More

    ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

    ಬೆಂಗಳೂರು: ಭಾರಿ ಮಳೆಯಿಂದ ಸಿಲಿಕಾನ್​ ಸಿಟಿಯ ಕೆಲ ಭಾಗಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ನಗರದ ಅವ್ಯವಸ್ಥೆಗಳ ಬಗ್ಗೆ ಟೀಕಿಸಿ, ಐಟಿಬಿಟಿ ಕಂಪನಿಗಳ ಸ್ಥಳಾಂತರದ ಬಗ್ಗೆ ಮಾತನ್ನಾಡಿದ್ದಲ್ಲದೆ, “ಬೆಂಗಳೂರು ಉಳಿಸಿ” ಅಭಿಯಾನ ಪ್ರಾರಂಭಿಸಿರುವ ಐಟಿ ಕ್ಷೇತ್ರದ ದಿಗ್ಗಜ ಮೋಹನ್​ ದಾಸ್​ ಪೈ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್​ ಎನ್​.ಆರ್​., ಪೈ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಮೇಶ್​ ಎನ್​.ಆರ್​., ಐಟಿ ಕ್ಷೇತ್ರದ ದಿಗ್ಗಜ ಮೋಹನ್ ದಾಸ್ ಪೈ ಅವರು ಇತ್ತೀಚಿನ ಮಳೆ ಹಾನಿ ಮತ್ತು ಬೆಂಗಳೂರಿನ ಕೆಲ ಭಾಗಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದು, ಬೆಂಗಳೂರು ಮಹಾನಗರದಲ್ಲಿರುವ ಐಟಿಬಿಟಿ ಕಂಪೆನಿಗಳು ತೆಲಂಗಾಣ ರಾಜ್ಯಕ್ಕೆ ವಲಸೆ ಹೋಗುವುದಾಗಿ ಬ್ಲಾಕ್ ಮೇಲ್ ತಂತ್ರದ ಮಾತುಗಳಂತೆ ಹೇಳಿರುವುದಲ್ಲದೆ, ಬೆಂಗಳೂರು ಉಳಿಸಿ (Save Bengaluru) ಎಂಬ ಹೆಸರಿನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

    ಆದರೆ, ಬೆಂಗಳೂರಿನ ಪ್ರವಾಹ ಪರಿಸ್ಥಿತಿಗೆ ನಿಜವಾದ ಕಾರಣಗಳನ್ನು ತಿಳಿದಿದ್ದರೂ ಸಹ ಜಾಣ ಕುರುಡರಂತೆ ತಮ್ಮ ನೇತೃತ್ವದ ಕಂಪೆನಿಗಳ ಕರಾಳ ಮುಖಗಳನ್ನು ದುರುದ್ದೇಶಪೂರ್ವಕವಾಗಿ ಮರೆಮಾಚಿ, ಕೆಂಪೇಗೌಡರಿಂದ ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಮಹಾನಗರಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ಬರುವಂತಹ ನಡೆ ನುಡಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಪೈ ಅವರಿಗೆ ವಾಸ್ತವ ಸ್ಥಿತಿಯನ್ನು ತಿಳಿಸುವ ಮತ್ತು ಇಂದಿನ ಪ್ರವಾಹ ಪರಿಸ್ಥಿತಿಗೆ ನಿಜವಾದ ಕಾರಣಗಳನ್ನು ತಿಳಿಸುವ ಬಹಿರಂಗ ಪತ್ರವನ್ನು ಬರೆಯಲಾಗಿದೆ. ಇದರಲ್ಲಿ ಏನಾದರೂ ತಪ್ಪು ಮಾಹಿತಿಗಳು ಇದ್ದಲ್ಲಿ ಅಥವಾ ಅವರ ಆಕ್ಷೇಪಣೆಗಳು ಇದ್ದಲ್ಲಿ ಬಹಿರಂಗ ಚರ್ಚೆಗೆ ಬರಬಹುದು ಎಂದಿದ್ದಾರೆ.

    ರಮೇಶ್ ಎನ್.ಆರ್. ಅವರು ಬರೆದಿರುವ ಬಹಿರಂಗ ಪತ್ರ ಈ ಕೆಳಕಂಡಂತಿದೆ….

    ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

    ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

    ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

    ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts