ಸಿನಿಮಾ

ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಮರ

ಬಿಡದಿ(ರಾಮನಗರ): ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಮರ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಬಿಡದಿ ರೈಲು ನಿಲ್ದಾಣದ ಬಳಿ ಗುರುವಾರ ಸಂಜೆ ನಡೆದಿದೆ.

ಬಿಡದಿ ಭಾಗದಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಮರವೊಂದು  ರೈಲ್ವೆ ಬೋಗಿ ಮತ್ತು ವಿದ್ಯುತ್ ತಂತಿ ಮೇಲೆ ಉರುಳಿದೆ. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಎಚ್ಚೆತ್ತ ರೈಲು ಸಿಬ್ಬಂದಿ ರೈಲನ್ನು ಬಿಡದಿ ನಿಲ್ದಾಣದಲ್ಲಿ ನಿಲ್ಲಿಸಿ ಬೋಗಿಯೇ ಮೇಲಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿದ್ದಾರೆ.

ಒಂದು ವೇಳೆ ಮರದ ಕೊಂಬೆ ವಿದ್ಯುತ್​ ತಂತಿ ಹಾಗೂ ಬೋಗಿಯೊಂದಿಗೆ ಸಂಕರ್ಪ ಸಾಧಿಸಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಹೇಳಲಾಗಿದೆ. ರೈಲು ಸಿಬ್ಬಂದಿ ಎಚ್ಚೆತ್ತುಕೊಂಡ ಪರಿಣಾಮ ಯಾವುದೇ ಅನಾಹುತ ಸಂಭವಿಸಿದಲ್ಲ. ಈ ಘಟನೆಯಿಂದ ರೈಲಿನ ಪ್ರಯಾಣ ಸುಮಾರು 45 ನಿಮಿಷಗಳು ವಿಳಂಭವಾಗಿತ್ತು.

Latest Posts

ಲೈಫ್‌ಸ್ಟೈಲ್