More

    ರಮೇಶ್ ಬೇಗಾರ್‌ಗೆ ವಿಶ್ವರಂಗ ಪುರಸ್ಕಾರ

    ಶೃಂಗೇರಿ: ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್‌ಗೆ ಉಡುಪಿಯ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಜಂಟಿಯಾಗಿ ನೀಡುವ ಮಲಬಾರ್ ವಿಶ್ವರಂಗ ಪುರಸ್ಕಾರ ಲಭಿಸಿದೆ.
    ಪ್ರತಿ ವರ್ಷ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ರಾಷ್ಟ್ರ ಮಟ್ಟದಲ್ಲಿ ರಂಗ ಕರ್ಮಿಗಳಿಗೆ ಈ ಗೌರವ ಪುರಸ್ಕಾರ ನೀಡುತ್ತಿದ್ದು, ಪ್ರಥಮ ಬಾರಿಗೆ ಮಲೆನಾಡಿಗೊಬ್ಬರು ಆಯ್ಕೆಯಾಗಿದ್ದಾರೆ. ನಾಲ್ಕು ದಶಕಗಳಿಂದ ರಂಗಭೂಮಿ, ಕಿರುತೆರೆ, ಚಲನಚಿತ್ರ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರು 16 ನಾಟಕಗಳನ್ನು ಸ್ವತಃ ರಚಿಸಿ ನಿರ್ದೇಶಿಸಿದ್ದಾರೆ. ಕರ್ಣನ ಪಾತ್ರ ವೈಖರಿಯ ಕರ್ಣಭಾರ ಮತ್ತು ಮಹಾರಥಿ ಕರ್ಣ ರಮೇಶ್ ಬೇಗಾರ್ ನಿರ್ದೇಶನದ ಉತ್ತಮ ನಾಟಕವಾಗಿದೆ.
    ಮಲೆನಾಡ ಸಾಹಿತಿಗಳ ಸಣ್ಣ ಕಥೆಗಳನ್ನು ಆಧರಿಸಿದ ಒಂಭತ್ತು ನಾಟಕಗಳನ್ನು ನಿರ್ದೇಶಿದ್ದಾರೆ. ಮಲೆನಾಡು ಗ್ರಾಮೀಣ ಭಾಗದಲ್ಲೂ ಹಲವು ನಾಟಕೋತ್ಸವಗಳನ್ನು ಸಂಘಟಿಸಿದ ಕೀರ್ತಿ ಇವರದು. ಮಲೆನಾಡು ಭಾಗದ ರಂಗ ಗೀತೆಗಳನ್ನು ಗರ್ತಿಕೆರೆ ರಾಘಣ್ಣ ಇವರಿಂದ ಹಾಡಿಸಿ ದಾಖಲೀಕರಣ ಮಾಡಿದ್ದಾರೆ. ಶೃಂಗೇರಿ ಜಗದ್ಗುರುಗಳ ಅಪೇಕ್ಷೆಯಂತೆ ಅವರ ಸಾನ್ನಿಧ್ಯದಲ್ಲಿ ಬೇಗಾರು ನಿರ್ದೇಶನದ ಎರಡು ನಾಟಕಗಳು ಪ್ರದರ್ಶನಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts