More

    ವೈದ್ಯರಲ್ಲಿ ಹೊಸ ಸಂಶೋಧನೆ ಅರಿವು ಅಗತ್ಯ

    ರಾಯಚೂರು: ವೈದ್ಯರು ನೂತನ ತಂತ್ರಜ್ಞಾನ ಮತ್ತು ಹೊಸ ಸಂಶೋಧನೆಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯವಾಗಿದೆ. ವೈದ್ಯರು ಆರೋಗ್ಯ ಕ್ಷೇತ್ರದ ಹೆಚ್ಚಿನ ಮಾಹಿತಿ ಅರಿತುಕೊಳ್ಳಲು ಕಾರ್ಯಾಗಾರಗಳು ನೆರವಾಗಲಿವೆ ಎಂದು ಕರ್ನಾಟಕ ರಾಜ್ಯ ಸ್ತ್ರೀ ಮತ್ತು ಪ್ರಸೂತಿ ವೈದ್ಯರ ಸಂಘದ ಉತ್ತರ ವಲಯ ಅಧ್ಯಕ್ಷೆ ಡಾ.ಸುಮನ್ ಗಡ್ಡಿ ಹೇಳಿದರು.

    ಸ್ಥಳೀಯ ಸಿರಿ ಸಭಾಂಗಣದಲ್ಲಿ ಸಂಘದಿಂದ ಏರ್ಪಡಿಸಿದ್ದ ಬಂಜೆತನ ನಿವಾರಣಾ ವೈದ್ಯರ ಉತ್ತರ ವಲಯ ಕಾರ್ಯಾಗಾರ ಉದ್ಘಾಟಿಸಿ ಶನಿವಾರ ಮಾತನಾಡಿದರು. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಅವುಗಳನ್ನು ಅರಿತುಕೊಂಡಾಗ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದರು.

    ವೈದ್ಯಕೀಯ ಶಿಕ್ಷಣದಲ್ಲಿ ಕಲಿತಿರುವುದು ಒಂದು ಭಾಗವಾದರೆ, ಇತರರು ಮಾಡಿರುವ ಸಂಶೋಧನೆಗಳನ್ನು ಅರಿತುಕೊಂಡಾಗ ನಾವು ವೃತ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ರೂಢಿಸಿಕೊಳ್ಳಲು ಸಾಧ್ಯವಾಗಲಿದೆ. ಕಾರ್ಯಾಗಾರದಲ್ಲಿ 3ಡಿ ತಂತ್ರಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಕೆಲಸವಾಗುತ್ತಿರುವುದು ಶ್ಲಾಘನೀಯ ಎಂದು ಸುಮನ್ ಗಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts