More

    2024ರ ಹೊತ್ತಿಗೆ ಎಲ್ಲ ರೈಲುಗಳು ವಿದ್ಯುದ್ದೀಕರಣ: ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಮಾಹಿತಿ

    ನವದೆಹಲಿ: ಭಾರತೀಯ ರೈಲುಗಳು 2024ರ ವೇಳೆಗೆ ಶೇ.100 ವಿದ್ಯುದೀಕರಣಗೊಳ್ಳಲಿವೆ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ತಿಳಿಸಿದ್ದಾರೆ.

    ಪರಿಸರ ಸಂರಕ್ಷಣೆ ಬಗ್ಗೆ ನಮಗೆ ಕಾಳಜಿ ಇದೆ. ಆದ್ದರಿಂದಲೇ 2030ರೊಳಗೆ ರೈಲುಗಳನ್ನು ಹೊಗೆ ರಹಿತ ಗಾಡಿಗಳನ್ನಾಗಿ ರೂಪಿಸಲಾಗುವುದು. 2024ರ ಹೊತ್ತಿಗೆ ಎಲ್ಲ ರೈಲುಗಳು ವಿದ್ಯುತ್​ ಚಾಲಿತವಾಗಲಿವೆ ಎಂದರು.

    ಎಲ್ಲ ರೈಲುಗಳು ವಿದ್ಯುದ್ದೀಕರಣಗೊಳ್ಳುತ್ತಿರುವುದು ಭಾರತದಲ್ಲೇ ಮೊದಲು. ಈ ಯೋಜನೆಗಾಗಿ ಬ್ರೆಜಿಲ್​ನ ಸಹಯೋಗ ಪಡೆಯಲು ಯೋಜಿಸಲಾಗಿದೆ ಎಂದರು.

    ಭಾರತೀಯ ರೈಲ್ವೇ ಮಂಡಳಿ ಕಾರ್ಬನ್​ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಆರಂಭಿಸಿದೆ. ನೀತಿ ಆಯೋಗದ ಪ್ರಕಾರ 2014ರಲ್ಲಿ ರೈಲುಗಳಿಂದಾಗಿ 6.84 ಮಿಲಿಯನ್​ ಟನ್​ ಕಾರ್ಬನ್​ ಡಯಾಕ್ಸೈಡ್​ ಬಿಡುಗಡೆಯಾಗಿದೆ. ​

    ಅಮೆರಿಕ, ರಷ್ಯಾ ಮತ್ತು ಚೀನಾ ಹೊರತುಪಡಿಸಿ ಭಾರತ ಅತಿದೊಡ್ಡ ರೈಲು ಸೌಲಭ್ಯವುಳ್ಳ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಇದು ದೇಶಾದ್ಯಂತ 67,368 ಕಿ.ಮೀ ಉದ್ದ ಹಾಗೂ 7,300 ನಿಲ್ದಾಣಗಳನ್ನು ಹೊಂದಿದೆ. ಪ್ರತಿನಿತ್ಯ 23 ಮಿಲಿಯನ್​ ಪ್ರಯಾಣಿಕರು 13 ಸಾವಿರ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts