More

    ಸಂವಿಧಾನದಲ್ಲಿದೆ ಶರಣರ ವಚನಗಳ ಆಶಯ

    ಶಹಾಬಾದ್: ಸಮಸಮಾಜ ನಿರ್ಮಾಣ ಶರಣರ ಆಶಯವಾಗಿತ್ತು, ಅಂತಹ ಶರಣರ ಆಶಯವನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠ ಕಾರ್ಯ ಮಾಡಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಹೇಳಿದರು.

    ರಾವೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ ೪೧ನೇ ವಾರ್ಷಿಕೋತ್ಸವ ಉಧ್ಘಾಟಿಸಿ ಮಾತನಾಡಿ, ಶಿಕ್ಷಣದ ಜತೆಗೆ ಮಕ್ಕಳಲ್ಲಿ ಮೌಲ್ಯ ತುಂಬುವ ಪ್ರಯತ್ನ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ. ಡಿಗ್ರಿ ಪಡೆದ ವಿದ್ಯಾವಂತರಲ್ಲಿ ಸಂಸ್ಕಾರವಿಲ್ಲದಿದ್ದರೆ, ಡಿಗ್ರಿಗೆ ಅರ್ಥವಿಲ್ಲ. ಕಾನ್ವೆಂಟ್ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

    ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಹಣ ಮಾಡುವುದಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸುವವರೇ ಹೆಚ್ಚಿರುವ ಇಂದಿನ ಕಾಲದಲ್ಲಿ, ರಾವೂರಿನಲ್ಲಿ ಸೇವೆಯ ಜತೆಗೆ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ ಕೆಲಸ ಮಾಡುತ್ತಿದೆ. ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ನಿರಂತರ ಚಟುವಟಿಕೆ ನಡೆಸಲಾಗುತ್ತಿದೆ. ಪಾಲಕರು ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಹೊರಬಂದು, ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

    ಸಂಸ್ಥೆ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಐ.ಬಡಿಗೇರ ಸ್ವಾಮಿ ವಿವೇಕನಂದರ ಕುರಿತು ಮಾತನಾಡಿದರು.
    ಗ್ರಾಪಂ ಅಧ್ಯಕ್ಷೆ ಸುಮಿತ್ರ ತುಮಕೂರ, ಎಸಿಸಿ ದಕ್ಷಿಣ ವಲಯದ ಕ್ಲಸ್ಟರ್ ಹೆಡ್ ಅನೀಲ್ ಗುಪ್ತ, ಸಂಸ್ಥೆ ಉಪಾಧ್ಯಕ್ಷ ಚನ್ನಣ್ಣ ಬಾಳಿ, ಪ್ರಮುಖರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಶಿವಲಿಂಗಪ್ಪ ವಾಡೇದ, ಅಬ್ದುಲ್ ಅಜೀಜ್ ಸೇಠ್, ಅಣ್ಣಾರಾವ ಬಾಳಿ, ಸಿದ್ರಾಮಪ್ಪ ದೇಸಾಯಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಈಶ್ವರ ನಡುವಿನಕೇರಿ, ಶರಣು ಜ್ಯೋತಿ, ಚಂದ್ರಶೇಖರ ಹಾವೇರಿ, ಬಸವರಾಜ ಕೆರಳ್ಳಿ, ಯುನೂಸ್ ಪ್ಯಾರೇ, ಅಬ್ದುಲ್ ಸಲೀಮ್ ಪ್ಯಾರೆ ಇತರರಿದ್ದರು.

    ಈಶ್ವರಗೌಡ ಪಾಟೀಲ್, ಭುವನೇಶ್ವರಿ ನಿರೂಪಣೆ ಮಾಡಿದರು. ಈಶ್ವರ ಬಾಳಿ ವರದಿ ವಾಚನ ಮಾಡಿದರು. ಈರಣ್ಣ ಹಳ್ಳಿ ವಚನ ಗಾಯನ ಮಾಡಿದರು. ಸಿದ್ದಲಿಂಗ ಬಾಳಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಮಲ್ಲಗಂಭ, ಸೇರಿ ವಿವಿಧ ಶಾರೀರಿಕ, ಸಾಂಸ್ಕೃತಿಕ ಪ್ರದರ್ಶನ ನೋಡುಗರ ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts