್ತ. ಆದರೆ ಗಂಟೆ ಬಾರಿಸುವುದರಲ್ಲಿ ನನಗೆ ನಂಬಿಕೆಯಿಲ್ಲ. ಹಾಗೆಂದು ಅವರ ಸವಾಲನ್ನು ಸ್ವೀಕರಿಸದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಚಂದ್ರಗುತ್ತಿ ಮಾತ್ರವಲ್ಲ ಬೇಕಿದ್ದರೆ ಅಯೋಧ್ಯೆಗೂ ಹೋಗಿ ಗಂಟೆ ಬಾರಿಸುತ್ತೇನೆ ಎಂದು ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯಿಂದ ಕೆ.ಇ.ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆಂದು ಯಡಿಯೂರಪ್ಪ ಹೇಳಿದ್ದು ನಿಜ. ಈಗ ನನ್ನ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಕೆಲವು ಮಠಾಧೀಶರು ಹಾಗೂ ಮಹಿಳೆಯರಿಗೆ ಧಮ್ಕಿ ಹಾಕುತ್ತಿರುವುದೂ ನಿಜ ಎಂದು ಈಶ್ವರಪ್ಪ ಪುನರುಚ್ಚರಿಸಿದರು.
    ಮೋದಿ-ಅಮಿತ್ ಷಾ ಬೆಂಬಲ:ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ನನಗೆ ಫೋನ್ ಮಾಡದಿರುವುದನ್ನು ಗಮನಿಸಿದರೆ ಅವರಿಬ್ಬರೂ ನನ್ನ ಸ್ಪರ್ಧೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೇ ಅರ್ಥ. ನಾನು ಗೆದ್ದ ಬಳಿಕ ಅವರ ಬಳಿ ಹೋಗುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.
    ಈಗ ನನ್ನ ಮನವೊಲಿಕೆಗೆ ಯಡಿಯೂರಪ್ಪ ಕೂಡ ಬರುವುದಿಲ್ಲ. ಯಾವ ಮುಖ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ ಎಂದು ಪ್ರಶ್ನಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ್ದಕ್ಕೆ ಪಕ್ಷ ಬಿಟ್ಟುಹೋಗಿದ್ದ ಜಗದೀಶ ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಮುಂದೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts