More

    ಒಂದೇ ಇಲಾಖೆಯ 872 ಉದ್ಯೋಗಿಗಳಿಗೆ ಕರೊನಾ- 86 ಕುಟುಂಬಸ್ಥರ ಸಾವು!

    ನವದೆಹಲಿ: ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯ 872 ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು ಮತ್ತು ನಿವೃತ್ತ ಸಿಬ್ಬಂದಿ ಈವರೆಗೆ ಕರೊನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 86 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು ಪ್ರಕರಣಗಳಲ್ಲಿ 559 ಕೇಂದ್ರ ರೈಲ್ವೆಯಿಂದ ಮತ್ತು 313 ಪಶ್ಚಿಮ ರೈಲ್ವೆಯಿಂದ ವರದಿಯಾಗಿದೆ. ಸೋಂಕಿತ ವ್ಯಕ್ತಿಗಳನ್ನು ಇಲ್ಲಿನ ಪಶ್ಚಿಮ ರೈಲ್ವೆ ಜಗಜೀವನರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮೃತಪಟ್ಟಿರುವ 86 ಸೋಂಕಿತರಲ್ಲಿ 22 ಮಂದಿ ಕರ್ತವ್ಯದಲ್ಲಿದ್ದ ರೈಲ್ವೆ ನೌಕರರು (ಕೇಂದ್ರ ರೈಲ್ವೆಯ 14 ಮತ್ತು ಪಶ್ಚಿಮ ರೈಲ್ವೆಯ ಎಂಟು) ಸೇರಿದ್ದಾರೆ.

    132 ರೈಲ್ವೆ ನೌಕರರು, ಅವರ ಕುಟುಂಬ ಸದಸ್ಯರು ಮತ್ತು ನಿವೃತ್ತ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಮಹಾಭಾರತ ಯುದ್ಧಕ್ಕಿಂತ ಕಠಿಣ ಕರೊನಾ ವಿರುದ್ಧದ ಯುದ್ಧ; ಮೋದಿಯವರನ್ನು ವ್ಯಂಗ್ಯ ಮಾಡಿದ ಶಿವಸೇನೆ

    ಪ್ರಸ್ತುತ, ಕೆಲವು ವಿಶೇಷ ರೈಲುಗಳು, ಸರಕು ರೈಲುಗಳು ಮತ್ತು ಸೀಮಿತ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿರುವ 700 ಸ್ಥಳೀಯ ರೈಲು ಸೇವೆಗಳನ್ನು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯಿಂದ ಸಂಚರಿಸುತ್ತಿವೆ. ಜೂನ್‌ 15ರಿಂದ ಸ್ಥಳೀಯ ರೈಲು ಸೇವೆಗಳನ್ನು ಪುನರಾರಂಭಿಸಿದಾಗಿನಿಂದ, ರೈಲ್ವೆ ನೌಕರರಲ್ಲಿ ಸೋಂಕು ಪ್ರಕರಣ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

    “ರಾಜ್ಯ ಸರ್ಕಾರವು ಕಚೇರಿಗಳಲ್ಲಿ ಕೇವಲ 15 ರಿಂದ 30ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡುವಂತೆ ಹೇಳಿದೆ. ಆದರೆ ರೈಲ್ವೆ ಇಲಾಖೆಗೆ ಇದು ಸಾಧ್ಯವಾಗುತ್ತಿಲ್ಲ. ಇಲ್ಲಿ, 100 ಪ್ರತಿಶತದಷ್ಟು ಕ್ಷೇತ್ರ ಸಿಬ್ಬಂದಿ ಉಪನಗರ ರೈಲು ಸೇವೆಗಳನ್ನು ಪುನರಾರಂಭಿಸಿದಾಗಿನಿಂದ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸೋಂಕು ಹೆಚ್ಚಾಗಿದೆ ಎಂದು ರಾಷ್ಟ್ರೀಯ ರೈಲ್ವೆ ಮಜದೂರ್‌ ಯೂನಿಯನ್ ಅಧ್ಯಕ್ಷ ವೇಣು ನಾಯರ್ ಹೇಳಿದರು.

    “ನಾವು ರೈಲ್ವೆ ನೌಕರರು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಸಾಮಾಜಿಕ ದೂರವನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ನೌಕರರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಇತರ ಎಲ್ಲ ಸುರಕ್ಷತಾ ಸಾಧನಗಳನ್ನು ನಾವು ಒದಗಿಸುತ್ತಿದ್ದೇವೆ” ಎಂದಿದ್ದಾರೆ ಅಧಿಕಾರಿಗಳು (ಏಜೆನ್ಸೀಸ್‌)

    ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸಿದ್ದರಾಮಯ್ಯ ‘ಹೋಮ್ ಕ್ವಾರಂಟೈನ್’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts