More

    ಯುವರಾಜ್‌ಗೆ ರೈನಾ ಟಾಂಗ್ ನೀಡಿದ್ದೇಕೆ?

    ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಹಾಲಿ-ಮಾಜಿ ಕ್ರಿಕೆಟಿಗರು ವೃತ್ತಿಜೀವನದ ಕೆಲವು ಗುಟ್ಟುಗಳನ್ನು ಬಿಚ್ಚಿಡುತ್ತಿದ್ದಾರೆ. ಇವುಗಳಲ್ಲಿ ಕೆಲವು ವಿವಾದಕ್ಕೂ ಕಾರಣವಾಗುತ್ತಿವೆ. ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇತ್ತೀಚೆಗೆ ಇಂಥದ್ದೇ ಒಂದು ಹೇಳಿಕೆಯನ್ನು ನೀಡಿದ್ದರು. ಅದೇನೆಂದರೆ, ಎಂಎಸ್ ಧೋನಿ ನಾಯಕರಾಗಿದ್ದಾಗ ಅವರಿಗೆ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ನೆಚ್ಚಿನ ಆಟಗಾರ ಆಗಿದ್ದರು ಎಂದು. ಅದಕ್ಕೀಗ ಸುರೇಶ್ ರೈನಾ ದಿಟ್ಟ ತಿರುಗೇಟಿನ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಒಂದೇ ದಿನ ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ

    ‘ಎಂಎಸ್ (ಧೋನಿ) ನನಗೆ ಬೆಂಬಲ ನೀಡಿದ್ದರು ಎಂಬುದನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ. ನನ್ನಲ್ಲಿ ಪ್ರತಿಭೆ ಇದೆ ಎಂಬುದನ್ನು ತಿಳಿದೇ ಅವರು ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ನನಗೆ ಬೆಂಬಲ ನೀಡಿದ್ದರು. ಆದರೆ ಪ್ರತಿ 2 ಪಂದ್ಯಕ್ಕೊಮ್ಮೆ ಅವರು ನನ್ನ ಬಳಿಗೆ ಬಂದು, ಈ ಬಾರಿ ನೀನು ಸ್ಕೋರ್ ಮಾಡದಿದ್ದರೆ ನಾನು ದೊಡ್ಡ ಹೆಜ್ಜೆ ಇಡಬೇಕಾಗುತ್ತದೆ ಎನ್ನುತ್ತಿದ್ದರು. ನನಗೆ ಮತ್ತೆ ಒಂದೆರಡು ಪಂದ್ಯಗಳ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಿದ್ದೆ. ಹೀಗಾಗಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆಯನ್ನೂ ವಹಿಸುತ್ತಿದ್ದೆ’ ಎಂದು ಸುರೇಶ್ ರೈನಾ, ಮಾಜಿ ಸಹ-ಆಟಗಾರ ಯುವರಾಜ್‌ಗೆ ಟಾಂಗ್ ನೀಡಿದ್ದಾರೆ.

    ಇದನ್ನೂ ಓದಿ: ಐಸಿಸಿ ಮಾರ್ಗಸೂಚಿಗೆ ಕ್ರಿಕೆಟಿಗರಿಂದ ಟೀಕೆ: ಕಾರ್ಯಸಾಧ್ಯವಲ್ಲ, ಮರುಪರಿಶೀಲಿಸಲು ಆಗ್ರಹ

    ‘ಮಧ್ಯಮ ಕ್ರಮಾಂಕದಲ್ಲಿ ಆಡುವುದು ಸುಲಭದ ಕೆಲಸವಲ್ಲ. ಕೆಲವೊಮ್ಮೆ 10-15 ಓವರ್‌ಗಳಷ್ಟೇ ಆಡಲು ದೊರೆತರೆ, ಮತ್ತೆ ಕೆಲವೊಮ್ಮೆ 30 ಓವರ್‌ಗಳ ಕಾಲ ಆಡಬೇಕಾಗುತ್ತಿತ್ತು. ಮಧ್ಯಮ ಕ್ರಮಾಂಕದಲ್ಲಿ ಆಡುವುದು ಯಾವಾಗಲೂ ಸವಾಲಿನ ಕೆಲಸ. ಆದರೆ ನಾನು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿರುವೆ’ ಎಂದು 33 ವರ್ಷದ ರೈನಾ ಹೇಳಿದ್ದಾರೆ.

    ಯುವರಾಜ್‌ಗೆ ರೈನಾ ಟಾಂಗ್ ನೀಡಿದ್ದೇಕೆ?

    ‘ಸೌರವ್ ಗಂಗೂಲಿ ಬಳಿಕ ನಾನು ಕಂಡ ಶ್ರೇಷ್ಠ ನಾಯಕ ಧೋನಿ. ನನಗೆ ಸದಾ ಬೆಂಬಲ ಒದಗಿಸಿದ್ದಕ್ಕಾಗಿ ಅವರಿಗೆ ಋಣಿಯಾಗಿರುವೆ. ಅವರ ನಾಯಕತ್ವದಲ್ಲಿ ಆಡಿದ 2011ರ ವಿಶ್ವಕಪ್‌ನ ಪ್ರತಿ ಕ್ಷಣವನ್ನೂ ಆನಂದಿಸಿರುವೆ. ಅವರ ಬೆಂಬಲದಿಂದಲೇ ನಾನು ಆ ವಿಶ್ವಕಪ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದೆ’ ಎಂದು ರೈನಾ ವಿವರಿಸಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ಈ ಮುನ್ನ, ‘ಸುರೇಶ್ ರೈನಾಗೆ ಧೋನಿಯಿಂದ ಸಾಕಷ್ಟು ಬೆಂಬಲ ಲಭಿಸಿತ್ತು. ಎಲ್ಲ ನಾಯಕರಿಗೂ ನೆಚ್ಚಿನ ಆಟಗಾರನೊಬ್ಬ ಇರುತ್ತಾನೆ. ಆ ಸಮಯದಲ್ಲಿ ಮಹಿ ಕೂಡ ರೈನಾಗೆ ಸಾಕಷ್ಟು ಬೆಂಬಲವಾಗಿ ನಿಂತಿದ್ದರು’ ಎಂದು ಯುವರಾಜ್ ಹೇಳಿಕೆ ನೀಡಿದ್ದರು. ಅಲ್ಲದೆ, 2011ರ ವಿಶ್ವಕಪ್ ಸಮಯದಲ್ಲಿ ಧೋನಿ, ಯೂಸುಫ್​ ಪಠಾಣ್ ಮತ್ತು ಸುರೇಶ್ ರೈನಾ ಅವರಿಬ್ಬರಲ್ಲಿ ಒಬ್ಬರನ್ನು ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುವ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದರು. ಆಗ ಯೂಸುಫ್​ ಉತ್ತಮವಾಗಿಯೇ ಆಡುತ್ತಿದ್ದರು. ನಾನೂ ಉತ್ತಮವಾಗಿ ಆಡುತ್ತಿದ್ದೆ ಮತ್ತು ವಿಕೆಟ್‌ಗಳನ್ನು ಕಬಳಿಸುತ್ತಿದ್ದೆ. ರೈನಾ ಆಗ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಎಡಗೈ ಸ್ಪಿನ್ನರ್ ತಂಡದಲ್ಲಿ ಇರದ ಕಾರಣದಿಂದಾಗಿ ಆಗ ನನ್ನನ್ನು ತಂಡಕ್ಕೆ ಆಯ್ಕೆ ಮಾಡುವುದು ಅನಿವಾರ‌್ಯವಾಗಿತ್ತು ಎಂದು ಯುವರಾಜ್, ರೈನಾಗಾಗಿ ಯೂಸುಫ್​ 2011ರ ವಿಶ್ವಕಪ್ ನಡುವೆ ತಂಡದಿಂದ ಹೊರಬಿದ್ದುದನ್ನು ವಿವರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts