ರಾಖಿ ಸಾವಂತ್​ಗೆ ಕೈ ಕೊಟ್ಟ ಕಾರ್​​ ಡ್ರೈವರ್​​​; ಮೊಬೈಲ್​, ಕಾರ್​ ಕೀಯೊಂದಿಗೆ ಎಸ್ಕೇಪ್​​

rakhisawant
Published on

ಮುಂಬೈ: ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಒಂದಲ್ಲ ಒಂದು ಕಾರಣದಿಂದ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಾರೆ. ರಾಖಿ ಸಾವಂತ್  ಕಾರ್​​ ಚಾಲಕನ ವಿಚಾರವಾಗಿ ತುಂಬಾ ಅಸಮಾಧಾನಗೊಂಡಿದ್ದಾರೆ.

ರಾಖಿ ಸಾವಂತ್ ಪಾಪರಾಜಿ ಫೋಟೋಗ್ರಾಫರ್​ಗಳ ಜತೆಗೆ ಮಾತನಾಡುವಾಗ, ತನ್ನ ಚಾಲಕ ತನ್ನ ಕಾರಿನ ಕೀಲಿ, ಫೋನ್ ಮತ್ತು ಹಣವನ್ನು ಕದ್ದು ಓಡಿ ಹೋಗಿರುವುದಾಗಿ ಹೇಳಿ ರಾಖಿ ಬೇಸರ ವ್ಯಕ್ತ ಪಡಿಸಿದ ವಿಡಿಯೋ ವೈರಲ್​ ಆಗಿದೆ.

ರಾಖಿ ಮಾತನಾಡಿ, ಈ ಘಟನೆಯ ನಂತರ ನಾನು ತುಂಬಾ ನೊಂದಿದ್ದೇನೆ. ನಾನು ಎಲ್ಲಿಗೆ ಹೋಗಬೇಕು ಮತ್ತು ಯಾವ ಗ್ರಹಕ್ಕೆ ಹೋಗಿ ನೆಲೆಸಬೇಕು? ಅವನು ಬಡವನಾಗಿದ್ದರಿಂದ ನಾನು ನೇಮಿಸಿಕೊಂಡೆ. ಆದರೆ ಅವನು ನನಗೆ ಮೋಸಾ ಮಾಡಿದ್ದಾನೆ. ನನ್ನ ಜೀವನಕ್ಕೆ ಗ್ರಹಣ ಹಿಡಿದಿದೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.  ಈಗ ನನಗೆ ರಿಕ್ಷಾದಲ್ಲಿ ಪ್ರಯಾಣಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಕಾರ್​ ಚಾಲಕ ಓಡಿ ಹೋಗಿದ್ದಾನೆ. ಅವನ ಮನೆಯಲ್ಲಿ ಸಹೋದರಿ ಕೆಲಸ ಮಾಡುತ್ತಾರೆ ಎಂದು ಅವನು ಹೇಳಿಕೊಂಡಿದ್ದನು. ನನ್ನ ಕಾರ್​​ ಚಾಲಕನಾದ ಉತ್ತರ ಪ್ರದೇಶದ ಪಪ್ಪು ಯಾದವ್ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ ಎಂದು ರಾಖಿ ಹೇಳಿದ್ದಾರೆ.

ರಾಖಿಯ ಈ ವೀಡಿಯೊಗೆ ಬಳಕೆದಾರರು ಈಗ ಕಾಮೆಂಟ್ ಮಾಡುತ್ತಿದ್ದಾರೆ. ಮೇಡಂ, ಅವರು ಚಂದ್ರಲೋಕಕ್ಕೆ ಹೋಗಿದ್ದಾರೆ. ನೀವು ಅವರಿಗೆ ಸಂಬಳ ನೀಡುತ್ತಿರಲಿಲ್ಲ ಎನ್ನಿಸುತ್ತದೆ ಎಂದು ಹೀಗೆ ಕಾಮೆಂಟ್​ ಮಾಡುವ ಮೂಲಕವಾಗಿ ನೆಟ್ಟಿಗರು ರಾಖಿಗೆ ತಮಾಷೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net