More

    ಲಿಪಿಕಾರ ಗುಣಭದ್ರನ ಪೂರ್ವಜ ಸಮಂತಭದ್ರನ ಅವತಾರದಲ್ಲಿ ರವಿಚಂದ್ರನ್!

    ಬೆಂಗಳೂರು: ಜಟ್ಟ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದ ಕೆಲಸಗಳು ಚುರುಕುಗೊಂಡಿವೆ. ವಿಜಯದಶಮಿ ದಿನದಂದು ಸೆಟ್ಟೇರುವ ಈ ಸಿನಿಮಾಗೆ ‘ಕನ್ನಡಿಗ’ ಎಂಬ ಶೀರ್ಷಿಕೆ ಇಡಲಾಗಿದೆ. ಲಿಪಿಕಾರ ಗುಣಭದ್ರನಾಗಿ ಕ್ರೇಜಿಸ್ಟಾರ್ ರವಿಚಂದ್ರನ್​ ಹೊಸ ಥರಹದ ವೇಷ ತೊಟ್ಟಿದ್ದು, ಇತ್ತೀಚೆಗಷ್ಟೇ ಅವರ ಆ ಲುಕ್ ಹೊರಬಿದ್ದಿತ್ತು. ಇದೀಗ ಮತ್ತೊಂದು ಲುಕ್​ ಕುತೂಹಲ ಮೂಡಿಸುತ್ತಿದೆ.

    ಇದನ್ನೂ ಓದಿ: ಟಾಮ್ ಆ್ಯಂಡ್ ಜೆರ್ರಿಗೆ ಸಿದ್ ಕಂಠ; ಕನ್ನಡಕ್ಕೆ ಬಂದ ತೆಲುಗು ಗಾಯಕ

    ಲಿಪಿಕಾರ ಗುಣಭದ್ರನ ಪೂರ್ವಜ ಸಮಂತಭದ್ರನ ಅವತಾರದಲ್ಲಿ ರವಿಚಂದ್ರನ್​ ಎಂಟ್ರಕೊಟ್ಟಿದ್ದು, ವಾರಿಯರ್ ಲುಕ್​ನಲ್ಲಿ ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದಾರೆ. ಚೆನ್ನಭೈರಾದೇವಿ ಸೇನೆಯ ಮುಖ್ಯಸ್ಥನಾಗಿ ರವಿಚಂದ್ರನ್​ ಅವರ ಪಾತ್ರ ತೆರೆದುಕೊಳ್ಳಲಿದೆ. ಭವಾನಿ ಪ್ರಕಾಶ್ ಮಹಾರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಯುದ್ಧದ ಭಾಗ ಬಾಕಿ ಇದೆ.

    ಇದೇ ಚಿತ್ರದಲ್ಲಿ ಮತ್ತೊಂದು ವಿಶೇಷ ಪಾತ್ರ ಮಾಡಲಿರುವ ಜೇಮಿ ಅಲ್ಟರ್​ ಸಹ ಈಗಾಗಲೇ ತಂಡ ಸೇರಿಕೊಂಡಿದ್ದು, ಸಾಗರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1850ರ ಬ್ರಿಟಿಷ್ ಮತ್ತು ಪೋರ್ಚುಗೀಸರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಕನ್ನಡದ ವಿದ್ವಾಂಸನಾಗಿ ರವಿಚಂದ್ರನ್ ಕಾಣಿಸಿದರೆ, ಖ್ಯಾತ ನಟ ಟಾಮ್ ಅಲ್ಟರ್ ಅವರ ಪುತ್ರ ಜೇಮಿ ಅಲ್ಟರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿ, ಜಾರ್ಜ್ ಫರ್ಡಿನಾಂಡ್ ಕಿಟೆಲ್ ಪಾತ್ರ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ ‘ವೆಟರನ್’

    ಒಂದಷ್ಟು ಅಧ್ಯಯನ ನಡೆಸಿ, ನೈಜ ಘಟನೆಯೊಂದನ್ನು ಸಿನಿಮಾ ಮೂಲಕ ತೆರೆಮೇಲೆ ತರುವ ಪ್ರಯತ್ನವಿದು. ಬರಹಗಾರನ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ಕನ್ನಡ ಭಾಷೆಯ ಉಳಿವಿಗಾಗಿ ಹೇಗೆ ಶ್ರಮಿಸುತ್ತಾನೆ ಎಂಬುದೇ ಈ ಚಿತ್ರದ ಕಥೆ’ ಎಂದು ನಿರ್ದೇಶಕರು ಈ ಹಿಂದೆಯೇ ಹೇಳಿಕೊಂಡಿದ್ದರು. ಈಗಾಗಲೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿದಿದ್ದು, ಸದ್ಯ ಶಿವಮೊಗ್ಗದ ಸಾಗರದಲ್ಲಿ ಬೀಡು ಬಿಟ್ಟಿದ್ದಾರೆ. ಒಂದಷ್ಟು ಸೆಟ್​ಗಳನ್ನೂ ಈ ಚಿತ್ರಕ್ಕಾಗಿ ಸಿದ್ಧಪಡಿಸಲಾಗಿದೆ.

    ತೆಲುಗು ಬಿಗ್​ಬಾಸ್​ನಲ್ಲಿ ಸುದೀಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts