More

    ರಶ್ಮಿಕಾ VS ಪೂಜಾ: ಸಿನಿಮಾ ಆಯ್ತು, ಈಗ ಜಾಹೀರಾತು ವಿಷ್ಯದಲ್ಲೂ ಕಿತ್ತಾಟ

    ಸಿನಿಮಾ ಆಫರ್​​ಗಳ ವಿಚಾರದಲ್ಲಿ ನಟಿಮಣಿಯರ ನಡುವೆ ಪೈಪೊಟಿ ಇರುವುದು ಸಹಜ. ಆದರೆ, ಕೆಲವೊಮ್ಮೆ ಅದು ಕೋಲ್ಡ್​​ವಾರ್​ಗೆ ಕಾರಣವಾಗುತ್ತೆ. ಇದೇ ರೀತಿಯ ಕೋಲ್ಡ್​​ವಾರ್ ಸದ್ಯ ಇಬ್ಬರು ಖ್ಯಾತ ನಟಿಯರ ನಡುವೆ ನಡೆಯುತ್ತಿದೆ. ಒಬ್ಬರು ‘ಬುಟ್ಟ ಬೊಮ್ಮ’ ಆದರೆ, ಮತ್ತೊಬ್ಬರು ‘ನ್ಯಾಷನಲ್ ಕ್ರಶ್’. ಹೌದು, ಈ ಇಬ್ಬರು ಕನಡದ ಬೆಡಗಿಯರು ತುಂಬಾ ಸಿನಿಮಾಗಳನ್ನು ಸೌತ್​ನಲ್ಲಿ ಮಾಡಿದ ನಂತರ ಇದೀಗ ಬಾಲಿವುಡ್​​ನಲ್ಲಿ ಮಿಂಚುತಿದ್ದಾರೆ. ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ನಟಿಸಲು ಯಾವ ನಟಿಯನ್ನು ಆಯ್ಕೆ ಮಾಡಬೇಕು ಎಂಬ ವಿವಾರದಲ್ಲಿ ಪೂಜಾ ಮತ್ತು ರಶ್ಮಿಕಾ ಮಂದಣ್ಣ ಹೆಸರುಗಳು ಪೈಪೊಟಿಯಾಗಿ ಕೇಳಿಬರುತ್ತವೆ. ಇದೀಗ, ಜಾಹೀರಾತುಗಳ ವಿಚಾರದಲ್ಲೂ ನಟಿಯರಿಬ್ಬರ ನಡುವೆ ಕಠಿಣ ಸ್ಪರ್ಧೆ ನಡೆಯುತ್ತಿದೆ. ಅಂದಹಾಗೆ, ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಮಂದಣ್ಣ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ 4 ಕೋಟಿ. ನಟಿ ಪೂಜಾ ಹೆಗ್ಡೆ ಒಂದು ಸಿನಿಮಾಗೆ ಪಡೆಯುವ ಸಂಭಾವನೆ 3 ಕೋಟಿ. ಹೀಗಿದ್ದರೂ, ನಟಿ ರಶ್ಮಿಕಾ ತಮಗೆ ಇರುವ ಅಭಿಮಾನಿಗಳ ಕಾರಣದಿಂದ ಪೂಜಾ ಗಿಂತ ಹೆಚ್ಚು ಸಿನಿಮಾ ಆಫರ್​ಗಳನ್ನು ಪಡೆಯುತ್ತಿದ್ದಾರೆ

    ರಶ್ಮಿಕಾ VS ಪೂಜಾ: ಸಿನಿಮಾ ಆಯ್ತು, ಈಗ ಜಾಹೀರಾತು ವಿಷ್ಯದಲ್ಲೂ ಕಿತ್ತಾಟ

    ಆದರೆ, ಸಿನಿಮಾಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ರಶ್ಮಿಕಾ, ಜಾಹೀರಾತುಗಳಿಗೆ ಮಾತ್ರ ತುಂಬಾ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರಂತೆ. ಮತ್ತೊಂದೆಡೆ, ಪೂಜಾ ಚಿತ್ರಗಳಿಗೆ ರಶ್ಮಿಕಾಗಿಂತ ಕಡಿಮೆ ಸಂಭಾವನೆ ಪಡೆದರೂ, ಜಾಹೀರಾತುಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ. ಹಾಗಾಗಿ, ರಶ್ಮಿಕಾಗೆ ಇದು ಪ್ಲಸ್ ಪಾಯಿಂಟಾಗಿ ಜಾಹೀರಾತಿಗೆ ಕೂಡ ದೊಡ್ಡ ದೊಡ್ಡ ಬ್ರ್ಯಾಂಡ್​ಗಳು ರಶ್ಮಿಕಾರನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಹಾಗಾಗಿ, ಪೂಜಾ ಹೆಗ್ಡೆಯನ್ನು ಬಿಟ್ಟು ರಶ್ಮಿಕಾ ಅವರನ್ನು ಬ್ರ್ಯಾಂಡ್​ಗಳು ಆಯ್ಕೆ ಮಾಡಿಕೊಳ್ಳುತ್ತಿರುವುದು ನಟಿಯರಿಬ್ಬರ ನಡುವಿನ ಕೋಲ್ಡ್​​ವಾರ್ ಅನ್ನು ಹೆಚ್ಚಿಸಿದೆ. ಇದಲ್ಲದೇ, ರಶ್ಮಿಕಾ, ಪೂಜಾ ಅವರ ಈ ಹವಾ ಕೆಲವೇ ಕೆಲವು ದಿನಗಳು ಮಾತ್ರ ಎಂಬ ಮಾತುಗಳು ಕೇಳಿಬರುತ್ತಿವೆ.
    ಏಕೆಂದರೆ, ದಕ್ಷಿಣದಲ್ಲಿ ಇದೀಗ ಬಹಳಷ್ಟು ಹೆಸರು ಮಾಡುತ್ತಿರುವ ಮತ್ತೊಂದು ಮಂಗಳೂರು ಮೂಲದ ಕನ್ನಡ ಬೆಡಗಿ ಅಂದರೆ ಅದು ಕೃತಿ ಶೆಟ್ಟಿ. 18 ವರ್ಷದ ಗುಳಿ ಕೆನ್ನೆ ಸುಂದರಿ ಕೃತಿ ಶೀಘ್ರದಲ್ಲೇ ರಶ್ಮಿಕಾ, ಪೂಜಾ ಹೆಗ್ಡೆಯನ್ನು ಹಿಂದಿಕ್ಕಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೌದು, ಕೃತಿ ಶೆಟ್ಟಿ ಅವರ ಮೊದಲ ತೆಲುಗು ಸಿನಿಮಾ ಉಪ್ಪೆನಾಬರೋಬ್ಬರಿ 100 ಕೋಟಿ ರೂ. ಬಾಕ್ಸ್ ಆಫೀಸ್​​ನಲ್ಲಿ‘ ಗಳಿಸಿದೆ. ಇದರ ಪರುಣಾಮ, ನಿರ್ಮಾಪಕರು ಕೃತಿ ಅವರನ್ನು ಲಕ್ಕಿ ಹ್ಯಾಂಡ್ ಎಂದು ಭಾವಿಸಿದ ಕಾರಣ, ಶೆಟ್ಟಿಗೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಸಾಲು ಸಾಲು ಸಿನಿಮಾ ಆಫರ್​ಗಳು ಲಭಿಸುತ್ತಿವೆ

    ತೆಲಂಗಾಣದ ಥಿಯೇಟರ್​ ಪಾರ್ಕಿಂಗ್​ ದರಕ್ಕಿಂತ ಕಡಿಮೆ ಆಂಧ್ರದ ಸಿನಿಮಾ ಟಿಕೆಟ್​ ಬೆಲೆ: ಬಾಲ್ಕನಿಗೆ 20 ರೂ.

    ಶ್ರೀಮಂತ ಅಥವಾ ಬಡವ, ಡೇಟಿಂಗ್​ಗೆ ನಿಮ್ಮ ಆಯ್ಕೆ ಯಾರು? ಹರ್ನಾಜ್​ ಉತ್ತರಕ್ಕೆ ಮೆಚ್ಚುಗೆಯ ಮಹಾಪೂರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts