More

    ಭಾರಿ ಮಳೆಯ ಎಫೆಕ್ಟ್: ಲ್ಯಾಂಡ್ ಆಗದೆ ಮರಳಿದ ವಿಮಾನಗಳು!

    ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಸೋಮವಾರ ನಗರಕ್ಕೆ ಆಗಮಿಸಬೇಕಿದ್ದ ಮೂರು ವಿಮಾನಗಳು ವಾಪಸ್ ಹೋಗಿವೆ.

    ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದರಿಂದ ಮೋಡ ಮುಸಕಿದ ವಾತಾವರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೈದ್ರಾಬಾದ್, ತಿರುಪತಿ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ವಿಮಾನಳು ಲ್ಯಾಂಡಿಂಗ್ ಆಗದೆ ವಾಪಸ್ ಹೋಗಿವೆ.

    ತಿರುಪತಿಯಿಂದ ಬೆಳಗ್ಗೆ 9.30ಕ್ಕೆ ಬಂದಿದ್ದ ಟ್ರುಜೆಟ್ ವಿಮಾನ ಲ್ಯಾಂಡಿಂಗ್ ಆಗದೆ ವಾಪಸ್ ತಿರುಪತಿ ಹೋಗಿದೆ. 8.50ಗಂಟೆಗೆ ಬೆಳಗಾವಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಬೆಂಗಳೂರು-ಬೆಳಗಾವಿ ಸ್ಪೈಸ್ ಜೆಟ್ ವಿಮಾನ ಕೂಡ ಮರಳಿ ಬೆಂಗಳೂರಿಗೆ ತೆರಳಿದೆ. ಹೈದ್ರಾಬಾದ್‌ನಿಂದ ಬೆಳಗಾವಿಗೆ ಬೆಳಗ್ಗೆ 9.30 ಗಂಟೆಗೆ ಬಂದಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಲು ಅನುಕೂಲಕರ ವಾತಾವರಣ ಕಂಡು ಬಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ. ಮೂರು ವಿಮಾನಗಳು ಕೆಲ ಹೊತ್ತು ಆಕಾಶದಲ್ಲೇ ಹಾರಾಟ ನಡೆಸಿದ್ದವು. ಆದರೆ, ರನ್-ವೇ ಸ್ಪಷ್ಟವಾಗಿ ಕಾಣದ ಕಾರಣ ವಿಮಾನಗಳು ವಾಪಸ್ ಹೋಗಿವೆ. ಅದರೊಂದಿಗೆ ಎರಡು ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ತಿಳಿಸಿದ್ದಾರೆ.

    ಸಾರಿಗೆ ನೌಕರರ ಕುಟುಂಬಗಳಿಗೇಕಿಲ್ಲ ಕರೊನಾ ವಿಮೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts