More

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

    ಬೆಂಗಳೂರು: ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣವನ್ನ ರಾಜಕೀಯ ಷಡ್ಯಂತ್ರ ಎಂದಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಾನು ಇದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇಟ್ ಈಸ್ ವೆರಿ ಅನ್ ಫಾರ್ಚ್ಯುನೇಟ್. ಪ್ಲಾನ್ಡ್ ಎಫರ್ಟ್, ಇದೊಂದು ರಾಜಕೀಯದ ಷಡ್ಯಂತ್ರ. ಅವ್ರು ಸಂಪೂರ್ಣ‌ ನಿರ್ದೋಷಿ ಆಗಿ ಆಚೆ ಬರ್ತಾರೆ. ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸೋ ಸಂಚು ಅಡಗಿದೆ. ಇಂಥ ಕೃತ್ಯವನ್ನ ಬಲವಾಗಿ ಖಂಡಿಸ್ತೀನಿ. ನೈತಿಕವಾಗಿ ನಾನು ರಮೇಶ್ ಜಾರಕಿಹೊಳಿ ಪರ ಇದ್ದೀನಿ ಎಂದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್​, ಎರಡು ದಿನಗಳಿಂದ ರಮೇಶ್​ ಜಾರಕಿಹೊಳಿ ಅವರನ್ನ ಸಂಪರ್ಕಿಸಲು ಟ್ರೈ ಮಾಡ್ದೆ, ಅವ್ರು ಸಿಕ್ಕಿಲ್ಲ. ಇದನ್ನ ಯಾರು ಮಾಡಿದ್ದಾರೆ ಅನ್ನೋದಕ್ಕಿಂತ ವ್ಯವಸ್ಥಿತ ಷಡ್ಯಂತ್ರ ಅನ್ನೋದು ಗೊತ್ತಾಗುತ್ತೆ. ಇದೊಂದು ವ್ಯವಸ್ಥಿತ ಪಿತೂರಿ. ಇದರಲ್ಲಿ ಯಾರು ಇದ್ದಾರೆ? ಏಕೆ ಮಾಡಲಾಗಿದೆ ಎಂಬುದು ಗೊತ್ತಾಗಬೇಕಿದೆ. ಇಂಥ ಷಡ್ಯಂತ್ರ ರಾಜಕೀಯವಾಗಿ ಒಳ್ಳೆಯದಲ್ಲ. ಇದೊಂದು ವ್ಯವಸ್ಥಿತ ಸಂಚು. ಪ್ರಜಾಫ್ರಭುತ್ವದ ಮೇಲೆ ನಂಬಿಕೆ ಹೋಗೋ ಕೆಲ್ಸ ಆಗ್ತಿದೆ. ಮುಂಬರುವ ದಿನಗಳಲ್ಲಿ ಇದು ಪ್ರಾರಂಭ ಆಗ್ತದೆ. ಎಲ್ಲರ ಮೇಲೂ ಪ್ರಯೋಗ ಮಾಡುವ ಅಸ್ತ್ರ ಆಗಲಿದೆ ಎನ್ನುವ ಮೂಲಕ ಹಲವು ಪ್ರಶ್ನೆಗಳನ್ನು ಸಚಿವರು ಹುಟ್ಟುಹಾಕಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಕೇಸ್​: ಇಂದು ವಿಚಾರಣೆಗೆ ಬರಬೇಕಿದ್ದ ದಿನೇಶ್​ ಕಲ್ಲಹಳ್ಳಿ ಗೈರು!

    ಷಡ್ಯಂತ್ರ ಮಾಡಿ ಸಿಡಿ ರಿಲೀಸ್​ ಮಾಡುವ ಸಂಚಿಗೆ ಕಡಿವಾಣ ಹಾಕುವ ಕೆಲ್ಸ ಮಾಡಬೇಕಿದೆ. ಸಿಎಂ ಮತ್ತು ಗೃಹ ಇಲಾಖೆಯು ಇದಕ್ಕೆ ತಾರ್ತಿಕ ಅಂತ್ಯ ಕಾಣಿಸುವ ಕೆಲಸ ಮಾಡಲಿದ್ದಾರೆ. ಅಲ್ಲದೆ ಸಮಗ್ರ ತನಿಖೆ ಕೂಡ ಆಗಬೇಕಿದೆ ಎಂದು ಸುಧಾಕರ್​ ಹೇಳಿದರು.

    ಸಚಿವ ಸುಧಾಕರ್​ರ ಹೇಳಿಕೆ ಬೆನ್ನಲ್ಲೇ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ. ಸಚಿವರ ಹಿಂದಿನ ಮಾತಿನ ಮರ್ಮವೇನು? ಎಲ್ಲರ ಮೇಲೂ ಇದು ಪ್ರಯೋಗ ಆಗುತ್ತೆ, ಇನ್ನಷ್ಟು ಜನರ ಮೇಲೆ ಪ್ರಯೋಗ ಎಂದರೆ ಏನರ್ಥ? ತಾರ್ತಿಕ ಅಂತ್ಯ ಆಗ್ಬೇಕು ಅಂತ ಹೇಳಿದ್ದೇಕೆ? ಇನ್ನಷ್ಟು ಸಚಿವರ ಸಿಡಿ ಬರುತ್ತೆ ಎಂಬುದು ಇವರ ಮಾತಿನ ಅರ್ಥವೇ? ಇಂತಹ ಅನುಮಾನಕ್ಕೆ ಸಚಿವರ ಹೇಳಿಕೆ ಪುಷ್ಟಿನೀಡುತ್ತಿದೆ.

    ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

    ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಸೆಕ್ಸ್​ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜಾರಕಿಹೊಳಿ, ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts