More

    ಮತಗಟ್ಟೆಯ ಮೇಲ್ಚಾವಣಿ ಕುಸಿತ; ತಪ್ಪಿದ ಅನಾಹುತ

    ರಟ್ಟಿಹಳ್ಳಿ: ತೀವ್ರವಾದ ಮಳೆ- ಗಾಳಿಗೆ ತಾಲೂಕಿನ ಕುಡಪಲಿ ಗ್ರಾಮದ ಮತಗಟ್ಟೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಬಿದ್ದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.

    ಕುಡಪಲಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ 112 ಸಂಖ್ಯೆಯ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆ‌ ಹಾಗೂ ಗಾಳಿಗೆ ಶಾಲೆಯ ಗೋಡೆ ಹಾಗೂ ಮೇಲ್ಚಾವಣಿ‌ ಕುಸಿದು ಬಿದ್ದಿದೆ. ಮೇಲಿನ ತಗಡು ಹಾಗೂ ಹಂಚುಗಳು ಹಾರಿ ಹೋಗಿವೆ.

    ಈ ಮತಗಟ್ಟೆ ನಾಲ್ಕು ಸಾವಿರ ಮತದಾರರನ್ನು ಹೊಂದಿದೆ. ಅದೃಷ್ಟವಶಾತ್ ಈ ದುರ್ಘಟನೆ ವೇಳೆ ಸ್ಥಳದಲ್ಲಿ ಯಾರೂ‌ ಇರಲಿಲ್ಲ. ಒಂದು ವೇಳೆ ಮತದಾನದ ದಿನ ಘಟನೆ ನಡೆದಿದ್ದರೆ ದೊಡ್ಡ ಅವಘಡ ಉಂಟಾಗುವ ಸಂಭವವಿತ್ತು.

    ಮತಗಟ್ಟೆ ಸ್ಥಳಾಂತರ
    ಮಂಗಳವಾರ ಮತಗಟ್ಟೆ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಶಶಿಧರ ಮತಗಟ್ಟೆಯನ್ನು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ ಸ್ಥಳಾಂತರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts