More

    ಸಮಸ್ಯೆ ನಿವಾರಣೆಯಾಗಬೇಕಾದರೆ ಹೋರಾಟ ಬಲಗೊಳ್ಳಲಿ; ಎಐಯುಟಿಯುಸಿ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮೀ ಸಲಹೆ

    ರಾಯಚೂರು: ಕಾರ್ಮಿಕರು ಹಕ್ಕುಗಳನ್ನು ಪಡೆಯಲು ಜಾತಿ, ಧರ್ಮದ ಸಂಕೋಲೆಗಳನ್ನು ಕಿತ್ತೆಸೆದು ಸರಿಯಾದ ವಿಚಾರಧಾರೆ ಹೊಂದಿರುವ ನೈಜ ಕಾರ್ಮಿಕ ಸಂಘಟನೆಗಳೊಂದಿಗೆ ಕೈ ಜೋಡಿಸಬೇಕು ಎಂದು ಎಐಯುಟಿಯುಸಿ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮೀ ಹೇಳಿದರು.

    ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಐಯುಟಿಯುಸಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಮಿಕ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಡಿಯುವ ವರ್ಗ, ಹಸಿದ ಜನರು ಸಮಸ್ಯೆಗಳಿಂದ ಹೊರಬರಬೇಕಾದರೆ ಕಾರ್ಮಿಕ ಹೋರಾಟಗಳು ಬಲಗೊಳ್ಳಬೇಕಾಗಿದೆ. ದುಡಿಯುವ ವರ್ಗದ ಜನರು ಹೋರಾಟದ ಸ್ಫೂರ್ತಿಯಿಂದ ಆಚರಿಸುವ ದಿನವೇ ಕಾರ್ಮಿಕ ದಿನವಾಗಿದೆ. ಶೋಷಣೆ ವಿರುದ್ಧದ ಹೋರಾಟದ ಸಂಕೇತವೇ ಕಾರ್ಮಿಕ ದಿನವಾಗಿದೆ ಎಂದು ಹೇಳಿದರು.

    ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್ ಮಾತನಾಡಿ, ಮೇ 1 ಕಾರ್ಮಿಕರನ್ನು ಗುರುತಿಸುವ ದಿನವಾಗಿದ್ದು, ಕಾರ್ಮಿಕರ ಸಂಕಷ್ಟಗಳನ್ನು ದೂರ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು ಎಂದರು.

    ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಅಣ್ಣಪ್ಪ, ಪದಾಧಿಕಾರಿಗಳಾದ ಎನ್.ಎಸ್.ವೀರೇಶ, ಮಹೇಶ ಚೀಕಲಪರ್ವಿ, ಪ್ರಭು, ಯಲ್ಲಪ್ಪ, ಈರಣ್ಣ, ನರಸಪ್ಪ, ರಾಧಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts