More

    ಕೋವಿಡ್ ಭತ್ಯೆ ಕೊಡಲು ರಿಮ್ಸ್ ಕಿರಿಯ ವೈದ್ಯರ ಒತ್ತಾಯ

    ರಾಯಚೂರು: ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಕಿರಿಯ ವೈದ್ಯರು, ಸ್ನಾತಕೋತ್ತರ ಪದವೀಧರರಿಗೆ ಹಾಗೂ ಇಂಟರ್ನಿಗಳಿಗೆ ಕೋವಿಡ್ ಭತ್ಯೆ ಪಾವತಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರಿಮ್ಸ್ ಕಿರಿಯ ಸ್ಥಾನಿಕ ವೈದ್ಯರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

    ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಮನವಿ ಸಲ್ಲಿಸಿತು. ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ವೈದ್ಯರಿಗೆ ಪ್ರತಿ ತಿಂಗಳು 10 ಸಾವಿರ ರೂ. ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಇದುವರೆಗೂ ಪಾವತಿಸಿಲ್ಲ. ಸರ್ಕಾರ ವೈದ್ಯರನ್ನು ಕೇವಲ ಕರೊನಾ ಸೇನಾನಿಗಳನ್ನಾಗಿ ಗುರುತಿಸಿದೆ. ಸ್ಥಾನಿಕ ವೈದ್ಯರಿಗೆ ಏಪ್ರಿಲ್‌ನಿಂದ ಇಲ್ಲಿಯವರೆಗೆ ವೇತನ ನೀಡಿಲ್ಲ. ಜತೆಗೆ ಇಂಟರ್ನಿಗಳಿಗೆ ಗೌರವಧನ ನೀಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

    ವೈದ್ಯಕೀಯ ಸ್ನಾತಕೋತ್ತರ ಶುಲ್ಕವನ್ನು ಕಳೆದ ವರ್ಷ 30 ಸಾವಿರ ರೂ.ನಿಂದ 1.50 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದಂತಾಗಿದೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳ ಬರೆಯಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಸಲು ವಿಳಂಬ ಮಾಡಲಾಗುತ್ತಿದೆ. ಈ ಹಿಂದೆ 6 ತಿಂಗಳು ಮುಂದೂಡಲಾಗಿತ್ತು. ನಂತರ ಮತ್ತೊಂದು ವರ್ಷ ಮುಂದೂಡಲಾಗಿದೆ. ಇದರಿಂದ ಕಿರಿಯ ವೈದ್ಯರಿಗೆ ಅನಾನುಕೂಲವಾಗುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts