More

    ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

    ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

    ಕಳಸ: ‘ನೀವು ವಾಸಿಸುವ ಪ್ರದೇಶದಲ್ಲಿರುವ ಎಲ್ಲರೂ ಸಾಮಾನ್ಯ ವರ್ಗದವರು. ಆದ್ದರಿಂದ ಸರ್ಕಾರದ ಅನುದಾನ ಸಿಗುವುದಿಲ್ಲ’ ಎಂಬ ಜನಪ್ರತಿನಿಧಿಗಳ ಮಾತಿಗೆ ಬೇಸತ್ತ ಹೊಸಗದ್ದೆ, ಹೊರಟಿಮನೆ, ನರನಹಡ್ಲು ಗ್ರಾಮಸ್ಥರೇ ಹಣ ಹೊಂದಿಸಿ ತಮ್ಮೂರಿನ ರಸ್ತೆ ಮಾಡಿಕೊಂಡಿದ್ದಾರೆ.

    ಕಳಸ ಗ್ರಾಪಂ ವ್ಯಾಪ್ತಿಯ ಹೊಸಗದ್ದೆ, ಹೊರಟಿಮನೆ, ನರನಹಡ್ಲು ಪ್ರದೇಶದಲ್ಲಿ 10 ಮನೆಗಳಿವೆ. ಎಲ್ಲರೂ ಸಾಮಾನ್ಯ ವರ್ಗದವರು. ಇಲ್ಲಿಯ ಮನೆಗಳಿಗೆ ಹೋಗುವ ರಸ್ತೆ ದುರಸ್ತಿಯಾಗದೆ ಹಲವು ವರ್ಷಗಳೇ ಕಳೆದಿತ್ತು. ಕಳೆದ ವರ್ಷ ಸುರಿದ ಮಹಾಮಳೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು. ರಸ್ತೆ ದುರಸ್ತಿ ಮಾಡಿಸಿ ಎಂದು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೆ ಜನರಲ್ ಕೆಟಗರಿಯವರು ವಾಸಿಸುವ ಪ್ರದೇಶಕ್ಕೆ ಅನುದಾನ ಸಿಗುವುದಿಲ್ಲ ಎಂಬ ಉತ್ತರ ಬಂತು.

    ನಮ್ಮ ಗ್ರಾಮದ ರಸ್ತೆ ದುರಸ್ತಿ ಮಾಡಿಕೊಡಿ ಎಂದು ಕೇಳಿದರೆ ಜನರಲ್ ಕೆಟಗರಿಯ ಊರಿಗೆ ಅನುದಾನ ಇಲ್ಲ ಅನ್ನುವ ಮಾತುಗಳು ಕೇಳಿಬಂದವು. ಅದರಿಂದ ಬೇಸತ್ತು ನಾವೇ ಹಣ ಹೊಂದಿಸಿಕೊಂಡು ರಸ್ತೆ ದುರಸ್ತಿ ಮಾಡಿಸಿಕೊಂಡಿದ್ದೇವೆ ಎನ್ನುತ್ತಾರೆ ನಿರಂಜನ್ ಹೊಸಗದ್ದೆ.

    ಇದರಿಂದ ಬೇಸತ್ತ ಊರಿನವರು ಪ್ರತಿ ಮನೆಯಿಂದ 3,500 ರೂ. ಸಂಗ್ರಹಿಸಿ ಸುಮಾರು ಎರಡು ಕಿಮೀ ದೂರದ ರಸ್ತೆಯನ್ನು ಜೆಸಿಬಿಯಿಂದ 36 ಗಂಟೆ ಕೆಲಸ ಮಾಡಿಸಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ಗ್ರಾಮಸ್ಥರಾದ ವೆಂಕಟೇಶ್, ನಿರಂಜನ್, ಕಲಶೇಶ್ವರ, ಗಿರೀಶ್, ವಿಷ್ಣುಮೂರ್ತಿ, ನಿರಂಜನ, ಮೇಘರಾಜ, ಪ್ರಭಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts