More

    ರಾಯಚೂರು ನಗರಸಭೆಯಿಂದ 56.89 ಕೋಟಿ ಬಜೆಟ್ ಮಂಡನೆ

    ರಾಯಚೂರು: ಸ್ಥಳೀಯ ಸಾರ್ವಜನಿಕ ಉದ್ಯಾನದಲ್ಲಿ ನಗರಸಭೆ ಅಧ್ಯಕ್ಷೆ ಲಲತಾ ಆಂಜನೇಯ ಸೋಮವಾರ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. 2.37 ಲಕ್ಷ ರೂ. ಉಳಿತಾಯ ಬಜೆಟ್ ಇದಾಗಿದೆ.

    ರಾಜಸ್ವ ಆದಾಯ ಮೂಲದಿಂದ 56.87 ಕೋಟಿ ರೂ., ನಿರೀಕ್ಷಿಸಲಾಗಿದ್ದು, ರಾಜಸ್ವ ಪಾವತಿ 59.20 ಲಕ್ಷ ರೂ.ಗಳಾಗಿವೆ. ಆದಾಯ ಮೂಲಗಳಿಂದ 16.94 ಕೋಟಿ ರೂ. ನಿರೀಕ್ಷಿಸಲಾಗಿದ್ದು, ಪಾವತಿಗೆ 16.97 ಕೋಟಿ ರೂ.ಗಳಾಗಲಿದೆ. ಇತರ ಆದಾಯ ಮೂಲಗಳಿಂದ 16.83 ಕೋಟಿ ರೂ. ನಿರೀಕ್ಷಿಸಲಾಗಿದ್ದು, 16.83 ಕೋಟಿ ರೂ. ಪಾವತಿಗೆ ಮೀಸಲಿಡಲಾಗಿದೆ. ಒಟ್ಟಾರೆ 56.89 ಕೋಟಿ ರೂ. ಬಜೆಟ್‌ನಲ್ಲಿ 2.37 ಲಕ್ಷ ರೂ.ಗಳ ಉಳಿತಾಯವಾಗಲಿದೆ.

    ರಾಜಸ್ವ ಆದಾಯದಲ್ಲಿ ಎಸ್‌ಎಫ್‌ಸಿ ಅನುದಾನ 38.52 ಕೋಟಿ ರೂ. ನಿರೀಕ್ಷಿಸಲಾಗಿದ್ದು, ವಿದ್ಯುತ್ ಅನುದಾನ 19.44 ಕೋಟಿ ರೂ., ಕಟ್ಟಡಗಳ ಕರದಿಂದ 21.86 ಕೋಟಿ ರೂ., ಅಭಿವೃದ್ಧಿ ಶುಲ್ಕದಿಂದ 75 ಲಕ್ಷ ರೂ., ನೀರಿನ ಕರ ಮೂಲಕ 32 ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ. ರಾಜಸ್ವ ಪಾವತಿಯಲ್ಲಿ ವೇತನ ಭತ್ಯೆಗಳಿಗೆ 38.52 ಕೋಟಿ ರೂ., ದಿನಗೂಲಿ ನೌಕರರ ವೇತನಕ್ಕಾಗಿ 70 ಕೋಟಿ ರೂ., ತೆರಿಗೆ, ವಿಮೆಗಾಗಿ 10 ಕೋಟಿ ರೂ., ಕಟ್ಟಡ ದುರಸ್ತಿ, ಬ್ಯಾಂಕ್ ಶುಲ್ಕ, ಒಳಚರಂಡಿ ದುರಸ್ತಿ ಮತ್ತು ಇತರ ವೆಚ್ಚಗಳಿಗಾಗಿ 59.20 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.

    ನಗರಸಭೆ ಮಾಜಿ ಉಪಾಧ್ಯಕ್ಷ ಯು.ದೊಡ್ಡಮಲ್ಲೇಶಪ್ಪ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ಕೆ.ಮುನಿಸ್ವಾಮಿ ಹಾಗೂ ಸದಸ್ಯರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts