More

    ಶ್ರೀರಾಮನ ಪಟ್ಟಾಭಿಷೇಕ ಎಷ್ಟು ವೈಭವೋಪೇತವಾಗಿ ನೆರವೇರಲಿದೆ ಗೊತ್ತಾ? ಇಲ್ಲಿದೆ ಇನ್​ಸೈಡ್​ ಸ್ಟೋರಿ!

    2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ರಾಮಮಂದಿರ ಭೂಮಿ ಪೂಜೆಯೇ ಇಡೀ ಜಗತ್ತಿನ ಗಮನಸೆಳೆದಿತ್ತು. ಈಗ ಇದಕ್ಕೆ ಪೂರಕವಾಗಿ 2023ರಲ್ಲಿ ನಡೆಯಲಿರೋ ಶ್ರೀರಾಮಚಂದ್ರನ ಪಟ್ಟಾಭಿಷೇಕ ಹೇಗಿರಲಿದೆ ಗೊತ್ತಾ? ಎಷ್ಟು ವೈಭವೋಪೇತವಾಗಿ ನೆರವೇರಲಿದೆ ಹೇಳ್ತೀವಿ ನೋಡಿ..

    ಕೋಟ್ಯಾನು ಕೋಟಿ ಭಕ್ತರ ಆಸೆಯ, ಪ್ರಧಾನಿ ನರೇಂದ್ರ ಮೋದಿ ಕನಸಿನ ರಾಮ ಮಂದಿರ ನಿರ್ಮಾಣ ಕಾರ್ಯ ಮಿಂಚಿನ ವೇಗದಲ್ಲಿ ನಡೆಯುತ್ತಿದ್ದು, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ, ಭೂಕಂಪಕ್ಕೆ ಬಗ್ಗದ, ಬಿರುಗಾಳಿಗೆ ಜಗ್ಗದ ರೀತಿ ನೈಸರ್ಗಿಕ ವಿಪತ್ತುಗಳಿಂದ ದೇವಸ್ಥಾನಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ರಾಮನ ಪಟ್ಟಾಭಿಷೇಕಕ್ಕೆ ಈಗಾಗಲೇ ಮೋದಿ ತಯಾರಿ ಶುರು ಮಾಡಿದ್ದಾರೆ.

    ಈಗ ಮತ್ತೆ ಶತ ತಶಮಾನಗಳ ನಂತರ ನಡೆಯಲಿರುವ ಈ ವೈಭವದ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ಸಿದ್ಧತೆಗೆ ಪ್ರಧಾನಿ ಸೂಚನೆ ಕೊಟ್ಟಿದ್ದು, ಅವ್ರ ಅಣತಿಯಂತೆಯೇ ಎಲ್ಲಾ ಕಾರ್ಯಗಳು ನಡೆಯುತ್ತಿದ್ದು, ಹೀಗಾಗಿ ಮಾತುಕೊಟ್ಟಂತೆ ಮುಂದಿನ ಚುನಾವಣೆ ಒಳಗೆ ರಾಮಲಲ್ಲಾನ ದರ್ಶನ ಮಾಡಿಸ್ತಿದ್ದಾರೆ.

    ಹೌದು.. ಶತಕೋಟಿ ಭಾರತೀಯರು ದಶಕಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದ ಐತಿಹಾಸಿಕ ಕ್ಷಣ ನನಸಾಗುವುದರೊಂದಿಗೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ 2023 ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಹಿಂದೂಗಳ ಆರಾಧ್ಯದೈವ ಮರ್ಯಾದ ಪುರುಷೋತ್ತಮ ಎಂದೇ ಕರೆಯುವ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ 2020ರ ಆಗಸ್ಟ್​ನಲ್ಲಿ ನಡೆದ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆಗಿಂತಲೂ ಐತಿಹಾಸಿಕವಾಗಿ.. ಅದ್ಭುತವಾಗಿ.. ಆಕರ್ಷಿಣೀಯವಾಗಿ ಇರಲಿದೆ ಈ ಪಟ್ಟಾಭಿಷೇಕ.

    ಪ್ರಧಾನಿ, ರಾಷ್ಟ್ರಪತಿ, ಉತ್ತರ ಪ್ರದೇಶ ಮುಖ್ಯಮಂತ್ರಿ, ವಿರೋಧಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು.. ರಾಮಜನ್ಮಭೂಮಿಗಾಗಿ ನಡೆದ ಶತಮಾನಗಳ ಹೋರಾಟ ಮತ್ತು ಸುಮಾರು 500 ವರ್ಷಗಳ ಬಳಿಕ ರಾಮ ಲಲ್ಲಾ ತನ್ನ ಜನ್ಮಸ್ಥಾನಕ್ಕೆ ಮರಳುವ ಸಂಭ್ರಮಾಚರಣೆಯಾಗಲಿದ್ದು, ಇದು ಮತ್ತೊಮ್ಮೆ ತ್ರೇತಾಯುಗ ರಾಜವೈಭೋಗವನ್ನ ಮರುಕಳಿಸುವಂತೆ ಮಾಡೋದ್ರಲ್ಲಿ ಡೌಟೇ ಇಲ್ಲ.

    ಇದು ಕಳೆದೈದು ಶತಮಾನಗಳಿಂದಲೂ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರಕ್ಕಾಗಿ ಕಾಯುತ್ತಿರುವ ರಾಮ ಭಕ್ತರಿಗೆ ಸಿಹಿ ಸುದ್ದಿ ಅನ್ನೋದ್ರಲ್ಲಿ ಡೌಟೇ ಇಲ್ಲ. ನಿಗದಿತ ಅವಧಿಗೂ ಒಂದು ವರ್ಷ ಮೊದಲೇ ಮಂದಿರದ ಗರ್ಭಗೃಹದಲ್ಲಿ ರಾಮಲಲ್ಲಾ ಭಕ್ತರಿಗೆ ದರ್ಶನ ನೀಡಲಿದ್ದು, ಈ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣ ಆಗಲಿದೆ.

    2024ರಲ್ಲಿ ಭಕ್ತರಿಗೆ ದರ್ಶನ ಕೊಡ್ಬೇಕಿದ್ದ ಅಯೋಧ್ಯೆಯ ರಾಮಲಲ್ಲಾ, ಈಗ ಹೆಚ್ಚೂ ಕಡಿಮೆ ಆರೇಳು ತಿಂಗಳು ಮೊದಲೇ ಅಂದ್ರೆ 2023ರಲ್ಲೇ ಭಕ್ತರಿಗೆ ದರ್ಶನ ಕೊಡಲು ಒಂದು ಕಾರಣವಿದ್ದು, ಅದೇ 2024ರ ಲೋಕಸಭಾ ಚುನಾವಣೆ. ಹಾಗಾದ್ರೆ ಅದು ಹೇಗೆ ಮತ್ತು ಯಾಕೆ? ಜೊತೆ ಯಾವ ಹಂತದಲ್ಲಿ ಈಗ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ ನೋಡೋಣ ಬನ್ನಿ..

    ಹೌದು.. ಚುನಾವಣೆಗಳ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣದ ವಿಚಾರವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತಿದ್ದ ಬಿಜೆಪಿ, ಮುಂಬರುವ 2024ರ ಲೋಕಸಭೆ ಚುನಾವಣೆಯಗೂ ಮುನ್ನೇ ರಾಮಮಂದಿರವನ್ನು ಭಕ್ತರ ಮುಂದಿಟ್ಟು, ರಾಮಲಲ್ಲಾನ ದರ್ಶನವನ್ನು ಮಾಡಿಸಬೇಕೆನ್ನುವುದು ಬಿಜೆಪಿ ಶಪಥ. ಅದ್ರಲ್ಲೂ ಪ್ರಧಾನಿ ಮೋದಿಗಂತು ಇಂತಹದೊಂದು ಮಹತ್ಕಾರ್ಯ ಪೂರ್ಣಗೊಳಿಸಿದ್ರೆ.. ಅದು ಜೀವನ ಸಾರ್ಥಕ ಕಾರ್ಯ ಅಂತ ನಂಬಿರುವುದರಿಂದ ಈಗ ಲೋಕಸಭೆ ಚುನಾವಣೆಗೂ ಮುನ್ನವೇ ಅಯೋಧ್ಯೆ ಶ್ರೀ ರಾಮಮಂದಿರದಲ್ಲಿಯೇ ರಾಮನ ಪಟ್ಟಾಭಿಷೇಕ ಮಾಡಿ ಭಕ್ತರಿಗೆ ದರ್ಶನ ಕೊಡಿಸಬೇಕೆನ್ನುವ ಬಯಕೆಯಿದೆ.

    ಇನ್ನೂ ಲೋಕಸಭೆ ಚುನಾವಣೆ ಆರಂಭವಾಗುವ ಕನಿಷ್ಠ ಆರು ತಿಂಗಳ ಮುನ್ನ ಗರ್ಭ ಗೃಹವನ್ನು ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಿಂದ ಬರುವ ಭಕ್ತರಿಗೆ ತೆರೆಯಲಾಗುವುದು. ಈ ಮೂಲಕ ಹಲವು ದಶಕಗಳ ಹಿಂದಿನ ತಮ್ಮ ಭರವಸೆಯನ್ನು ಈಡೇರಿಸಿದ್ದೇವೆಂಬುದನ್ನು ಜನರಿಗೆ ಮನವರಿಕೆ ಮಾಡಿ, ಮತ್ತೊಂದು ಚುನಾವಣೆಗೂ ರಾಮಮಂದಿರ ವಿಚಾರವನ್ನು ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎನ್ನಲಾಗಿದೆ. ಆದ್ರೆ ಇದನ್ನು ರಾಜಕೀಯ ದೃಷ್ಟಿಕೋನದಲ್ಲಿ ಮಾತ್ರ ನೋಡಲಾಗುವುದಿಲ್ಲ.. ಇದು ಹಿಂದೂ ಸಂಸ್ಕೃತಿಯ ಪ್ರತೀಕವೂ ಹೌದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

    ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಹಲವಾರು ತಿಂಗಳುಗಳಿಂದ ವೇಗವಾಗಿ ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣವನ್ನ ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಮಿಕರು ಹಗಲು ರಾತ್ರಿ ಎನ್ನದೆ, ಎರಡೆರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮ ಮಂದಿರಕ್ಕೆ 50 ಅಡಿ ಆಳದ ಅಡಿಪಾಯವನ್ನು ಅಗೆದು ಹಾಕಲಾಗಿದ್ದು, ಇದರಿಂದ ದೇವಾಲಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಮಾಡ್ತಿದ್ದು. ಗರ್ಭಗುಡಿ ಇರುವ ಸ್ಥಳದಿಂದ ರಾಮ್ ಲಲ್ಲಾ ವಿಗ್ರಹವನ್ನ ತಾತ್ಕಾಲಿಕ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ.

    ರಾಮ ಮಂದಿರಕ್ಕೆ ಇದುವರೆಗೆ ಏಳು ಪದರಗಳನ್ನು ಹಾಕಲಾಗಿದ್ದು, ಸುಮಾರು ಆರು ಅಡಿ ಎತ್ತರದ ಅಡಿಪಾಯದ ಅಡಿಪಾಯ ಸಿದ್ಧವಾಗಿದೆ. ರಾಮ್ ದೇವಾಲಯ ನಿರ್ಮಿಸಲು ಕಾರ್ಮಿಕರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎರಡು ಪಾಳಿಯಲ್ಲಿ ಕೆಲಸ ಅಂದ್ರೆ 18-20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂದಿರದ ಭವ್ಯತೆ ಮತ್ತು ಅದರ ಸುರಕ್ಷತೆಯ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಗಹನವಾದ ಚಿಂತನೆ ನಡೆಸಿದ್ದಾರೆ. ಜನ್ಮಭೂಮಿಯಲ್ಲಿ ಬುನಾದಿಗಾಗಿ ತೋಡಿರುವ ಗುಂಡಿಯನ್ನು ತುಂಬಿಸುವ ಕೆಲಸ ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸುವ ಗುರಿ ಇದೆ.

    ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ನೀಲನಕ್ಷೆ ಪ್ರಕಾರ ನಿರ್ಮಾಣ ಸಂಸ್ಥೆಗಳಾದ ಲಾರ್ಸೆನ್ & ಟರ್ಬೋ ಮತ್ತು ಟಾಟಾ ಕನ್ಸಲ್ಟೆನ್ಸಿಗಳು 2024ರ ವೇಳೆಗೆ ತಮ್ಮ ಕಾರ್ಯ ಪೂರ್ಣಗೊಳಿಸಬೇಕಿದೆ. ನವೆಂಬರ್‍ನಲ್ಲಿ ದೀಪಾವಳಿಯ ವೇಳೆ ಎರಡನೇ ಹಂತದ ಕೆಲಸ ಶುರುವಾಗಲಿದೆ. ಇನ್ನೊಂದು ಕಡೆ ಬಿಳಿ ಅಮೃತಶಿಲೆಯಿಂದ ಮಾಡಿದ ಬಾಗಿಲಿನ ಚೌಕಟ್ಟು ಕಳ ಕೆತ್ತನೆಯೂ ನಡೆಯುತ್ತಿದೆ. ಈ ಬಾಗಿಲಿನ ಚೌಕಟ್ಟನ್ನು ರಾಮಲಲ್ಲಾ ಗರ್ಭಗೃಹದ ಹೊರಭಾಗದಲ್ಲಿ ಸ್ಥಾಪಿಸಲಾಗುವುದಂತೆ. ಅಂತಹ 30 ಚೌಕಟ್ಟುಗಳಿದ್ದು..2.7 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿರುವ ದೇವಾಲಯದ ಸುತ್ತ ಇರಲಿದೆ.

    ಸೀತಾಪತಿ ರಘುಕುಲ ರಾಮನ ಜನ್ಮಭೂಮಿಯಲ್ಲಿ ನಿರ್ಮಾಣ ಆಗ್ತಿರುವ ದೇವಸ್ಥಾನದಲ್ಲಿ 3 ಮಹಡಿಇರಲಿದೆ. 2.7 ಎಕರೆ ಭೂಮಿಯಲ್ಲಿ 57400 ಚದರ ಅಡಿ ವಿಸ್ತೀರ್ಣದಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತಿದ್ದು. ದೇವಾಲಯದ ಉದ್ದ 360 ಅಡಿ, ಅಗಲ 235 ಅಡಿ ಇರಲಿದೆ. ರಾಮ ಜನ್ಮಭೂಮಿಯ ಶಿಖರದವರೆಗಿನ ಎತ್ತರ 161 ಅಡಿ ಇದ್ರೆ.. ಪ್ರತಿ ಮಹಡಿಯ ಎತ್ತರ 20 ಅಡಿ ಇರುತ್ತೆ. ಒಟ್ಟು 366 ಸ್ತಂಭಗಳು ಇರಲಿದ್ದು.. ನೆಲ ಮಹಡಿಯಲ್ಲಿ 160, ಮೊದಲ ಮಹಡಿಯಲ್ಲಿ 132 ಸ್ತಂಭಗಳು, ಎರಡನೇ ಮಹಡಿಯಲ್ಲಿ 74 ಸ್ತಂಭಗಳಿದ್ದು, ದೇವಾಲಯಕ್ಕೆ ಪ್ರವೇಶಿಸಲು 12 ದ್ವಾರಗಳಿವೆ.

    ಇದು ಕಳೆದೈದು ಶತಮಾನಗಳಿಂದಲೂ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರಕ್ಕಾಗಿ ಕಾಯುತ್ತಿರುವ ರಾಮ ಭಕ್ತರಿಗೆ ಸಿಹಿ ಸುದ್ದಿ ಅನ್ನೋದ್ರಲ್ಲಿ ಡೌಟೇ ಇಲ್ಲ. ನಿಗದಿತ ಅವಧಿಗೂ ಒಂದು ವರ್ಷ ಮೊದಲೇ ಮಂದಿರದ ಗರ್ಭಗೃಹದಲ್ಲಿ ರಾಮಲಲ್ಲಾ ಭಕ್ತರಿಗೆ ದರ್ಶನ ನೀಡಲಿದೆ. ಈ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts