More

    ಜಿಲ್ಲೆಯಲ್ಲಿ ಆರಂಭಗೊಂಡ ಶಾಲೆಗಳು ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ ಶಿಕ್ಷಕರು

    ರಾಮನಗರ
    2023-24ನೇ ಸಾಲಿನ ಶೈಕ್ಷಣಿಕ ವರ್ಷ ಬುಧವಾರದಿಂದ ಆರಂಭಗೊಂಡಿದ್ದು, ರಜಾ ಮಜದಿಂದ ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು, ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಶಾಲಾರಂಭ ಕಾರ್ಯಕ್ರಮಕ್ಕೆ ಮೆರಗು ತಂದರು.

    ಜಿಲ್ಲೆಯಲ್ಲಿ ಬುಧವಾರದಿಂದ ಶಾಲೆಗಳು ಆರಂಭಗೊಂಡಿದ್ದು, ಬೆಳಗ್ಗೆ ಶಾಲಾ ಆವರಣದಲ್ಲಿ ತಳಿರು ತೋರಣ ಕಟ್ಟಿ. ಹೂವುಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ಶೃಂಗಾರ ಮಾಡಲಾಗಿತ್ತು. ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪ್ರತನಿಧಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಮಕ್ಕಳಿಗೆ ಧೈರ್ಯ ತುಂಬವ ಕೆಲಸ ಮಾಡಿದರು. ಇದಾದ ಬಳಿಕ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡಿ, ಆಟೋಟಗಳಲ್ಲಿ ಪಾಲ್ಗೊಂಡರು.
    ಬೇಸಿಗೆ ರಜೆಯಿಂದಾಗಿ ಮನೆಯ ಬಳಿ ಆಟವಾಡಿಕೊಂಡಿದ್ದ ಮಕ್ಕಳು, ಬುಧವಾರ ಶಾಲಾ ಸಮವಸ ಧರಿಸಿ, ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಶಾಲೆಗೆ ಹೋಗುತ್ತಿದ್ದ ದೃಶ್ಯಗಳು ಕಂಡುಬಂತು.

    ದಾಖಲಾತಿ ಆರಂಭ
    ಸೋಮವಾರದಿಂದಲೇ ಜಿಲ್ಲೆಯಲ್ಲಿ ಶಾಲೆಗಳು ತೆರೆದರೂ, ಎರಡು ದಿನಗಳ ಕಾಲ ಸಿದ್ದತೆಗೆ ಅವಕಾಶ ನೀಡಲಾಗಿತ್ತು, ಬುಧವಾರದಿಂದ ದಾಖಲಾತಿ ನೀಡುವ ಕೆಲಸ ಆರಂಭವಾಗಿದೆ. ಪಾಲಕರು ಇಷ್ಟ ಬಂದ ಶಾಲೆಗೆ ಮಕ್ಕಳನ್ನು ದಾಖಲು ಮಾಡುವ ಅವಕಾಶ ಇರುವ ಕಾರಣ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಎನ್ನುವ ಪೈಪೋಟಿಗೆ ಬಿದ್ದು ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಪಾಲಕರು ಮುಂದಾಗಿದ್ದಾರೆ.

    ಸಮವಸ್ತ್ರ ವಿತರಣೆ
    ಶಾಲೆ ಆರಂಭವಾದ ಮೊದಲ ದಿನವೇ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಿಸಲಾಯಿತು. ಇನ್ನು ಕೆಲವು ಶಾಲೆಗಳಲ್ಲಿ ಇನ್ನೆರಡು ಮೂರು ದಿನಗಳಲ್ಲಿ ಪುಸ್ತಕ ನೀಡಲು ಯೋಜನೆ ರೂಪಿಸಿಕೊಂಡಿವೆ. ದಾಖಲಾಗಿರುವ ಹಾಗೂ ಮುಂದಿನ ತರಗತಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಈ ಸಂಬಂಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಪಠ್ಯಪುಸ್ತಕಗಳು ಲಭ್ಯವಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

    ತರಗತಿ ಶುರು
    ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮೊದಲೇ ತಿಳಿಸಿದಂತೆ ಬುಧವಾರದಿಂದಲೇ ತರಗತಿ ಪ್ರಾರಂಭ ಮಾಡಲಾಗಿದೆ. ಮೊದಲು ವಿದ್ಯಾರ್ಥಿಗಳನ್ನು ಸ್ವಾಗತಿಸುವುದು, ಸ್ಥೈರ್ಯ ತುಂಬುವ ಕೆಲಸದ ಬಳಿಕ, ಎಂದಿನಂತೆ ಮೊದಲ ದಿನವೇ ಪಾಠ ಪ್ರವಚನಗಳು ಆರಂಭವಾಗಿವೆ. ಮೊದಲ ದಿನವೇ ಶಾಲೆಗೆ ಬಂಧ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗತ ನೀಡಿ, ಸಿಹಿ ಹಂಚಿ, ಗುಲಾಬಿ ಹೂ ನೀಡಿ ಬರ ಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಸಿಹಿಯೂಟ ನೀಡುವಂತೆ ಇಲಾಖೆ ಸೂಚನೆ ನೀಡಿತ್ತು. ಅದರಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಿಹಿಯೂಟ ನೀಡಲಾಗಿದೆ. ಮಧ್ಯಾಹ್ನದ ಊಟಕ್ಕೆ ಕೇಸರಿಬಾತ್, ಪಾಯಸ ಸೇರಿ ಇತರ ಸಿಹಿ ಖಾದ್ಯವನ್ನು ನೀಡಲಾಗಿತ್ತು. ಮಕ್ಕಳು ಸಹ ಖುಷಿಯಿಂದಲೇ ಶಾಲೆಗೆ ಹಾಜರಾದರು.

    ಸರ್ಕಾರದ ಸೂಚನೆಯಂತೆ ವಿದ್ಯಾರ್ಥಿಗಳನ್ನು ಹೂವು ನೀಡಿ ಸ್ವಾಗತಿಸಿ, ಮಧ್ಯಾಹ್ನಕ್ಕೆ ಸಿಹಿಊಟ ಬಡಿಸಲಾಗಿದೆ. ಬುಧವಾರದಿಂದಲೇ ತರಗತಿ ಜತೆಗೆ ದಾಖಲಾತಿಯೂ ಆರಂಭವಾಗಿದೆ. ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

    ಗಂಗಣ್ಣ ಸ್ವಾಮಿ, ಡಿಡಿಪಿಐ ಶಾಲಾ ಶಿಕ್ಷಣ ಇಲಾಖೆ, ರಾಮನಗರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts