More

    ವಾರಾಬಂದಿಯಿಂದ ಟೇಲೆಂಡ್ ರೈತರಿಗೆ ಅನ್ಯಾಯ

    ರಾಯಚೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಅವೈಜ್ಞಾನಿಕವಾಗಿ ವಾರಾಬಂದಿ ಅನುಸರಿಸುತ್ತಿರುವುದರಿಂದ ನಾಲೆಯ ಕೊನೆಯ ಭಾಗದ (ಟೇಲೆಂಡ್) ರೈತರಿಗೆ ಸಮಸ್ಯೆಯಾಗುತ್ತಿದ್ದು, ಕೂಡಲೇ ವಾರಬಂದಿ ಹಿಂಪಡೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವೀರನಗೌಡ ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಕಾಲುವೆಯ ಮೈಲ್ 47ರ ಮೇಲ್ಭಾಗದಲ್ಲಿ ವಾರಬಂದಿ ಜಾರಿಗೊಳಿಸದೆ ಕೊನೆಯ ಭಾಗದಲ್ಲಿ ಮಾತ್ರ ವಾರಬಂದಿ ಜಾರಿಗೊಳಿಸುವ ಮೂಲಕ ಟೇಲೆಂಡ್ ರೈತರಿಗೆ ಅನ್ಯಾಯ ಮಾಡಲಾಗಿದೆ. ಜಲಾಶಯದಿಂದ ಕಾಲುವೆಗೆ ಹರಿಸಲಾಗುತ್ತಿರುವ ನೀರಿನಲ್ಲಿ ಮೈಲ್ 47ರ ಮೇಲ್ಭಾಗಕ್ಕೆ ಶೇ.24 ನೀರು ನೀಡಿ ಉಳಿದ ನೀರನ್ನು ಕೆಳಭಾಗಕ್ಕೆ ಹರಿಸಬೇಕು. ಆದರೆ, ಮೈಲ್ 47ರ ಕೆಳಭಾಗಕ್ಕೆ ಶೇ.48 ನೀರು ಹರಿಸಲಾಗುತ್ತಿದೆ. ವಾರಾಬಂದಿ ಜಾರಿ ಮೂಲಕ ಮೈಲ್ 47ರ ಮೇಲ್ಬಾಗದ ರೈತರು ಹೆಚ್ಚಿನ ನೀರು ಬಳಕೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ದೂರಿದರು.

    ಮೈಲ್ 47ರ ಮೇಲ್ಭಾಗದಲ್ಲಿ 1.19 ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಟ್ಟಿದ್ದರೆ ಕೆಳ ಭಾಗದಲ್ಲಿ 3 ಲಕ್ಷ ಎಕರೆಗೂ ಹೆಚ್ಚಿನ ಭೂಮಿ ನೀರಾವರಿಗೆ ಒಳಪಟ್ಟಿದೆ. ವಾರಾಬಂದಿ ಹಿಂಪಡೆಯುವಂತೆ ಒತ್ತಾಯಿಸಿ ಜ.27ರಂದು ಸಿಂಧನೂರಿನಲ್ಲಿ ಧರಣಿ ನಡೆಸಲಾಗುವುದು. ಜ.31ರಂದು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ವೀರನಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts