More

    ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ; ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

    ರಾಣೆಬೆನ್ನೂರ: ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. 12ನೇ ಶತಮಾನದಿಂದಲೂ ಬಸವಣ್ಣನವರು ಕೂಡ ಸಾಮೂಹಿಕ ವಿವಾಹ ಮಾಡುತ್ತಿದ್ದರು ಎಂದು ನರಸೀಪುರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
    ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನವಾಗಿ ನಿರ್ಮಿಸಿದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನ ಉದ್ಘಾಟನೆ, ಶ್ರೀ ಬ್ರಹ್ಮ ಲಿಂಗೇಶ್ವರ, ನಾಗದೇವತೆ, ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜದ ಜನತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಂದಾಗ ಅರ್ಥಿಕವಾಗಿ ಬೆಳೆಯಲು ಸಾಧ್ಯ. ವಿನಾಕಾರಣ ಯಾವುದಾದರೂ ದುಶ್ಚಟಗಳ ದಾಸರಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.
    ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ನಂಬಿದವರನ್ನು ದಡ ಸೇರಿಸುವ ಸಮಾಜ ಅಂಬಿಗ ಸಮಾಜ. ರಾಜ್ಯಾದ್ಯಂತ ಅಂಬಿಗ ಸಮಾಜದವರನ್ನು ಎಸ್‌ಟಿಗೆ ಸೇರಿಸಬೇಕು ಎಂಬ ಕೂಗು ಬಹುದಿನದಿಂದ ಇದೆ. ಬಿಜೆಪಿ ಸರ್ಕಾರ ಈ ಕುರಿತು ಮುಂದಿನ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
    ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಪ್ರಮುಖರಾದ ಸಿದ್ದು ಚಿಕ್ಕಬಿದರಿ, ಬಸವರಾಜ ಹುಲ್ಲತ್ತಿ, ಮಲ್ಲಿಕಾರ್ಜುನ ಮಸಿಯಪ್ಪನವರ, ಕೊಟ್ರೇಶ ಕುದರಿಹಾಳ, ಕರಬಸಪ್ಪ ಬಾರ್ಕಿ, ನಾಗರಾಜ ಬಾರ್ಕಿ, ದಿಳ್ಳೆಪ್ಪ ಬಾರ್ಕಿ, ರಾಮಚಂದ್ರ ಐರಣಿ, ಹಾಲೇಶ ಜಾಡರ, ಕರಬಸವ ಹೂಗಾರ ಮತಿತ್ತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts