More

    ದುಂಡಳ್ಳಿ ಡಿಜಿಟಲ್ ಗ್ರಂಥಾಲಯದಲ್ಲಿ ಓದುವ ಬೆಳಕು

    ಶನಿವಾರಸಂತೆ: ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ದುಂಡಳ್ಳಿ ಗ್ರಾಪಂ ಹಾಗೂ ಡಿಜಿಟಲ್ ಗ್ರಂಥಾಲಯದ ಸಹಯೋಗದೊಂದಿಗೆ ಓದುವ ಬೆಳಕು ಕಾರ್ಯಕ್ರಮದಡಿ ಬಾಲ್ಯವನ್ನು ಆನಂದಿಸಿ ಬೆಳೆಯುತ್ತಾ ಸಾಗಿ ಅಭಿಯಾನ ಕಾರ್ಯಕ್ರಮವನ್ನು ಡಿಜಿಟಲ್ ಗ್ರಂಥಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

    ಮಕ್ಕಳಲ್ಲಿ ಬಾಲ್ಯವನ್ನು ಸಂಭ್ರಮಿಸುವುದು, ಒಟ್ಟಿಗೆ ಬೆಳೆಯುವ ಅವಕಾಶವನ್ನು ಪಡೆದುಕೊಳ್ಳುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ದುಂಡಳ್ಳಿ ಗ್ರಾಪಂ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾಹಿತಿ ನೀಡಿದರು.

    ಗ್ರಂಥಾಲಯಗಳಿಗೆ ಭೇಟಿ ನೀಡುವ ಮಕ್ಕಳಿಗೆ ಸಾಹಿತ್ಯ, ವಿಜ್ಞಾನ ಪುಸ್ತಕ ಸೇರಿದಂತೆ ಇತರ ಭಾಷೆಯ ಪುಸ್ತಕ, ಪ್ರಾಣಿ ಪಕ್ಷಿ ಸೇರಿದಂತೆ ವನ್ಯಜೀವಿ ಕುರಿತಾದ ಪುಸ್ತಕ, ಪ್ರಖ್ಯಾತ ಸಾಹಿತಿಗಳು ಬರೆದಿರುವ ಕೃತಿಗಳು ಮುಂತಾದ ಸಮಗ್ರ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡಲಾಯಿತು.

    ಮಕ್ಕಳಿಗೆ ಕಡಲ ತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮುಂತಾದ ದೃಶ್ಯಗಳನ್ನು ಚಿತ್ರ ಬಿಡಿಸುವ ಚಟುವಟಿಕೆ ಹಮ್ಮಿಕೊಳ್ಳಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಆಶುಭಾಷಣ ಸ್ಪರ್ಧೆ, ವೇದಿಕೆಯಲ್ಲಿ ಭಾಷಣ ಮಾಡುವುದು ಮುಂತಾದ ವಿಚಾರಗಳ ಬಗ್ಗೆ ತಿಳಿಸಿಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts