More

    ಪರೀಕ್ಷಾ ಅಕ್ರಮ ತಡೆಗೆ ರಾಜೀವಗಾಂಧಿ ಆರೋಗ್ಯ ವಿವಿ ಹೊಸ ತಂತ್ರ: ಪ್ರವೇಶ ಪತ್ರದಲ್ಲಿ ಕ್ಯುಆರ್ ಕೋಡ್

    ಬೆಂಗಳೂರು ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆ ಮತ್ತು ಅಕ್ರಮವನ್ನು ತಡೆಗಟ್ಟುವ ಉದ್ದೇಶದಿಂದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್) ಮೊದಲ ಬಾರಿಗೆ ಪ್ರವೇಶ ಪತ್ರಗಳಿಗೆ ‘ ಕ್ಯುಆರ್ ಕೋಡ್’ ಪರಿಚಯಿಸುತ್ತಿದೆ.

    ಇದರಿಂದ ಬದಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ತಪ್ಪಲಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಅಭ್ಯರ್ಥಿಯ ಸಂಪೂರ್ಣ ವಿವರ ತಿಳಿಯುವುದರಿಂದ ಒಂದು ವೇಳೆ ವಿದ್ಯಾರ್ಥಿಯು ನಕಲಿ ಪ್ರವೇಶ ಪತ್ರ ಸೃಷ್ಟಿಕೊಂಡು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರೆ, ಪತ್ತೆ ಹಚ್ಚುವುದು ಸುಲಭವಾಗಲಿದೆ. ಈ ಹೊಸ ಪದ್ಧತಿಯು ಮುಂದಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ.

    ಈ ಕುರಿತು ಆರ್‌ಜಿಯುಎಚ್‌ಎಸ್ ಕುಲಪತಿ ಡಾ.ಎಂ.ಕೆ. ರಮೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿದ್ಯಾರ್ಥಿಗಳ ಸಂಪೂರ್ಣ ಡೇಟಾಬೇಸ್ ವಿಶ್ವವಿದ್ಯಾಲಯದಲ್ಲಿದ್ದು, ಕೊಠಡಿ ಮೇಲ್ವಿಚಾರಕರು ಇದನ್ನು ಸ್ಕ್ಯಾನ್ ಮಾಡಿ ಖಾತರಿ ಪಡಿಸಿಕೊಳ್ಳಬಹುದಾಗಿದೆ. ಇದು ಕೇವಲ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ವಿವಿಯು ನಡೆಸುವ ಎಲ್ಲ ಪರೀಕ್ಷೆಗಳೂ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.

    ಈಗಾಗಲೇ ಪರೀಕ್ಷಾ ಅಕ್ರಮ ತಡೆಗೆ ಸಿಸಿಟಿವಿ, ೇಸ್ ರೆಕಾನೈಜೇಷನ್ ಸೇರಿ ಹಲವು ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಹೊಸದಾಗಿ ಕ್ಯುಆರ್ ಕೋಡ್ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಆರ್‌ಜಿಯುಎಚ್‌ಎಸ್ ಮೌಲ್ಯಮಾಪನ ಕುಲಸಚಿವ ಡಾ.ಎಸ್. ರಿಯಾಜ್ ಬಾಷಾ ಮಾತನಾಡಿ, ಇದು ಒಟಿಪಿ ಆಧಾರಿತ ಕ್ಯೂಆರ್ ಕೋಡ್ ಆಗಿದೆ. ಪರೀಕ್ಷಾ ಕೇಂದ್ರದಲ್ಲಿ ಕುಳಿತ ಮೇಲೆ ಕೊಠಡಿ ಮೇಲ್ವಿಚಾರಕರು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ. ತಕ್ಷಣ ಒಟಿಪಿ ಬರಲಿದೆ. ಇದನ್ನು ಹಾಕಿದ ಮೇಲೆ ವಿದ್ಯಾರ್ಥಿಯ ಸಂಪೂರ್ಣ ವಿವರ ಪ್ರದರ್ಶನವಾಗಲಿದೆ. ಎಂಬಿಬಿಎಸ್ ಪರೀಕ್ಷೆಯಲ್ಲಿ ಬದಲಿ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದು ಸಿಕ್ಕಿಬೀಳುವುದು ಹೆಚ್ಚು. ಇದನ್ನು ತಪ್ಪಿಸುವ ಸಲುವಾಗಿ ಈ ಪದ್ಧತಿ ಅನುಸರಿಸಲು ವಿವಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts