More

    ಬೆಂಗ್ಳೂರಲ್ಲಿ ರ‍್ಯಾಪಿಡೋ ಸವಾರನ ದುರ್ವರ್ತನೆ: ಬೈಕ್​ನಿಂದ ಜಿಗಿದು ಕಾಮುಕನಿಂದ ಪಾರಾದ ಯುವತಿ

    ಬೆಂಗಳೂರು: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಚಾಲಕನ ಲೈಂಗಿಕ ಕಿರುಕುಳವನ್ನು ತಾಳಲಾರದೇ ಯುವತಿಯೊಬ್ಬಳು ಬೈಕ್​ನಿಂದ ಜಿಗಿದು ಗಾಯಗೊಂಡಿರುವ ಆತಂಕಕಾರಿ ಘಟನೆ ಯಲಹಂಕ ನ್ಯೂ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಈ ಘಟನೆ ಇದೇ ತಿಂಗಳು 21ರಂದು ನಡೆದಿದೆ. ಸಂತ್ರಸ್ತ ಯುವತಿ ಬೈಕ್​ನಿಂದ ಜಿಗಿದಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣದ ಆರೋಪಿ ಚಾಲಕ 27 ವರ್ಷದ ದೀಪಕ್​ ರಾವ್​ ಎಂಬಾತನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಇದನ್ನೂ ಓದಿ: ಎಲ್ಲಿಯೇ ಕೊಲೆಯಾದರೂ ವಿನಯ್​ ಕುಲಕರ್ಣಿ ಹೆಸರು ಹೇಳುವುದ್ಯಾಕೆ? ಪತ್ನಿ ಶಿವಲೀಲಾ‌ ಪ್ರಶ್ನೆ

    Rapido Bike taxy 1

    ಮೊಬೈಲ್​ ಕಸಿದುಕೊಂಡ

    ಯಲಹಂಕ ಉಪನಗರದಿಂದ ಇಂದಿರಾನಗರಕ್ಕೆ ತೆರಳಲು ಯುವತಿ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಬುಕ್​ ಮಾಡಿದ್ದರು. ಸುಮಾರು 11.10ರ ಸುಮಾರಿಗೆ ಬೈಕ್ ಸವಾರ ಸ್ಥಳಕ್ಕೆ ಆಗಮಿಸಿದನು. ಬಳಿಕ ಒಟಿಪಿ ಪಡೆಯುವ ನೆಪದಲ್ಲಿ 30 ವರ್ಷದ ಸಂತ್ರಸ್ತ ಯುವತಿಯ ಮೊಬೈಲ್‌ ಅನ್ನು ಸವಾರ ಕಸಿದುಕೊಂಡಿದ್ದ. ಪ್ರಯಾಣ ಆರಂಭಿಸುತ್ತಿದ್ದಂತೆ ಆಕೆಯೊಂದಿಗೆ ಆತ ಅನುಚಿತವಾಗಿ ವರ್ತಿಸತೊಡಗಿದ.

    Rapido Bike taxy 2

    ಮಾರ್ಗ ಬದಲಿಸಿದ

    ಇಂದಿರಾ ನಗರಕ್ಕೆ ಆಗಮಿಸುವ ಮಾರ್ಗ ಮಧ್ಯೆ ಆತ ದೊಡ್ಡ ಬಳ್ಳಾಪುರದ ಕಡೆಗೆ ಮಾರ್ಗ ಬದಲಿಸಿದ್ದ. ಅನುಮಾನಗೊಂಡು ಯುವತಿ ಪ್ರಶ್ನೆ ಮಾಡಿದ್ದಕ್ಕೆ ಏನೂ ಉತ್ತರ ನೀಡಿದ ಸವಾರ ಬೈಕ್​ ಅನ್ನು ವೇಗವಾಗಿ ಓಡಿಸಲು ಆರಂಭಿಸಿದ. ಇದರಿಂದ ಆತಂಕಗೊಂಡ ಯುವತಿ ನಾಗೇನಹಳ್ಳಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಬೈಕ್​ ವೇಗದಲ್ಲಿರುವಾಗಲೇ ಜಿಗಿದಳು. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿದಾಗ ಬೈಕ್​ ಸವಾರ ಪರಾರಿಯಾಗಿದ್ದ. ಬಳಿಕ ಯುವತಿ ಸ್ಥಳೀಯರ ಮೊಬೈಲ್​ ಪಡೆದು ಸ್ನೇಹಿತರಿಗೆ ಕರೆ ಮಾಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಿದಳು.

    Rapido Bike taxy 3

    ಆರೋಪಿ ಅಂದರ್​

    30 ವರ್ಷದ ಸಂತ್ರಸ್ತ ಯುವತಿ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೈಕ್​ನಿಂದ ಜಿಗಿದ ಪರಿಣಾಮ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಬೈಕ್​ ಟ್ಯಾಕ್ಸಿ ಸವಾರ ದೀಪಕ್​ ರಾವ್​ ಎಂಬಾತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಕ್ತದಲ್ಲಿ ಬರೆದುಕೊಡುತ್ತೇನೆ, ನಂಬಿಕೆದ್ರೋಹಿ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸುವುದೊಂದೇ ಗುರಿ: ಬಿಎಸ್​ವೈ

    Rapido Bike taxy 4

    ನ್ಯಾಯಾಂಗ ಬಂಧನ

    ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೀಪಕ್​ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಪ್ರಕರಣ ದಾಖಲಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts