More

    ಜನತಾ ಕರ್ಫ್ಯೂಗೆ ರಾಯಚೂರು ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ

    ರಾಯಚೂರು : ನಾನಾ ಸಮಸ್ಯೆಗಳ ಕುರಿತು ನಡೆಯುವ ಬಂದ್‌ಗಳಿಗಿಂತ ಕರೊನಾ ಸೋಂಕು ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಭಾನುವಾರದ ಜನತಾ ಕರ್ಫ್ಯೂಗೆ ಜಿಲ್ಲಾದ್ಯಂತ ಅಭೂತ ಪೂರ್ವ ಬೆಂಬಲ ಸಿಕ್ಕಿದೆ.

    ಹೌದು, ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಒಂದೂ ದಿನವೂ ಜನರಿಲ್ಲದೆ, ವಾಹನ ಓಡಾಡದೆ ಖಾಲಿ ಇರುವುದು ಯಾರು ಕಂಡಿಲ್ಲ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಮೋದಿ ಅವರ ಒಂದೇ ಕರೆಗೆ ಇಡೀ ಜನ ಮನೆಯಲ್ಲೇ ಇದ್ದು, ಒಬ್ಬರಿಂದ ಒಬ್ಬರಿಗೆ ಹರಡುವ ರೋಗದ ತಡೆಗೆ ಕೈ ಜೋಡಿಸಿದರು.

    ಜಿಲ್ಲೆಯ ಗಡಿ ಭಾಗದ ಶಕ್ತಿನಗರ, ಗಿಲ್ಲೆಸುಗೂರು, ಯರಗೇರಾ, ಕೊತ್ತದೊಡ್ಡಿ, ಸಿಂಗನೋಡಿ, ಆಯನೂರು ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸರು ಹೊರ ಹಾಗೂ ಒಳ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಿದರು.

    ವಿವಿಧ ಜಿಲ್ಲೆ, ಗ್ರಾಮೀಣ ಭಾಗದಿಂದ ಉದ್ಯೋಗ ಅರಸಿ ನಗರದಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡಿರುವ ಬ್ಯಾಚುಲರ್‌ಗಳಿಗೆ ಜನತಾ ಕರ್ಫ್ಯೂ ಸಮಸ್ಯೆ ತಂದಿಟ್ಟಿತು. ರೊಟ್ಟಿ ಕೇಂದ್ರಗಳು, ಹೋಟೆಲ್‌ಗಳು, ಪಾರ್ಸಲ್ ಕೇಂದ್ರಗಳು ಮುಚ್ಚಿದ್ದರಿಂದ ಬೆಳಗ್ಗೆ ಟಿಫಿನ್, ಮಧ್ಯಾಹ್ನದ ಊಟಕ್ಕೆ ಪರದಾಡಿದರು. ಕೊನೆಗೆ ಆಪ್ತರ, ಸ್ನೇಹಿತರ ಸಹಕಾರದೊಂದಿಗೆ ಊಟ ಮಾಡಿ ಸಂತೃಪ್ತಗೊಂಡ ಪ್ರಸಂಗಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts