More

    ಕೋಟಿ ರೂಪಾಯಿ ಲಂಚ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ರೈಲ್ವೆ ಅಧಿಕಾರಿ

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು, ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಖಾಸಗಿ ಕಂಪನಿಯೊಂದಕ್ಕೆ ರೈಲ್ವೆ ಗುತ್ತಿಗೆ ಕೊಡಿಸುವುದಾಗಿ ಹೇಳಿ ಒಂದು ಕೋಟಿ ರೂಪಾಯಿ ದಂಡ ಸ್ವೀಕರಿಸಲಾಗಿತ್ತು ಎಂದು ತಿಳಿಸಲಾಗಿದೆ.

    ಭಾರತೀಯ ರೈಲ್ವೆ ಎಂಜಿನಿಯರಿಂಗ್ ಸೇವೆಯ (ಐಆರ್​ಇಎಸ್​) ಹಿರಿಯ ಅಧಿಕಾರಿ ಮಹೇಂದರ್ ಸಿಂಗ್ ಚೌಹಾಣ್ ಬಂಧಿತ ಆರೋಪಿ. ಇವರು ಈಶಾನ್ಯ ಗಡಿನಾಡು ರೈಲ್ವೆ (ಎನ್‌ಎಫ್‌ಆರ್) ಯೋಜನೆಗಳ ಗುತ್ತಿಗೆ ಕೊಡಿಸುವುದಾಗಿ ಖಾಸಗಿ ಸಂಸ್ಥೆಯೊಂದಕ್ಕೆ ಹೇಳಿದ್ದರು. ಅದಕ್ಕಾಗಿ ಒಂದು ಕೋಟಿ ರೂಪಾಯಿ ಲಂಚ ಕೊಡುವಂತೆ ಕೇಳಿದ್ದರು. ಲಂಚ ಪಡೆಯಲೆಂದು ಇಬ್ಬರು ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರ ಸಿಬಿಐಗೆ ತಿಳಿದುಬಂದಿದ್ದು, ಲಂಚ ಪಡೆಯಲು ನಿಗದಿಸಲಾಗಿದ್ದ ಸ್ಥಳದ ಮೇಲೆ ದಾಳಿ ನಡೆಸಲಾಗಿದೆ. ಆ ವೇಳೆ ಒಂದು ಕೋಟಿ ಲಂಚದೊಂದಿಗೆ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ಮಹೇಂದರ್ ಸಿಂಗ್​ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

    ಮಹೇಂದರ್ ಸಿಂಗ್ ಚೌಹಾಣ್ 1985 ರ ಬ್ಯಾಚ್‌ನ ಐಆರ್‌ಇಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅವರನ್ನು ಅಸ್ಸಾಂನ ಮಾಲಿಗಾಂವ್‌ನಲ್ಲಿರುವ ಎನ್‌ಎಫ್‌ಆರ್ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. (ಪಿಟಿಐ)

    ಬಿಜೆಪಿ ಹಿರಿಯ ಶಾಸಕ ಹೃದಯಾಘಾತಕ್ಕೆ ಬಲಿ; ಗಣ್ಯರ ಸಂತಾಪ

    48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್​: ನರಕಯಾತನೆ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts