More

    ಅನುದಾನದ ಹೆಸರಲ್ಲೂ ರಾಜಕೀಯ ಮೇಲಾಟ: 10 ಕೋಟಿ ರೂ. ಬಿಡುಗಡೆ ಆದೇಶಕ್ಕೆ ತಡೆ

    ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ
    ಬೊಂಬೆನಾಡು ಚನ್ನಪಟ್ಟಣದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಇಷ್ಟು ದಿನ ಅಧಿಕಾರಿಗಳ ವರ್ಗಾವಣೆಯಲ್ಲಿ ನಡೆಯುತ್ತಿದ್ದ ರಾಜಕೀಯ ಮೇಲಾಟಗಳು ಇದೀಗ, ಅನುದಾನದ ಹೆಸರಿನಲ್ಲೂ ಆರಂಭವಾಗಿದೆ.


    ಹೌದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಚುನಾವಣಾಪೂರ್ವ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಗಟ್ಟಿಪಡಿಸಿಕೊಳ್ಳಲು ಮಾಜಿ ಸಿಎಂ ತಲ್ಲೀನರಾಗಿದ್ದರೆ, ಇನ್ನೊಂದೆಡೆ ಕ್ಷೇತ್ರದಲ್ಲಿ ಮತ್ತೊಮ್ಮೆ ಅಧಿಪತ್ಯ ಸ್ಥಾಪಿಸಲು ವಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಹ ಕಾರ್ಯೋನ್ಮುಖರಾಗಿದ್ದಾರೆ. ಕೆಲದಿನಗಳ ಹಿಂದೆ ತಾಲೂಕು ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸರ್ಕಾರದಿಂದ ಬಂದ ದಿನಕ್ಕೊಂದು ಆದೇಶಗಳ ಹಿಂದೆ ಈ ಇಬ್ಬರು ಪ್ರಭಾವಿಗಳ ಕೈವಾಡ ಇದ್ದುದು ಬಹಿರಂಗಗೊಂಡಿತ್ತು. ಇದೀಗ, ಅನುದಾನ ಬಿಡುಗಡೆ ವಿಚಾರದಲ್ಲೂ ರಾಜಕೀಯ ಕಾದಾಟ ಆರಂಭಗೊಂಡಿದೆ.

    10 ಕೋಟಿ ರೂ. ಅನುದಾನ: ತಾಲೂಕಿನ ಇತಿಹಾಸ ಪ್ರಸಿದ್ಧ ಮಹದೇಶ್ವರ ದೇವಾಲಯ ಸೇರಿ ತಾಲೂಕಿನ ಹಲವು ದೇವಾಲಯಗಳ ಅಭಿವೃದ್ಧಿಗಾಗಿ ಜು.8ರಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದರು. ನಗರದ ಪ್ರಸಿದ್ಧ ಮಹದೇಶ್ವರ ದೇವಾಲಯಕ್ಕೆ 1.50 ಕೋಟಿ ರೂ. ಸೇರಿ ತಾಲೂಕಿನ 183 ದೇವಾಲಯಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಬಿಡುಗಡೆ ವಾಡಿಸುವಲ್ಲಿ ಶಾಸಕ ಎಚ್.ಡಿ.ಕುವಾರಸ್ವಾಮಿ ಸಫಲಗೊಂಡಿದ್ದರು. ಕುವಾರಸ್ವಾಮಿ ಮನವಿ ಮೇರೆಗೆ ಮುಖ್ಯಮಂತ್ರಿಗಳು ಈ ಅನುದಾನಕ್ಕೆ ಶಿಫಾರಸು ವಾಡಿ ಬಿಡುಗಡೆಗೊಳಿಸಿದ್ದರು. ಆಡಳಿತಾತ್ಮಕ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿತ್ತು.

    ದೇವರ ಹಣ ವಾಪಸ್: ತಾಲೂಕಿನ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾದ ಬೆನ್ನಲ್ಲೇ ಜು.13ರಂದು ಮತ್ತೊಂದು ಆದೇಶ ಹೊರಡಿಸಿರುವ ಕಂದಾಯ ಇಲಾಖೆ, ಬಿಡುಗಡೆ ವಾಡಿರುವ 10 ಕೋಟಿ ರೂ, ಅನುದಾನದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ. ಹಣ ಬಿಡುಗಡೆ ವಾಡಿದ ಕೆಲವೇ ದಿನಗಳಲ್ಲಿ ಆದೇಶ ಹಿಂದಕ್ಕೆ ಪಡೆದಿರುವುದು ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಎಡೆವಾಡಿದೆ. ಅನುದಾನದ ತಡೆ ವಿಚಾರ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲಿ ನಡೆಯುತ್ತಿದ್ದ ಇಬ್ಬರು ಪ್ರಭಾವಿ ನಾಯಕರ ನಡುವಿನ ಕಾದಾಟವೇ ಈ ಅನುದಾನ ತಡೆಯಾಗಲು ಕಾರಣ ಎಂಬ ವಾತುಗಳೂ ಕೇಳಿ ಬರುತ್ತಿವೆ.

    ಆ ಮಹದೇಶ್ವರನೇ ಬುದ್ಧಿ ಕಲಿಸಲಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹದೇಶ್ವರ ದೇಗುಲ ಸೇರಿ ಗ್ರಾಮೀಣ ಭಾಗದ 183 ದೇವಾಲಯಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಜೆಡಿಎಸ್ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು. ನಾಯಕರಾದ ಕುಮಾರಸ್ವಾಮಿ ಸರ್ಕಾರದಿಂದ ಈ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಸಾವಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ಸಂತಸ ವ್ಯಕ್ತಪಡಿಸಿದ್ದರು. ಈ ಮಧ್ಯೆ ಅನುದಾನದ ತಡೆ ಆದೇಶ ಹೊರಬಿದ್ದ ಕೂಡಲೇ ಆಕ್ರೋಶಗೊಂಡಿರುವ ಜೆಡಿಎಸ್ ಕಾರ್ಯಕರ್ತರು, ಕುಮಾರಸ್ವಾಮಿಯವರು ತಾಲೂಕಿನ ದೇಗುಲಗಳ ಅಭಿವೃದ್ಧಿಗೋಸ್ಕರ ಹೋರಾಟ ಮಾಡಿ ತಂದ ಅನುದಾನವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಕುತಂತ್ರದಿಂದ ತಡೆಹಿಡಿಯುವಂತೆ ಮಾಡಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಆ ಮಹದೇಶ್ವರನೇ ಬುದ್ದಿ ಕಲಿಸಲಿ ಎಂದು ಪರೋಕ್ಷವಾಗಿ ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ, ಈ ಆರೋಪವನ್ನು ಅಲ್ಲಗೆಳೆಯುತ್ತಿರುವ ಬಿಜೆಪಿಗರು, ಅನುದಾನ ತಡೆಹಿಡಿದಿರುವುದರ ಹಿಂದೆ ಸರ್ಕಾರದ ಆಡಳಿತಾತ್ಮಕ ಕಾರಣವಿದೆ. ಒಂದು ಕ್ಷೇತ್ರಕ್ಕೆ ಇಷ್ಟೊಂದು ಹಣ ಬಿಡುಗಡೆ ಮಾಡಿರುವ ಬಗ್ಗೆ ಹಲವು ಶಾಸಕರ ವಿರೋಧದ ಹಿನ್ನೆಲೆ ಇದಕ್ಕೆ ತಡೆಯಾಗಿರಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

    ಒಟ್ಟಾರೆ, ಇಷ್ಟು ದಿನ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆ ಇದೀಗ ಅನುದಾನದ ವಿಚಾರದಲ್ಲೂ ಆರಂಭಗೊಂಡಿದೆ. ಈ ಮಧ್ಯೆ ಮಹದೇಶ್ವರನಿಗೆ ಇರುವ ಚಿಕ್ಕಗುಡಿಯೇ ಅನಿವಾರ್ಯವಾಗಿದೆ.

    ರಾಜಕಾರಣ ಸಹಜ. ಆದರೆ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಅನುದಾನ ತಡೆದಿರುವ ವಿಚಾರದಲ್ಲಿ ಯಾರ ಕೈವಾಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಉತ್ತಮ ಬೆಳವಣಿಗೆಯಲ್ಲ. ದೇವಾಲಯಗಳು ಜನರಿಗೆ ನೆಮ್ಮದಿ ನೀಡುವ ಪವಿತ್ರವಾದ ತಾಣಗಳು. ಈ ತಾಣಗಳ ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ನಡೆಸುವುದು ಖಂಡನೀಯ. ಆದರೆ, ಆತಂಕ ಪಡಬೇಕಾಗಿಲ್ಲ. ನಾಯಕರಾದ ಕುಮಾರಸ್ವಾಮಿ ಅವರು ತಡೆಗೆ ಮುಕ್ತಿ ಕೊಡಿಸಿ ಅನುದಾನ ಬಿಡುಗಡೆಗೊಳಿಸಲು ಯಶಸ್ವಿಯಾಗುತ್ತಾರೆ.
    ಎಚ್.ಸಿ.ಜಯಮುತ್ತು ತಾಲೂಕು ಜೆಡಿಎಸ್ ಅಧ್ಯಕ್ಷ


    ದೇಗುಲಗಳ ಅನುದಾನ ತಡೆ ವಿಚಾರದಲ್ಲಿ ಸಿ.ಪಿ. ಯೋಗೇಶ್ವರ್ ಹಾಗೂ ಪಕ್ಷದ ಪಾತ್ರವಿದೆ ಎಂಬುದು ಕೇವಲ ಕಲ್ಪನೆ. ಒಂದೇ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ಬಿಡುಗಡೆ ಮಾಡಿರುವ ವಿಚಾರಕ್ಕೆ ಬೇರೆ ಶಾಸಕರ ವಿರೋಧವಿತ್ತು. ಚುನಾವಣಾ ವರ್ಷವಾಗಿರುವ ಕಾರಣ ಒಂದು ಕ್ಷೇತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ವಾಡಿದರೆ ಹೇಗೆ, ನಮ್ಮ ಕ್ಷೇತ್ರಗಳಿಗೂ ಬಿಡುಗಡೆ ವಾಡಿ ಎಂದು ಒತ್ತಾಯಿಸಿದ್ದರು ಎಂಬ ವಾಹಿತಿ ಇದೆ. ಶಾಸಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿರಬಹುದು. ಅಭಿವೃದ್ಧಿ ವಿಚಾರಗಳಿಗೆ ಬಿಜೆಪಿಯಾಗಲೀ, ಸಿ.ಪಿ. ಯೋಗೇಶ್ವರ್ ಅವರಾಗಲೀ ಎಂದೂ ಅಡ್ಡಿಪಡಿಸುವವರಲ್ಲ.
    ಆರ್. ಶಿವಕುವಾರ್ ಚನ್ನಪಟ್ಟಣ ಬಿಜೆಪಿ ನಗರ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts