More

    ರಾಮಮಂದಿರ ಶಾಂತಿಯ ತೋಟ: ಅರ್ಜುನ ಅವಧೂತರು

    ಶಿವಮೊಗ್ಗ: ಹಲವು ದಶಕಗಳ ಸಾಧು ಸಂತರ ತಪಸ್ಸು , ಜಪ, ತಪ ಆಚರಣೆಗಳ ಫಲಶ್ರುತಿಯಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ ನನಸಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಭ್ರಮದಿಂದ ಕುಣಿದಾಡುವ ವಾತಾವರಣ ನಿರ್ಮಾಣಗೊಂಡಿದೆ ಎಂದು ಮೈಸೂರಿನ ಅರ್ಜುನ ಅವಧೂತ ಮಹಾರಾಜರು ಹೇಳಿದರು.

    ವಿಪ್ರ ಯುವ ಪರಿಷತ್‌ನಿಂದ ಏರ್ಪಡಿಸಿರುವ ತೇರಾ ಕೋಟಿ ರಾಮ ನಾಮ ಜಪ ಸಾಂಗತ ಮಹಾ ಯಜ್ಞದ ಮೊದಲನೆಯ ದಿನವಾದ ಶನಿವಾರ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸೀತಾ,ರಾಮ, ಹನುಮರ ನೆನೆಯಲು ಹರ್ಷಪಡಬೇಕು. ವಿವೇಕಾನಂದರ ಆಶಯದಂತೆ ಎಲ್ಲರಲ್ಲೂ ಗುರಿ ತಲುಪಿದ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾಗಿದೆ ಎಂದರು.
    ರಾಮ ಮಂದಿರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲ ಧರ್ಮದವರು, ಜಾತಿಯವರು ರಾಮ ನಾಮ ಜಪ ಮಾಡುತ್ತಿದ್ದಾರೆ. ವಿಶೇಷವಾಗಿ ಹಿಂದುಗಳು ಧರ್ಮವನ್ನು ಒಗ್ಗೂಡಿಸುವ ಯತ್ನದಲ್ಲಿ ನಿರತರಾಗಿದ್ದಾರೆ. ಬಾಬರನ ಕಾಲದಲ್ಲಿ ಮತಾಂತರಾಗಿದ್ದ ಮುಸ್ಲಿಮರು ಕೂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣದಿಂದ ಪುಳಕಿತರಾಗಿದ್ದಾರೆ. ರಾಮ ಎಂಬುದು ಭಾವನಾತ್ಮಕ ನಂಟು ಎಂದು ಹೇಳಿದರು.
    ರಾಮ ಎಂದರೆ ಅದೊಂದು ಶಕಿ, ತೇಜಸ್ಸು, ಸಾಕ್ಷಾತ್ಕಾರ, ವಾತ್ಸಲ್ಯಮಯಿ ತಾಯಿ, ಜಗತ್ತಿನ ಬೆಳಕು, ರಾಮ ಒಂದು ಆದರ್ಶ ಎಂದು ಬಣ್ಣಿಸಿದರು. ರಘುಕುಲ ತಿಲಕ ರಾಮನನ್ನು ಹಾಗೂ ಹಿಂದು ಧರ್ಮವನ್ನು ನಿಂದಿಸುವುದು ತರವಲ್ಲ. ಈ ಹಿಂದೆ ಹಿಂದುವಿನಿಂದ ಅನೇಕ ಧರ್ಮಕ್ಕೆ ಮತಾಂತರವಾಗಿರುವ ವಿಶ್ವದ ಎಲ್ಲ ಧರ್ಮದವರು ಅಯೋಧ್ಯೆಯಲ್ಲಿ ರಾಮ ನಾಮ ಜಪ ಮಾಡುವ ಕಾಲ ಈಗ ಒದಗಿ ಬಂದಿದೆ ಎಂದರು.
    ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗಿ ಕರಸೇವಕರ ಸೇವೆ ಆತ್ಯಮೂಲ್ಯ. ರಾಮಮಂದಿರ ನಿರ್ಮಾಣದಿಂದ ವಿಶ್ವದೆಲ್ಲೆಡೆ ಭಾರತ ಖ್ಯಾತಿ ಹೆಚ್ಚಾಗಿದೆ. ಎಲ್ಲರ ಮನೆ-ಮನಗಳಲ್ಲಿ ರಾಮನಿದ್ದಾನೆ. ಕಲಿಯುಗದ ಅವಧಿ ಪೂರ್ಣಗೊಂಡು ಧರ್ಮ ಯುಗ ಆರಂಭಗೊಂಡಿದೆ ಎಂದು ಹೇಳಿದರು.
    ಅರಸೀಕೆರೆಯ ಸತೀಶ್ ಅವಧೂತರು, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ವಿಪ್ರ ಯುವ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಸೀತಾರಾಮ ಕಲ್ಯಾಣ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts