More

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ರಾಮನಗರ: ರೇಷ್ಮೆ ನಗರಿ ರಾಮನಗರದ ಜಿಲ್ಲಾ ಕ್ರೀಡಾಂಗಣ ಶುಕ್ರವಾರ ಸಂಜೆ ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿತು. ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಅದ್ಬುತ ಕ್ಷಣ ಕಣ್ತುಂಬಿಕೊಂಡರು. ಧನುರ್ಮಾಸದ ಮೊದಲ ದಿನವೇ ಶ್ರೀ ವಿಷ್ಣು ನಾಮಸ್ಮರಣೆಯ ಮೂಲಕವೇ ಜಿಲ್ಲಾ ಕೇಂದ್ರದಲ್ಲಿ ಜನತೆ ಮಿಂದೆದ್ದರು.

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ತಿರುಪತಿ ತಿರುಮಲ ದೇವಾಲಯದಿಂದ ಆಗಮಿಸಿದ್ದ 80 ಅರ್ಚಕರ ತಂಡವು ಸಂಜೆ 6 ಗಂಟೆ ಸುಮಾರಿಗೆ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಿದರು. ಎರಡೂವರೆ ಗಂಟೆ ನಡೆದ ಕಾರ್ಯಕ್ರಮವನ್ನು ಶಾಂತಚಿತ್ತರಾಗಿ ಕುಳಿತು ವೀಕ್ಷಿಸಿದ ಜನತೆ ನಂತರ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತಿಭಾವದಲ್ಲಿ ಮಿಂದೆದ್ದರು.

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ಕಣ್ತುಂಬಿಕೊಂಡ ಜನಸ್ತೋಮ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭಗೊಂಡ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಎಚ್​ಡಿಕೆ ದಂಪತಿ ಮತ್ತು ಪುತ್ರ ನಿಖಿಲ್​ ಪಾಲ್ಗೊಂಡರು. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಬಸ್​ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆ ಶ್ರೀನಿವಾಸ ಕಲ್ಯಾಣೋತ್ಸವದಂತಹ ಸುಸಂದರ್ಭಕ್ಕೆ ಸಾಕ್ಷಿ ಆದರು. ಈ ವೇಳೆ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಭಕ್ತರಿಗೆ ತಿರುಪತಿ ಲಾಡು ಮತ್ತು ಪುಳಿಯೋಗರೆ, ಕೇಸರಿ ಬಾತ್​ ವಿತರಿಸಲಾಯಿತು.

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ತಡವಾಗಿ ಆಗಮನ: ಎಚ್​ಡಿಕೆ ತಾಯಿ ಚನ್ನಮ್ಮ ಅವರು ಕಲ್ಯಾಣೋತ್ಸವಕ್ಕೆ ಕೊಂಚ ತಡವಾಗಿ ಆಗಮಿಸಿದರು. ಸಂಜೆ 7 ಗಂಟೆ ಸುಮಾರಿಗೆ ಆಗಮಿಸಿದ ಚೆನ್ನಮ್ಮ ಅವರನ್ನು ಎಚ್​ಡಿಕೆ ದಂಪತಿ ಮತ್ತು ಪುತ್ರ ಎದ್ದು ನಿಂತು ಬರಮಾಡಿಕೊಂಡರು. 8 ಗಂಟೆ ಸುಮಾರಿಗೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಕಾರ್ಯಕ್ರಮ ಸೇರಿಕೊಂಡರು. ನಿಖಿಲ್​ ಪತ್ನಿ ರೇವತಿ ಸಹ ತಡವಾಗಿ ಆಗಮಿಸಿದರು. ದೇವರಿಗೆ ಪೂಜೆ ಸಲ್ಲಿಸಿದ ನಿಂತರ ಮೊಮ್ಮೊಗ ನಿಖಿಲ್​ ನೆರವಿನೊಂದಿಗೆ ವೇದಿಕೆ ಮುಂಭಾಗಕ್ಕೆ ಬಂದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಜನರಿಗೆ ಕೈ ಜೋಡಿಸಿ ನಮಸ್ಕರಿಸಿ, ನಂತರ ಕೈ ಬೀಸಿ ವೇದಿಕೆಯಿಂದ ನಿರ್ಗಮಿಸಿದರು.

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ಊಟದ ವ್ಯವಸ್ಥೆ: ಮಧ್ಯಾಹ್ನದಿಂದಲೇ ಕಾರ್ಯಕ್ರಮಕ್ಕೆ ಬಂದ ಸುಮಾರು ಒಂದು ಲಕ್ಷ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಲಾವ್​, ಮೊಸರನ್ನ ಮತ್ತು ಮೈಸೂರು ಪಾಕ್​ ಊಟ ವಿತರಣೆ ಮಾಡಲಾಯಿತು.

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ಶ್ರೀನಿವಾಸ ಕಲ್ಯಾಣೋತ್ಸವವನ್ನು ಜಿಲ್ಲೆ ಮತ್ತು ರಾಜ್ಯದ ಜನರ ಸುಭಿಕ್ಷೆಗಾಗಿ ಹಮ್ಮಿಕೊಳ್ಳಲಾಗಿದೆ. ಹಲವಾರು ಸಂಕಷ್ಟಗಳನ್ನು ಜನತೆ ಎದುರಿಸಿದ್ದು, ಇದರಿಂದ ಎಲ್ಲರಿಗೂ ಮುಕ್ತಿ ದೊರೆಯಲಿ. ಒಳ್ಳೆಯದಾಗಲಿ.
    | ಎಚ್​.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

    ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

    ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts