More

  ‘ಮ್ಯಾನ್​ ವರ್ಸಸ್​ ವೈಲ್ಡ್ ‘ ಸಾಕ್ಷ್ಯ ಚಿತ್ರದ ಶೂಟಿಂಗ್​ಗೆ ಬಂಡೀಪುರಕ್ಕೆ ಬಂದಿದ್ದ ನಟ ರಜನೀಕಾಂತ್​ ಜತೆ ಫೋಟೋ ತೆಗೆಸಿಕೊಂಡ ಅರಣ್ಯ ಸಿಬ್ಬಂದಿ

  ಚಾಮರಾಜನಗರ: ಇಂದು ಬೆಳಗ್ಗೆಯಿಂದ ಬಂಡೀಪುರ ಚಮ್ಮನಹಳ್ಳ ಬಳಿ ಸಾಕ್ಷ್ಯಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದ ಸೂಪರ್​ಸ್ಟಾರ್​ ರಜನೀಕಾಂತ್​ ಅವರು ಮೈಸೂರಿಗೆ ತೆರಳಿ ಅಲ್ಲಿಂದ ಚೆನ್ನೈಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

  ಖ್ಯಾತ ವನ್ಯಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶನ ಮಾಡುತ್ತಿರುವ ಮ್ಯಾನ್​ ವರ್ಸಸ್​ ವೈಲ್ಡ್ ಸಾಕ್ಷ್ಯ ಚಿತ್ರದಲ್ಲಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಮತ್ತು ರಜನೀಕಾಂತ್​ ಅವರು ಅಭಿನಯಿಸುತ್ತಿದ್ದಾರೆ. ​ಅದರ ಚಿತ್ರೀಕರಣ ಇಂದು ಬೆಳಗ್ಗೆಯಿಂದಲೂ ಚಮ್ಮನಹಳ್ಳ ಬಳಿ ನಡೆಯುತ್ತಿತ್ತು.

  ರಜನೀಕಾಂತ್​ ಅವರು ಮೈಸೂರಿಗೆ ಹೊರಡುವುದಕ್ಕೂ ಮೊದಲು ಬಂಡೀಪುರ ಅರಣ್ಯ ಸಿಬ್ಬಂದಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts