More

    ದಿಢೀರ್‌ ಆಗಿ ಪರಿಷತ್‌ ಕಣದಿಂದ ಹಿಂದಕ್ಕೆ ಸರಿದ ರಾಜೇಂದ್ರ ಕುಮಾರ್

    ಮಂಗಳೂರು: ಪಕ್ಷೇತರನಾಗಿ ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಕಣದಿಂದ ಹಿಂದೆ ಸರಿದಿದ್ದಾರೆ.
    ನಾನು ಪಕ್ಷೇತರನಾಗಿಯೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದೆ, ಆದರೆ ಕಾಂಗ್ರೆಸ್ ನವರು ಕೂಡ ದೂರವಾಣಿ ಮೂಲಕ ಸಂಪರ್ಕಿಸಿ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಹೇಳಿದ್ದರು, ಆದರೆ ನಾನು ಅದಕ್ಕೆ ತಯಾರಿಲ್ಲ, ಪಕ್ಷಾತೀತವಾಗಿಯೇ ಇರುತ್ತೇನೆ, ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರದಲ್ಲಿ ಇರುವ ಕಾರಣ ಕೆಲಸ ಮಾಡಲು ಒಳ್ಳೆಯದಾಗುತ್ತದೆ ಎಂದು ರಾಜೇಂದ್ರ ಕುಮಾರ್‌ ಸುದ್ದಿಗಾರರಿಗೆ ಶನಿವಾರ ತಿಳಿಸಿದರು.
    ಪಕ್ಷದಲ್ಲಿ ಇದ್ದರೆ ಒಂದು ವರ್ಗದ ಜನರಿಗೆ ಮಾತ್ರ ತಲುಪಲು ಆಗುತ್ತದೆ, ಹೀಗಾಗಿ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ನಾನು ಆ ಟಿಕೆಟ್ ಬಯಸುವುದಿಲ್ಲ, ಈ ಎಲ್ಲಾ ಕಾರಣದಿಂದ ನಾನು ಸದ್ಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಜನರ ಒತ್ತಡ ಮತ್ತು ಸಹಕಾರಿ ಕ್ಷೇತ್ರದ ಧ್ವನಿಯಾಗಿ ಪರಿಷತ್ ನಲ್ಲಿ ಬೇಕು ಎಂಬ ಭಾವನೆ ಇತ್ತು, ಸಹಕಾರಿ ಕ್ಷೇತ್ರವನ್ನು ಬೆಳೆಸಿದ ರೀತಿಯಲ್ಲೇ ಪಂಚಾಯಿತಿ ಕ್ಷೇತ್ರ ಬೆಳೆಸಬೇಕಿತ್ತು, ಆದರೆ ರಾಜಕೀಯ ಕಾರಣದಿಂದ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂದರು.
    ರಾಜಕೀಯ ಒತ್ತಡ ಸಹಜ, ಎರಡೂ ಪಕ್ಷದಿಂದಲೂ ಒತ್ತಡ ಇತ್ತು, ನಾನು ನಿಂತಿದ್ದರೆ ಎರಡೂ ಪಕ್ಷದ ಮತ ವಿಭಜನೆ ಆಗುತ್ತಿತ್ತು ಎಂದ ಅವರು ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಡಿಸಿಸಿ ಬ್ಯಾಂಕ್‌ ವ್ಯವಹಾರಗಳ ತನಿಖೆ ಕುರಿತು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಮತ್ತು ಸಹಕಾರಿ ಸಚಿವ ಬಹಳಷ್ಟು ಆತ್ಮೀಯರು, ಆದರೆ ರಾಜಕೀಯದ ವೇದಿಕೆಯಲ್ಲಿ ಮಾತಿಗೆ ವಿಷಯ ಬೇಕು ಅದಕ್ಕೆ ಹಾಗೆ ಹೇಳಿರಬಹುದು. ಆದರೆ ಅವರ ಮಾತಿನಿಂದ ನನಗೆ ಯಾವುದೆ ಎಫೆಕ್ಟ್ ಆಗುವುದಿಲ್ಲ, ಆ ಬಗ್ಗೆ ತಲೆ ಕೆಡಿಸುವುದಿಲ್ಲ, ನಾವಿಬ್ಬರೂ ಯಾವತ್ತಿದ್ದರೂ ಸ್ನೇಹಿತರು ಎಂದರು.
    ಮುಂದೆ ನಡೆಯುವ ಚುನಾವಣೆಯಲ್ಲಿ ನಾನು ಯಾರಿಗೂ ಬೆಂಬಲಿಸುವುದಿಲ್ಲ, ತಟಸ್ಥವಾಗಿರುತ್ತೇನೆ, ಪಕ್ಷ ನೋಡದೇ ಒಳ್ಳೆಯ ಕೆಲಸಕ್ಕೆ ಬೆಂಬಲ ನೀಡುವೆ ಎಂದ ಅವರು ನನ್ನ ಬೆಂಬಲಿಗರಿಗೆ ನಿರಾಶೆಯಾಗಿದೆ, ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

    ದಿಢೀರ್‌ ಆಗಿ ಪರಿಷತ್‌ ಕಣದಿಂದ ಹಿಂದಕ್ಕೆ ಸರಿದ ರಾಜೇಂದ್ರ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts