More

    ಪಿಎಫ್​​ಐ ಬ್ಯಾನ್​ ‘ಸೆಪ್ಟೆಂಬರ್​ ಕ್ರಾಂತಿ’ ಎಂದು ಬಣ್ಣಿಸಿದ ಅಲೋಕ್ ಕುಮಾರ್​; ಯಾಕೆ?

    ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿರುವುದು ಇಂದು ದೇಶದಲ್ಲೇ ದೊಡ್ಡ ಸುದ್ದಿ. ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ್ದಾರೆ.

    ಪಿಎಫ್​ಐ ನಿಷೇಧ ಕುರಿತು ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್​ ಅವರು ಭಗವಾನ್ ಕೃಷ್ಣನ ಮಾತನ್ನೂ ಉಲ್ಲೇಖಿಸಿದ್ದಾರೆ. ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ’ (ಸಜ್ಜನರನ್ನು ರಕ್ಷಿಸಿ, ದುರ್ಜನರನ್ನು ಶಿಕ್ಷಿಸಲು) ಎಂಬ ಕೃಷ್ಣನ ಮಾತನ್ನು ಉಲ್ಲೇಖಿಸಿರುವ ಅವರು ಸರ್ಕಾರ ಕೂಡ ಅದನ್ನೇ ಮಾಡಿದೆ ಎಂಬುದನ್ನು ಹೇಳಿದ್ದಾರೆ.

    ಜೊತೆಗೆ ಪಿಎಫ್​ಐ ನಿಷೇಧವನ್ನು ಅವರು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಬಣ್ಣಿಸಿದ್ದಾರೆ. ಏಕೆಂದರೆ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ಸಿಮಿ ಸಂಘಟನೆಯನ್ನೂ 2001ರ ಸೆ. 26ರಂದು ನಿಷೇಧಿಸಲಾಗಿತ್ತು. ಇದೀಗ ಪಿಎಫ್​ಐಯನ್ನು ಕೂಡ ಸೆಪ್ಟೆಂಬರ್​ನಲ್ಲೇ ನಿಷೇಧಿಸಲಾಗಿದೆ ಎಂಬುದನ್ನು ತಾರೀಕು ಸಹಿತ ಉಲ್ಲೇಖಿಸಿರುವ ಅವರು ಇದು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಜನಹಿತದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಮತ್ತು ನಾವು ಕೇವಲ ಕಾನೂನುಬಾಹಿರ ಚಟುವಟಿಕೆಗಳಿಗಷ್ಟೇ ವಿರುದ್ಧ ಎಂಬುದಾಗಿ ಹೇಳಿಕೊಂಡಿದ್ದಾರೆ.

    ಪಿಎಫ್​ಐ ಬ್ಯಾನ್ ಕುರಿತು ಅಲೋಕ್​ಕುಮಾರ್ ಅವರ ಈ ಪ್ರತಿಕ್ರಿಯೆ ಜನರಿಂದ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಈ ಟ್ವೀಟ್ ವೈರಲ್ ಆಗಲಾರಂಭಿಸಿದೆ. ಬಹಳಷ್ಟು ಮಂದಿ ಇದರ ಸ್ಕ್ರೀನ್​ಶಾಟ್​ ತೆಗೆದು ಹಂಚಿಕೊಂಡಿದ್ದು, ಕೃಷ್ಣನ ನುಡಿ, ಸರ್ಕಾರ ನಡೆ, ಅಲೋಕ್ ಪ್ರತಿಕ್ರಿಯೆ ಎಲ್ಲದರ ಬಗ್ಗೆಯೂ ಪ್ರಶಂಶೆ ವ್ಯಕ್ತಪಡಿಸುತ್ತಿದ್ದಾರೆ.

    ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ್ದೇಕೆ?: ಗೃಹ ಸಚಿವರು ನೀಡಿದ ಸ್ಪಷ್ಟನೆ ಇಲ್ಲಿದೆ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts