More

    ಲಾಕ್‌ಡೌನ್ ಹಿನ್ನೆಲೆ ರಾಯಚೂರು ಬಹುತೇಕ ಸ್ತಬ್ಧ, ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟು, ಮಾಸ್ಕ್ ಹಾಕದವರಿಗೆ ದಂಡ

    ರಾಯಚೂರು: ಕರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿದ್ದರಿಂದ ಜಾರಿಯಾದ ನಿಷೇಧಾಜ್ಞೆ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರಲ್ಲದೆ, ಅಲ್ಲಲ್ಲಿ ದಂಡ ಹಾಕಿ ಮನೆಗೆ ಕಳುಹಿಸಿ ಪ್ರಸಂಗಗಳು ಜರುಗಿದವು.

    ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಜಿಲ್ಲಾದ್ಯಂತ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಅಗತ್ಯ ವಸ್ತುಗಳ ಅಂಗಡಿ, ಆಸ್ಪತ್ರೆ, ಮೆಡಿಕಲ್ ಹೊರತು ಪಡಿಸಿ ಎಲ್ಲ ಸಂಚಾರ ಸ್ತಬ್ಧಗೊಂಡಿತ್ತು.ಅನಗತ್ಯ ರಸ್ತೆಗಿಳಿದ ಬೈಕ್ ಸವಾರರಿಗೆ ಪೂರ್ವ ವಲಯದ ಸಿಪಿಐ ಫಸಿಯುದ್ದೀನ್ ಮತ್ತವರ ಸಿಬ್ಬಂದಿ ತುಸು ಲಾಠಿ ರುಚಿ ತೋರಿಸಿದರು. ಕೆಲವರನ್ನು ಲಾಠಿ ಎತ್ತಿ ಓಡಿಸಿದರು. ಆಸ್ಪತ್ರೆ ಮತ್ತಿತರ ತುರ್ತು ಸೇವೆಗೆ ತೆರಳುವವರನ್ನು ವಿಚಾರಿಸಿ ಕಳುಹಿಸಲಾಯಿತು.

    ರಸ್ತೆಗಳಲ್ಲಿ ಜನ ಸಂಚಾರ ಎಂದಿಗಿಂತ ಭಾನುವಾರ ಕಡಿಮೆ ಇತ್ತು. ಅಲ್ಲಲ್ಲಿ ರಸ್ತೆಗಳಿಗೆ ಕಬ್ಬಿಣದ ಸರಳು ಹಾಕಿ ಸಂಚಾರ ನಿಷೇಧಿಸಿದ್ದರು. ಮುಖಕ್ಕೆ ಮಾಸ್ಕ್ ಹಾಕದೆ ಬೈಕಲ್ಲಿ ತೆರಳುತ್ತಿದ್ದವರಿಗೆ 200 ರೂ. ದಂಡ ಹಾಕಿ ಪೊಲೀಸರು ಬುದ್ದಿ ಹೇಳಿದರು.

    ಲಾಕ್‌ಡೌನ್ ಹಿನ್ನೆಲೆ ರಾಯಚೂರು ಬಹುತೇಕ ಸ್ತಬ್ಧ, ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟು, ಮಾಸ್ಕ್ ಹಾಕದವರಿಗೆ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts