More

    ದುಸ್ಥಿತಿಯಲ್ಲಿ ಗಡಿ ಭಾಗದಲ್ಲಿನ ಕನ್ನಡ ಶಾಲೆ

    ರಾಯಚೂರು: ದೇವಸುಗೂರಿನ ಶ್ರೀ ಸುಗೂರೇಶ್ವರ ಶಿಕ್ಷಣ ಸಂಸ್ಥೆ ನಿರ್ವಹಣೆಯನ್ನು ಶೈಕ್ಷಣಿಕ ಅನುಭವವಿಲ್ಲದವರಿಗೆ ವಹಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಅತಂತ್ರಕ್ಕೆ ಗುರಿ ಮಾಡಲಾಗಿದೆ ಎಂದು ಹೈ.ಕ. ಜನಾಂದೋಲನ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಕರಣಗಿ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಗೆ ಮಾಸಿಕ 95 ಸಾವಿರ ರೂ. ಬಾಡಿಗೆ ಹಾಗೂ 10 ಲಕ್ಷ ರೂ. ಠೇವಣಿ ಷರತ್ತಿನೊಂದಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಗುತ್ತಿಗೆ ಪಡೆದ ಸಂಸ್ಥೆ ಸಿಬ್ಬಂದಿಗೆ ವೇತನ ನೀಡುತ್ತಿಲ್ಲ ಹಾಗೂ ಮಾಸಿಕ ಬಾಡಿಗೆಯನ್ನೂ ಪಾವತಿಸುತ್ತಿಲ್ಲ ಎಂದು ದೂರಿದರು.

    ಕಳೆದ 10 ರಿಂದ 15 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ನೋಟಿಸ್ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ. 700 ಜನ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 190ಕ್ಕೆ ಕುಸಿದಿದೆ. ಗಡಿ ಭಾಗದಲ್ಲಿರುವ ಕನ್ನಡ ಶಾಲೆ ಮುಚ್ಚುವ ಸ್ಥಿತಿ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭವಿಷ್ಯ ಕಾಪಾಡಬೇಕಾಗಿದೆ.

    ಗುತ್ತಿಗೆ ರದ್ದುಗೊಳಿಸಿದ್ದಕ್ಕೆ ಕರಣಗಿ ಎಂಟರ್‌ಪ್ರೈಸಸ್ ತಡೆಯಾಜ್ಞೆ ತಂದಿದೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ಶಿಕ್ಷಣ ಸಂಸ್ಥೆಯನ್ನು ಮುಜರಾಯಿ ಇಲಾಖೆಯಡಿ ಮುನ್ನಡೆಸಲು ಕ್ರಮಕೈಗೊಳ್ಳಬೇಕು ಎಂದು ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು. ಕೇಂದ್ರದ ಅಧ್ಯಕ್ಷ ಖಾಜಾ ಅಸ್ಲಂ ಅಹ್ಮದ್, ಪದಾಧಿಕಾರಿಗಳಾದ ಜಾನ್ ವೆಸ್ಲಿ, ಈರಣ್ಣ ಭಂಡಾರಿ, ಡಾ.ಮೋಹನರಾವ್, ಉಮಾ ಮಹೇಶ್ವರಿ, ದೇವೇಂದ್ರಪ್ಪ, ವೀರನಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts