More

    ಹಾಜರಾತಿ ಚೀಟಿ ಕಡ್ಡಾಯ ಸಲ್ಲ; ಜಿಲ್ಲಾಧಿಕಾರಿಗೆ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಮನವಿ

    ರಾಯಚೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಗುರುತಿನ ಚೀಟಿ ಪಡೆಯಲು ಹಾಜರಾತಿ ಹಾಗೂ ವೇತನ ಚೀಟಿ ನೀಡಬೇಕು ಎಂದು ಕಾರ್ಮಿಕ ಇಲಾಖೆ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಶುಕ್ರವಾರ ಮನವಿ ಸಲ್ಲಿಸಿತು.

    ಇದನ್ನೂ ಓದಿ: ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ

    ಕಟ್ಟಡ ಕಾರ್ಮಿಕರ ಸದಸ್ಯತ್ವಕ್ಕೆ ನಿರ್ಮಾಣ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ದೃಢೀಕರಿಸಲು ವೇತನ ಚೀಟಿ ಅಥವಾ ಹಾಜರಾತಿ ಪ್ರತಿಯನ್ನು ಉದ್ಯೋಗ ಪ್ರಮಾಣ ಪತ್ರದೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಕಟ್ಟಡ ಕಾರ್ಮಿಕರಿಗೆ ಅಪಾರ್ಟ್‌ಮೆಂಟ್ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ. ಗ್ರಾಮಾಂತರ ಮತ್ತು ತಾಲೂಕುಗಳಲ್ಲಿ ಕಾರ್ಮಿಕರಿಗೆ ಸಣ್ಣ ಪ್ರಮಾಣದ ಕೆಲಸ ಇರುತ್ತದೆ. ಕೆಲಸ ಮಾಡಿಸಿಕೊಳ್ಳುವ ಮನೆ ಮಾಲೀಕರು ಹಾಜರಾತಿ ನೀಡಲು ನಿರಾಕರಿಸುತ್ತಾರೆ ಎಂದರು.

    ಕಟ್ಟಡ ಕಾರ್ಮಿಕರ ನಿತ್ಯದ ಕಾರ್ಯಗಳು ಒಂದೇ ಕಡೆ ಇರುವುದಿಲ್ಲ. ಹೊಸ ಮರುಳು ನೀತಿಯಿಂದ ಕಾರ್ಮಿಕರಿಗೆ ಕೆಲಸ ಕಡಿಮೆಯಾಗಿದೆ. ಆದರೆ, ಹಾಜರಾತಿ ಪುಸ್ತಕ ಹಾಗೂ ವೇತನ ಚೀಟಿ ನೀಡಬೇಕು ಎಂದು ಆದೇಶ ಹೊರಡಿಸಿದ್ದು ಅವೈಜ್ಞಾನಿಕವಾಗಿದೆ. ಕಾರ್ಮಿಕ ಇಲಾಖೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಮೊದಲಿನಂತೆ ಗುರುತಿನ ಚೀಟಿ ನೋಂದಣಿ ಮತ್ತು ನವೀಕರಣ ಮುಂದುವರಿಸಬೇಕು. ಬೋಗಸ್ ಕಾರ್ಡ್‌ಗಳನ್ನು ತಡೆಯಲು ತನಿಖಾ ತಂಡ ರಚನೆಮಾಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts