More

    ‘ಮಾಂಡೌಸ್’ಗೆ ಜಿಲ್ಲೆ ಅಸ್ತವ್ಯಸ್ತ: ತಗ್ಗಹಳ್ಳಿಪುರ ಗ್ರಾಮದಲ್ಲಿ ಮನೆ ಕುಸಿತ

    ಮಂಡ್ಯ: ಮಾಂಡೌಸ್ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ವರುಣನ ಕಿರಿಕಿರಿ ಜೋರಾಗಿದೆ. ಬಿಡುವು ಕೊಟ್ಟು ಇದ್ದಕ್ಕಿಂದತೆಯೇ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
    ಭಾನುವಾರ ಇಡೀ ದಿನ ಮಳೆ ಸುರಿಯಿತು. ಅಲ್ಲದೆ, ಚಳಿಯಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು. ಸೋಮವಾರ ಕೂಡ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬಿಟ್ಟು ಬಿಟ್ಟು ಮಳೆ ಸುರಿಯಿತು. ಜತೆಗೆ ತಂಡಿಯ ವಾತಾವರಣವಿತ್ತು. ಇತ್ತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತ, ರಾಗಿ ಬೆಳೆಗೆ ಕಂಟಕವಾಗಿದೆ. ಕಟಾವು ಸಮಯವಾಗಿರುವುದರಿಂದ ಹಲವರು ಸಿದ್ಧತೆ ಮಾಡಿಕೊಂಡಿದ್ದರು. ಕೆಲವರು ಕಟಾವು ಮಾಡಿದ್ದಾರೆ. ಆದರೆ ಮಳೆಯಿಂದಾಗಿ ಬೆಳೆ ಹಾಳಾಗುವ ಸ್ಥಿತಿ ಬಂದೊಗಿದೆ.
    ಮನೆ ಕುಸಿತ: ತಾಲೂಕಿನ ತಗ್ಗಹಳ್ಳಿಪುರ ಗ್ರಾಮದಲ್ಲಿ ಮನೆ ಕುಸಿದಿದೆ. ಗ್ರಾಮದ ರಾಜಮ್ಮ ಎಂಬುವರ ಮನೆ ಗೋಡೆ ಕುಸಿದಿದ್ದು, ಜೀವನಕ್ಕೆ ಆಧಾರವಾಗಿದ್ದ ಸೂರನ್ನು ಕಳೆದುಕೊಂಡಿದ್ದಾರೆ.
    ಸೋಮವಾರ ಮಳೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ಮನೆ ಕಳೆದುಕೊಂಡ ರಾಜಮ್ಮ ಅವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿ ಸಾಂತ್ವನ ಹೇಳಿದರು. ಸ್ಥಳದಲ್ಲೇ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts