More

    ಪಡಿತರ ಚೀಟಿಯಲ್ಲಿನ ಗೊಂದಲ ಸರಿಪಡಿಲು ಆಗ್ರಹಿಸಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಲಾನುಭವಿಗಳಿಗೆ ನೇರ ಹಣ ವರ್ಗಾವಣೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಹೊಸ ಪಡಿತರ ಚೀಟಿಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಭ ಮತ್ತು ಗೊಂದಲವನ್ನು ಸರಿ ಪಡಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಸಮಿತಿ ಸೋಮವಾರ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ತಾಲೂಕು ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
    ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸ್ಲಂ ಸಮಿತಿಯ ಅಧ್ಯ ಇಮ್ತಿಯಾಜ ಮಾನ್ವಿ ಮಾತನಾಡಿ, ಸರ್ಕಅರ ಜಾರಿ ತಂದಿರುವ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಡಿಯಲ್ಲಿ ರಾಜ್ಯದ ಪ್ರತಿಯೊಂದು ಬಿಪಿಎಲ್​ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸರ್ಕಾರ ಗೊಷಣೆ ಮಾಡಿದೆ. ರಾಜ್ಯದಲ್ಲಿ ಅಕ್ಕಿ ಕೊರತೆಯಿಂದ ಬಿಪಿಎಲ್​ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಸದಸ್ಯನಿಗೆ ಅಕ್ಕಿ ಜೊತೆಗೆ 170 ರೂ.ಗಳನ್ನು ನೇರವಾಗಿ ಕುಟುಂಬದ ಮುಖಂಡರ ಬ್ಯಾಂಕ ಖಾತೆಗೆ ಜಮಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಸಾವಿರಾರು ಕುಟುಂಬಗಳಿಗೆ ಈ ವರೆಗೊ ಪಡಿತರವು ಸಿಗದೇ, ಹಣವು ಸಿಗದೇ ಪ್ರತಿನಿತ್ಯ ಆಹಾರ ಇಲಾಖೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಪಡಿತರ ಅಂಗಡಿಗಳಲ್ಲಿ ವೃದ್ದರು ಹಾಗೂ ಕಾಮಿರ್ಕರು ಬಯೋ ಮೆಟ್ರಿಕ್​ ಪಡೆಯಲಾಗದೇ ಆಹಾರ ಇಲಾಖೆ ಅಲೆದಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಇಲಾಖೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
    ಗ್ರಾಮ ಒನ್​ ನಾಗರೀಕ ಸೇವಾ ಕೇಂದ್ರ, ಕರ್ನಾಟಕ ಒನ್​ ಹಾಗೂ ವಿವಿಧ ಸೇವಾ ಕೇಂದ್ರಗಳ ಮೂಲಕ ಪಡಿತರ ಅಜಿರ್ ಸಲ್ಲಿಸಲು ಸರ್ಕಾರ ಅಲ್ಪಾವಧಿ ಸಮಯ ನೀಡಿದ್ದರಿಂದ ಹಾಗೂ ಸೇವಾ ಕೇಂದ್ರಗಳಲ್ಲಿ ಅಜಿರ್ ಸಲ್ಲಿಸಲು ಸಾಧ್ಯವಾಗದೇ ಇದ್ದು, ಸಾವಿರಾರು ಜನರು ಹೊಸ ಪಡಿತರಕ್ಕೆ ಅಜಿರ್ ಸಲ್ಲಿಸಲು ಸಮಸ್ಯೆ ಎದುರಾಗಿದೆ. ರಾಜ್ಯದ ಆಹಾರ ಇಲಾಖೆಯಿಂದ ಹೊಸ ಪಡಿತರ ಚೀಟಿಗಳಿಗೆ ಅಜಿರ್ ಹಾಕಲು ಸರಿಯಾದ ಸುತ್ತೋಲೆ ಇಲ್ಲದೇ, ಸರಿಯಾದ ಮಾಹಿತಿ ಇಲ್ಲದೇ ಕಾರಣ ಸಾವಿರಾರು ಬಡ ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಮಾನ್ವಿ ಆರೋಪಿಸಿದರು.
    ಅಶೋಕ ಕುಸಬಿ, ಶಂಕ್ರಪ್ಪ ರೋಣ, ವಿಶಾಲ ಹಿರೇಗೌಡ್ರ, ವಂದನಾ ಶ್ಯಾವಿ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ದುರ್ಗಪ್ಪ ಮಣಿವಡ್ಡರ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ ಹಲವರು ಒರತಿಭಟನೆಯಲ್ಲಿ ಭಾಗಿ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts