More

    ಜನ ಮೆಚ್ಚುವಂಥ ಕಾರ್ಯಗಳಿಂದ ತೃಪ್ತಿ: ಶಾಸಕ ಮಂಜುನಾಥ್ ಅಭಿಮತ

    ಬಿಡದಿ: ಶಾಸಕರಾದವರು ಸರ್ಕಾರ ಹಾಗೂ ಜನರ ಸೇತುವೆಯಾಗಿ ಕೆಲಸ ಮಾಡಿದರೆ ಸಾಲದು, ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿಯುವಂತಹ ಸಾಮಾಜಿಕ ಕೆಲಸ ಕಾರ್ಯಗಳನ್ನೂ ಮಾಡಬೇಕೆಂದು ಶಾಸಕ ಎ.ಮಂಜುನಾಥ್ ಅಭಿಪ್ರಾಯಪಟ್ಟರು.


    ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಎ. ಮಂಜು ಚಾರಿಟಬಲ್ ಟ್ರಸ್ಟ್, ಬಿಡದಿ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಫೌಂಡೇಷನ್ ವತಿಯಿಂದ ಡಾ. ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆ ಸಹಕಾರದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳಿಗೆ ವೈದ್ಯಕೀಯ ಶಿಬಿರ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿಶೇಷ ಚೇತನ ಮಕ್ಕಳ ಅಭಿನಂದನಾ ಸವಾರಂಭದಲ್ಲಿ ಮಾತನಾಡಿದರು.


    ಶಾಸಕನಾಗಿ ರಸ್ತೆ, ಚರಂಡಿ, ಮನೆ ನಿರ್ಮಿಸುವುದಷ್ಟೇ ಅಲ್ಲ, ಜನರ ಹೃದಯದಲ್ಲಿ ಉಳಿಯುವಂತಹ ಸಾರ್ಥಕ ಕೆಲಸಗಳನ್ನು ಮಾಡಿದಾಗ ನಮಗೂ ತೃಪ್ತಿ ಸಿಗುತ್ತದೆ. ಆ ನಿಟ್ಟಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯನ್ನು ತೊಡಗಿದ್ದೇನೆ ಎಂದರು.

    ಟ್ರಸ್ಟ್‌ನಿಂದ ಬಿಡದಿ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಸಹಕಾರದೊಂದಿಗೆ 4 ವರ್ಷಗಳಲ್ಲಿ 68570 ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಮಾಡಲಾಗಿದೆ. ಅಗತ್ಯವಿರುವವರಿಗೆ ಕನ್ನಡಕ ಹಾಗೂ ಶಸಚಿಕಿತ್ಸೆ ಮಾಡಿಸಲಾಗಿದೆ ಎಂದರು ತಿಳಿಸಿದರು.

    ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣೆ: ಮನೆಯಲ್ಲಿ ಅಂಗವಿಕಲ ಮಕ್ಕಳಿದ್ದರೆ, ಇತರ ಮಕ್ಕಳಂತೆ ಇರಬೇಕೆಂದು ಪಾಲಕರು ಆಸೆ ಪಡುತ್ತಾರೆ. ಹಾಗಾಗಿ ಅಂತಹ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಇದೊಂದು ಪುಣ್ಯದ ಕೆಲಸ ಎಂದು ಶಾಸಕ ಮಂಜುನಾಥ್ ಹೇಳಿದರು.

    ರಾಮನಗರ ಬಿಇಒ ಕುಮಾರಸ್ವಾಮಿ ಮಾತನಾಡಿ, ಶಾಸಕರು ವಿದ್ಯಾರ್ಥಿಗಳ ಮೇಲೆ ಕಾಳಜಿ ವಹಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಹಲವು ಶಾಲೆಗಳಲ್ಲಿ 1000ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿದ್ದಾರೆ. ಅಂತಹವರಿಗೆ ವಿಶೇಷ ಶಾಲೆಗಳಲ್ಲಿ ಪಾಠ ಪ್ರವಚನ ದೊರೆತರೆ, ಇತರ ವಿದ್ಯಾರ್ಥಿಗಳಿಗೆ ಸವಾನವಾಗಿ ವಿದ್ಯಾಭ್ಯಾಸ ಮಾಡುತ್ತಾರೆ ಎಂದು ಹೇಳಿದರು.

    2021-22ನೇ ಸಾಲಿನಲ್ಲಿ ರಾಮನಗರ ತಾಲೂಕಿನ 15 ಅಂಗವಿಕಲ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಅವರನ್ನು ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು.

    ಕ್ಷೇತ್ರ ಸಮನ್ವಯ ಅಧಿಕಾರಿ ಚಂದ್ರಪ್ಪ, ಔಷಧ ವ್ಯಾಪಾರಿಗಳ ಸಂದ ಅಧ್ಯಕ್ಷ ಸರ್ವೇಶ್, ದಯಾನಂದ ಸಾಗರ್ ಆಸ್ಪತ್ರೆ ವ್ಯವಸ್ಥಾಪಕ ರಾಧಾಕೃಷ್ಣ, ಡಾ. ಪೂಜಿತಾ, ಪುರಸಭೆ ಸದಸ್ಯರಾದ ನರಸಿಂಹಯ್ಯ, ಹರಿಪ್ರಸಾದ್, ರಾಕೇಶ್, ದೇವರಾಜು, ಖಲೀಲ್, ಮುಖಂಡರಾದ ಚಿಕ್ಕಣ್ಣಯ್ಯ ಹಾಗೂ ಪ್ರೌಢಶಾಲೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts