More

    ರಾಯಚೂರು ವಿವಿ ಪಿಜಿ ಪ್ರವೇಶ ಕೌನ್ಸೆಲಿಂಗ್ ಅಸ್ತವ್ಯಸ್ತ

    ರಾಯಚೂರು: ನಗರ ಹೊರವಲಯದ ಯರಗೇರಾ ಬಳಿ ಇರುವ ರಾಯಚೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ.ನ ಉಳಿಕೆ ಸೀಟುಗಳ ಪ್ರವೇಶಕ್ಕಾಗಿ ಸೋಮವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಅಸ್ತವ್ಯಸ್ತವಾಗಿದ್ದು ಪಾಲಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿವಿ ವ್ಯಾಪ್ತಿ ಸ್ನಾತಕೋತ್ತರ ಕಾಲೇಜುಗಳಲ್ಲಿನ 440 ಸೀಟುಗಳಲ್ಲಿ 220 ಸೀಟುಗಳು ಖಾಲಿ ಉಳಿದಿದ್ದು, ಅವುಗಳ ಭರ್ತಿಗೆ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ದಿನ ಕೌನ್ಸೆಲಿಂಗ್ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಯಿತು.

    ವಿದ್ಯಾರ್ಥಿಗಳ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ವಿವಿಗೆ ಆಗಮಿಸಿದ್ದು, ಆವರಣದಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇರದೆ, ಊಟಕ್ಕೆ ಒಂದೇ ಕೌಂಟರ್ ಇದ್ದುದಿಂದ ಸಮಸ್ಯೆ ಎದುರಿಸುವಂತಾಗಿತ್ತು. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿನಿಯರಿಗೆ ಸೂಕ್ತ ಶೌಚ ವ್ಯವಸ್ಥೆ ಇರಲಿಲ್ಲ.

    ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರಿಂದ ಪರಸ್ಪರ ಅಂತರ ಮಾಯವಾಗಿತ್ತು. ಸಭಾಂಗಣದಲ್ಲಿ ಜಾಗವಿಲ್ಲದ ಕಾರಣ ಪಾಲಕರು ಬಿಸಿಲಲ್ಲಿ ಕಾದು ನಿಲ್ಲುವಂತಾಗಿತ್ತು. ವಿವಿ ಸುತ್ತಲು ಹೋಟೆಲ್ ಹಾಗೂ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಏನೂ ಸಿಗದಂತಹ ಸ್ಥಿತಿಯಲ್ಲಿ ನಿಲ್ಲಬೇಕಾಗಿತ್ತು.

    ವಿದ್ಯಾರ್ಥಿಗಳು ಪಡೆದಿದ್ದ ರ‌್ಯಾಂಕಿಂಗ್ ಪ್ರಕಾರ ಎರಡ್ಮೂರು ದಿನ ಕೌನ್ಸೆಲಿಂಗ್ ನಡೆಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಬೆಳಗ್ಗೆಯಿಂದ ವಿದ್ಯಾರ್ಥಿಗಳು ಸಂಜೆವರೆಗೆ ತಮ್ಮ ಸರದಿ ಬರಲು ಕಾಯಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಜತೆಗೆ ಹೆಚ್ಚಿನ ಜನ ಸೇರುವುದನ್ನು ತಪ್ಪಿಸಿದಂತಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts