More

    ರಾಯಚೂರಿನಲ್ಲಿ ಭಾಗಶಃ ಯಶಕಂಡ ಬಂದ್

    ಕೆಲಕಡೆ ವ್ಯಾಪಾರ ಸ್ಥಗಿತ, ಕೆಲಕಡೆ ಅಬಾಧಿತ | ಬೃಹತ್ ಪ್ರತಿಭಟನೆ, ಸರ್ಕಾರಗಳ ವಿರುದ್ಧ ಆಕ್ರೋಶ

    ರಾಯಚೂರು: ಭೂ ಸ್ವಾಧೀನ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಸೋಮವಾರ ಕರೆ ನೀಡಿದ್ದ ರಾಜ್ಯ ಬಂದ್ ಜಿಲ್ಲೆಯಲ್ಲಿ ಭಾಗಶಃ ಯಶ ಕಂಡಿತು.

    ಬೆಳಗ್ಗೆ 9ರವರೆಗೆ ಸಾರಿಗೆ ಸಂಸ್ಥೆ ಬಸ್ ಸಂಚಾರವಿತ್ತು. ನಂತರ ಮುಂಜಾಗ್ರತೆ ಕ್ರಮವಾಗಿ ನಿಲ್ಲಿಸಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಆಟೋ ಮತ್ತು ಖಾಸಗಿ ವಾಹನಗಳ ಸಂಚಾರ ಎಂದಿನಂತಿದ್ದರೂ, ದುಪ್ಪಟ್ಟು ಹಣ ಪಡೆದಿದ್ದು ಕಂಡು ಬಂತು.

    ಪ್ರತಿಭಟನಕಾರರು ಬಂದಾಗ ಅಂಗಡಿ ಮುಚ್ಚಿದ್ದ ವ್ಯಾಪಾರಸ್ಥರು ನಂತರದಲ್ಲಿ ತೆರೆದು ವಹಿವಾಟು ಆರಂಭಿಸಿದರು. ಆದರೆ, ಸರಾಫ್ ಬಜಾರ್‌ನಲ್ಲಿ ಚಿನ್ನ, ಬೆಳ್ಳಿ ವ್ಯಾಪಾರಸ್ಥರು ವಹಿವಾಟು ಸ್ಥಗಿತಗೊಳಿಸಿದ್ದರು. ಸ್ಟೇಷನ್ ರಸ್ತೆ ಸೇರಿ ಹಲವೆಡೆ ಬಟ್ಟೆ ಬಜಾರ್, ವ್ಯಾಪಾರ ಎಂದಿನಂತೆ ನಡೆಯಿತು. ರಸಗೊಬ್ಬರ, ಕೀಟನಾಶಕ ಅಂಗಡಿಗಳೂ ತೆರೆದಿದ್ದವು. ಪೆಟ್ರೋಲ್ ಬಂಕ್, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದರೆ, ರಾಜೇಂದ್ರ ಗಂಜ್‌ನಲ್ಲಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದರಿಂದ ಈರುಳ್ಳಿ ತಂದ ರೈತರು ಕಾದು ಕುಳಿತಿರುವಂತಾಯಿತು.

    ಅಂಬೇಡ್ಕರ್ ವೃತ್ತದಲ್ಲಿ ರೈತ ಪರ ಮತ್ತಿತರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಬಂದ ಸಹಾಯಕ ಆಯುಕ್ತ ಸಂತೋಷ ಕಾಮಗೌಡಗೆ ಮನವಿ ಸಲ್ಲಿಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ವಿವಿಧ ಸಂಘಟನೆ ಮುಖಂಡರಾದ ರಾಘವೇಂದ್ರ ಕುಷ್ಟಗಿ, ಶರಣಪ್ಪ ಮರಳಿ, ಸೂಗೂರಯ್ಯಸ್ವಾಮಿ, ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ಎಚ್.ಪದ್ಮಾ, ವರಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಎ.ವಸಂತಕುಮಾರ, ರವಿ ಬೋಸರಾಜು, ಕೆ.ಶಾಂತಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಇತರರು ಇದ್ದರು.

    ರಾಯಚೂರಿನಲ್ಲಿ ಭಾಗಶಃ ಯಶಕಂಡ ಬಂದ್
    ರಾಯಚೂರಿನಲ್ಲಿ ಭಾಗಶಃ ಯಶಕಂಡ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts