More

    ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ ತರಬೇತಿ ಕಾರ್ಯಾಗಾರ

    ಅರಕೇರಾ: ಐಸಿಐಸಿಐ ಫೌಂಡೇಶನ್ ಕಾರ್ಯನಿರ್ವಹಿಸುತ್ತಿರುವ ಗ್ರಾಮಗಳು ಕೃಷಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂದು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿ ವಿಭಾಗದ ಪ್ರಾಧ್ಯಾಪಕ ಮಹದೇವ ಸ್ವಾಮಿ ಹೇಳಿದರು.

    ಭೂಮನಗುಂಡ ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಐಸಿಐಸಿಐ ಫೌಂಡೇಶನ್ ಶುಕ್ರವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕ ತರಬೇತಿ ಕಾರ್ಯಾಗಾರದಲ್ಲಿ ಎರೆಹುಳು ಘಟಕ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳ ಬಳಕೆ, ಅಜೋಲಾ ಮಹತ್ವ ಮತ್ತು ಜೀವಾಮೃತ ತಯಾರಿಕೆ ವಿಧಾನದ ಕುರಿತು ಸಮಗ್ರ ಮಾಹಿತಿ ನೀಡಿ, ಫೌಂಡೇಶನ್ ಹೊತ್ತ ಸಾಮಾಜಿಕ ಕಳಕಳಿ ಮತ್ತು ಪರಿಸರ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕೆವಿವಿ ವಿದ್ಯಾರ್ಥಿನಿ ಶ್ವೇತಾರೆಡ್ಡಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆ ನಿಯಂತ್ರಿಸಿ ಸಾವಯುವ ಕೃಷಿಗೆ ಉತ್ತೇಜಿಸುವುದೇ ಫೌಂಡೇಶನ್ ಉದ್ದೇಶ. ಭೂಮಿ ಫಲವತ್ತತೆ ಉಳಿಸಿಕೊಳ್ಳುವ ಸಲುವಾಗಿ ರೈತರು ಸಾವಯುವ ಕೃಷಿ ಅವಲಂಬಿಸಬೇಕೆಂದರು.

    ಐಸಿಐಸಿ ಫೌಂಡೇಶನ್ ಅಭಿವೃದ್ಧಿ ಅಧಿಕಾರಿ ಜಿ.ನರಸಿಂಹಪ್ಪ ಮಾತಾನಾಡಿದರು. ತಾಪಂ ಮಾಜಿ ಸದಸ್ಯ ಹನುಮಯ್ಯ, ಗ್ರಾಮಸ್ಥರಾದ ನರಸಪ್ಪ, ಶಿವರಾಜ, ಹನುಮೇಶ, ಫೌಂಡೇಶನ್‌ನ ಯಶೋದಾ, ರಂಗಮ್ಮ, ಮಲ್ಲಿಕಾರ್ಜುನ ಸ್ವಾಮಿ, ಸುರೇಶ ಬಾಬು, ನಾರಾಯಣ, ಬಸವರಾಜ, ಮಹದೇವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts