More

    ರಾಜಕೀಯಕ್ಕೆ ಬಲಿಪಶುಗಳಾಗಬೇಡಿ … ಅಭಿಮಾನಿಗಳಿಗೆ ರಮ್ಯಾ ಸಲಹೆ

    ಒಂದು ಕಾಲಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿದ್ದವರು ನಟಿ ರಮ್ಯಾ. ಆದರೆ, ಸತತ ಟ್ರೋಲ್​ಗಳಿಂದಾಗಿ, ಅವರು ಸೋಷಿಯಲ್​ ಮೀಡಿಯಾದಿಂದ ಎಕ್ಸಿಟ್​ ಆಗಿದ್ದರು. ಒಂದು ವರ್ಷಕ್ಕೂ ಹೆಚ್ಚು ಸಮಯ ಸೋಷಿಯಲ್ ಮೀಡಿಯಾದಿಂದ ದೂರ ಇದ್ದ ರಮ್ಯಾ, ಕೆಲವು ದಿನಗಳ ಹಿಂದೆ ಮತ್ತೆ ವಾಪಸ್ಸಾಗಿದ್ದರು.

    ವಾಪಸ್ಸಾದ ನಂತರ ತಮ್ಮದೇ ಸೆಲ್ಫಿಗಳನ್ನು ಹಾಕುವುದರಲ್ಲಿ ಅವರು ಮಗ್ನರಾಗಿದ್ದರು. ಒಂದಿಷ್ಟು ಫೋಟೋಗಳನ್ನು ಹಾಕುವ ಮೂಲಕ, ಸೋಷಿಯಲ್​ ಮೀಡಿಯಾಗೆ ವಾಪಸ್ಸಾಗಿರುವುದರ ಬಗ್ಗೆ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದರು.

    ಇದನ್ನೂ ಓದಿ: ಮತ್ತೊಂದು ಹಾರರ್​ ಚಿತ್ರದೊಂದಿಗೆ ಬಂದ ಲೋಹಿತ್​ … ಪುಷ್ಕರ್​ ಫಿಲಂಸ್​ ನಿರ್ಮಾಣ

    ಹಿಂದೊಮ್ಮೆ ರಾಜಕೀಯಕ್ಕೆ ಸಂಬಂಧಿಸಿದ್ದ ಪೋಸ್ಟ್​ಗಳನ್ನೇ ಹೆಚ್ಚಾಗಿ ಹಾಕುತ್ತಿದ್ದ ಅವರು, ವಾಪಸ್ಸಾದ ನಂತರ ರಾಜಕೀಯದಿಂದ ದೂರವೇ ಉಳಿದು ಎಲ್ಲರಲ್ಲೂ ಆಶ್ಚರ್ಯ ಹುಟ್ಟುಹಾಕಿದ್ದರು. ಇದೀಗ ರಾಜಕೀಯವಲ್ಲದಿದ್ದರೂ, ಪ್ರಸಕ್ತ ಸನ್ನಿವೇಶದ ಕುರಿತು ರಮ್ಯಾ ಒಂದು ಪೋಸ್ಟ್​ ಹಾಕಿದ್ದಾರೆ. ರಾಮಮಂದಿರದ ನಿರ್ಮಾಣದ ಕುರಿತಾದ ಈ ಪೋಸ್ಟ್‌ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ‘ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಹಿಂದುಗಳು ಸಂತೋಷವಾಗಿದ್ದಾರೆ. ಅವರ ಸಂತೋಷದಿಂದ ನನಗೂ ಸಂತೋಷವಾಗಿದೆ. ಮಸೀದಿ ಕಟ್ಟಿದಾಗ ಮುಸ್ಲಿಮರು ಸಂತೋಷಗೊಳ್ಳುತ್ತಾರೆ. ಆಗ ನಾನೂ ಸಂತೋಷಪಡುತ್ತೇನೆ. ಆದರೆ, ಇದೆಲ್ಲಕ್ಕಿಂತ ಹೆಚ್ಚಾಗಿ, ಸಂತೋಷವಾಗಿರುವುದಕ್ಕೆ ದೇವಸ್ಥಾನ ಅಥವಾ ಮಸೀದಿಯ ಅವಶ್ಯಕತೆ ಇಲ್ಲ ಎಂದು ಅವರಿಗೆ ಅರ್ಥವಾದಾಗ ನಾನು ಹೆಚ್ಚು ಸಂತೋಷಗೊಳ್ಳುತ್ತೇನೆ. ನಿಜವಾದ ಸಂತೋಷ ಇರುವುದು ಏಕತೆಯಿಂದ ಮಾತ್ರ. ಹೊರಗೆ ನೋಡುವುದನ್ನು ಬಿಟ್ಟು, ನಿಮ್ಮೊಳಗೇ ನೋಡಿಕೊಳ್ಳಿ. ಅಲ್ಲಿ ನಿಜವಾದ ದೇವರ ದರ್ಶನವಾಗುತ್ತದೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಅನುದಾನ ಕೊಡದಿದ್ದರೆ ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ …

    ಈ ಸಂದೇಶವಿರುವ ಫೋಟೋ ಶೇರ್ ಮಾಡುವುದುರ ಜತೆಗೆ, ಅವರು ರಾಜಕೀಯಕ್ಕೆ ಬಲಿಪಶುಗಳಾಬೇಡಿ, ಒತ್ತಡಕ್ಕೆ ಮಣಿಯಬೇಡಿ, ಪ್ರಶ್ನೆ ಮಾಡಿ ಮುನ್ನಡೆಯಿರಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

    ಈ ಕುರಿತು ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ರಮ್ಯಾ ಅವರ ಮಾತುಗಳಿಗೆ ಅಹುದಹುದು ಎಂದಿದ್ದಾರೆ.

    Don't be a victim to politics. Don't succumb to the identity crisis it creates for power and control. Question, look through it & rise above.

    Posted by Divya Spandana/Ramya on Thursday, August 6, 2020

    ದಿಶಾ ಸತ್ತ ಆ ರಾತ್ರಿ ನಿಜಕ್ಕೂ ನಡೆದಿದ್ದೇನು? ಕ್ಲೋಸ್​ ಫ್ರೆಂಡ್​ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts