More

    ಸಮಸ್ಯೆಗಳಿಂದಾಗಿ ರೈತರು ಕೃಷಿಯಿಂದ ವಿಮುಖ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬೇಸರ

    ಮಂಡ್ಯ: ಇತ್ತೀಚಿನ ದಿನಗಳಲ್ಲಿ ಹಲವು ಸಮಸ್ಯೆಗಳಿಂದಾಗಿ ಬಹಳಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.
    ನಗರದ ಸರ್‌ಎಂವಿ ಕ್ರೀಡಾಂಗಣ ಸಮೀಪದ ಸಾವಯವ ಕೃಷಿಕರ ಮಳಿಗೆ ಆವರಣದಲ್ಲಿ ನಂಜಮ್ಮ ಮೋಟ್ಟೆಗೌಡ ಚಾರಿಟೇಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾವಯವ ಕೃಷಿಕರಿಗೆ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಒಂದಷ್ಟು ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಿಕೆಯಿಂದ ಭೂಮಿಯ ಫಲವತ್ತೆಯನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ವರ್ಗ ನಾವು ನೈಸರ್ಗಿಕವಾಗಿ ಅಥವಾ ಸಾವಯವ ಕೃಷಿ ಬೆಳೆಯನ್ನು ತೆಗೆದು ಒಳ್ಳೆಯ ಬದುಕನ್ನು ಕಟ್ಟಿಕೊಂಡು ಜನರ ಆರೋಗ್ಯವನ್ನು ರಕ್ಷಿಸಲು ಸಂಕಲ್ಪಿಸಿರುವುದನ್ನು ನೋಡಬಹುದಾಗಿದೆ ಎಂದರು.
    ಪ್ರಸ್ತುತ್ತ ಕಾಲಘಟ್ಟದ ದಿನಗಳಲ್ಲಿ ರೈತರ ಆತ್ಮಹತ್ಯೆಗಳ ಪ್ರಕರಣ ಕಡಿಮೆಯಾಗಿದ್ದರೂ ಸಂಪೂರ್ಣ ನಿಂತಿಲ್ಲ. ವೈಜ್ಞಾನಿಕ ಬೆಲೆ ನೀಡಿದರೆ ರೈತರು ಸಂಪೃತ್ತರಾಗುತ್ತಾರೆ. ಸರ್ಕಾರಗಳು ಇದರತ್ತ ಗಮನ ಹರಿಸಬೇಕಿದೆ. ಈ ಭೂಮಿ ಮೇಲೆ ಅನ್ನನೀಡುವ ರೈತರು ಮತ್ತು ಗಡಿಕಾಯವ ಸೈನಿಕರು ಬಹಳ ಮುಖ್ಯ. ಈ ಇಬ್ಬರೂ ಸಂತೋಷವಾಗಿದ್ದರೆ ಮಾತ್ರ ದೇಶವು ನೆಮ್ಮದಿಯಾಗಿರುತ್ತದೆ ಎಂದು ನುಡಿದರು.
    ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು ಮಾತನಾಡಿ, ಇಂದಿನ ದಿನಗಳಲ್ಲಿ ದೊಡ್ಡ ಉದ್ಯೋಗಸ್ಥರು ತಮ್ಮ ಪಾಲಕರನ್ನು ವೃದ್ದಾಶ್ರಮಗಳಿಗೆ ಕಳಿಸುತ್ತಿರುವುದು ಹೆಚ್ಚಾಗುತ್ತಿದೆ. ಆದರೆ ಯಾವ ಬಡ ರೈತಕುಟುಂಬವು ತಂದೆ-ತಾಯಿಯನ್ನು ಆಶ್ರಮಕ್ಕೆ ಕಳಿಸಿರುವ ನಿದರ್ಶನವಿಲ್ಲ ಎಂದು ನುಡಿದರು.
    ನೈಸರ್ಗಿಕ ಕೃಷಿಕ ಮಾರ್ಗದರ್ಶಕ ಅನಂತರಾವ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಭಾರತ ಸೇವಾದಳದ ಸಂತೋಷ್, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್‌ಕುಮಾರ್, ಮನ್‌ಮುಲ್ ನಾಮನಿರ್ದೇಶಕಿ ಸುಜಾತಾಕೃಷ್ಣ , ಗಾಯಕ ಬಸವರಾಜು ಇತರರಿದ್ದರು.
    ಇದೇ ವೇಳೆ ಸಾವಯವ ಕೃಷಿಕರಾದ ಮಲ್ಲಿಗೆರೆ ಎಂ.ಟಿ.ವೆಂಕಟೇಶ್, ಬೂದನೂರು ವಿಕಾಸ್, ಅಂಬರಹಳ್ಳಿ ರಾಜಣ್ಣ, ಚೆನ್ನಪ್ಪನದೊಡ್ಡಿ ದೇವೇಗೌಡ, ಹೊನ್ನನಾಯಕನಹಳ್ಳಿ ನಿರಂಜನ್ ಅವರನ್ನು ಅಭಿನಂದಿಸಲಾಯಿತು. ಬಳಿಕ ಸಾವಯವ ಕೃಷಿ-ಆದಾಯ ಗಳಿಕೆ, ಮಣ್ಣು ಆರೋಗ್ಯ, ಆರೋಗ್ಯಕರ ಆಹಾರ ಕುರಿತು ಸಂವಾದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts