More

    ವಿದ್ಯುತ್ ಕಳ್ಳತನ ಹಾಗೂ ಪಿಡಿಒ ಕೆಲಸಕ್ಕೆ ಅಡ್ಡಿ ಮಾಡಿದ್ದ ಇಡಪನೂರು ತಾ.ಪಂ. ಸದಸ್ಯನ ಅನರ್ಹಕ್ಕೆ ಆರ್‌ಡಿಪಿಆರ್ ಇಲಾಖೆಗೆ ಜಿಪಂ ಸಿಇಒ ಪ್ರಸ್ತಾವನೆ

    ರಾಯಚೂರು: ವಿದ್ಯುತ್ ಕಳ್ಳತನ, ಸರ್ಕಾರಿ ಕೆಲಸಕ್ಕೆ ಅಡ್ಡಿ ಸೇರಿ ಇನ್ನಿತರ ದೂರುಗಳ ಹಿನ್ನೆಲೆಯಲ್ಲಿ ಇಡಪನೂರು ತಾಪಂ ಸದಸ್ಯ ಶಂಕ್ರಪ್ಪರನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಶಂಕ್ರಪ್ಪ ಹೊಸದಾಗಿ ಕಟ್ಟುತ್ತಿರುವ ಮನೆಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಿರುವ ಕುರಿತಂತೆ ಜಾಗೃತ ದಳ 92,022 ರೂ. ದಂಡ ವಿಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಜತೆಗೆ ಹಳೇ ಮನೆಗೂ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿಲ್ಲ. ಗ್ರಾಪಂ ಕಚೇರಿಯಲ್ಲಿ ಪಿಡಿಒ ಅನ್ನಪೂರ್ಣ ಕರ್ತವ್ಯದ ಮೇಲಿರುವಾಗ ಶಂಕ್ರಪ್ಪ ಹಾಗೂ ಸಂಗಡಿತರು ಕರ್ತವ್ಯಕ್ಕೆ ಅಡ್ಡಿಪಡಿಸಿ, ಟೇಬಲ್ ಬಿಸಾಡಿ ಜೀವ ಬೆದರಿಕೆ ಒಡ್ಡಿರುವ ಕುರಿತು ಇಡಪನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಿರಿಯ ಆರೋಗ್ಯ ಸಹಾಯಕಿ ಚನ್ನಮ್ಮ ಕೆಲಸ ಮಾಡುವಾಗಲೂ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಕುರಿತು ಸೇರಿ ಇನ್ನಿತರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಕಾರಣ ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 136ರಡಿ ಕ್ರಮ ಜರುಗಿಸುವಂತೆ ಸಿಇಒ ಲಕ್ಷ್ಮಿಕಾಂತರೆಡ್ಡಿ ಪತ್ರದಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts