More

    ಕರೊನಾ ಬಗ್ಗೆ ಸಾರ್ವಜನಿಕರು ಅನಗತ್ಯ ಆತಂಕ ಬೇಡ, ಅರಿವು ಅಗತ್ಯ ಎಂದ ಡಾ.ಅನಿರುಧ್ ಕುಲಕರ್ಣಿ

    ರಾಯಚೂರು: ಕರೊನಾ ವೈರಸ್ ಕುರಿತು ಕೆಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ಇದನ್ನೇ ನೆಚ್ಚಿ ಸಾರ್ವಜನಿಕರು ಹೆಚ್ಚಿನ ಆತಂಕ ಪಡುವುದು ಬೇಡ ಎಂದು ಮೂಳೆ ತಜ್ಞ ಅನಿರುಧ್ ಸಿ. ಕುಲಕರ್ಣಿ ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರೊನಾ ವೈರಸ್ ಜಾಗೃತಿ ಕುರಿತು ರೆಡ್ ಕ್ರಾಸ್ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಪ್ಲೇಗ್, ಕಾಲರಾ, ಸಾರ್ಸ್ ಹಾಗೂ ಡೆಂೆನಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಇವುಗಳಿಗೆ ಹೋಲಿಸಿದರೆ ಕರೊನಾ ಉಂಟು ಮಾಡಿರುವ ಅಪಾಯ ತುಂಬಾ ಕಡಿಮೆ. ಏಳು ನೂರಾ ಅರವತ್ತು ಕೋಟಿಗೂ ಅಧಿಕ ಜನಸಂಖ್ಯೆ ಇರುವ ವಿಶ್ವದಲ್ಲಿ ಈವರೆಗೆ ಸೋಂಕು ಪತ್ತೆಯಾಗಿರುವುದು ಒಂದು ಲಕ್ಷ ಜನರಲ್ಲಿ ಮಾತ್ರ. ತೀವ್ರ ಸೋಂಕಿನ ಕಾರಣಕ್ಕೆ 3,816 ಜನ ಮೃತಪಟ್ಟಿದ್ದಾರೆ. ಹಾಗಾಗಿ, ಈ ಬಗ್ಗೆ ಹೆಚ್ಚಿನ ಆತಂಕ ಪಡುವುದು ಬೇಡ ಎಂದರು.

    ಒಣ ಕೆಮ್ಮು, ಮೂಗು ಸೋರುವಿಕೆ, ಜ್ವರ, ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಕರೊನಾದ ಪ್ರಮುಖ ಲಕ್ಷಣಗಳಾಗಿವೆ. 14 ದಿನಗಳ ನಂತರವಷ್ಟೆ ರೋಗಲಕ್ಷಣ ಕಾಣಿಸುತ್ತದೆ. ಶಂಕಿತ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ತೀವ್ರ ನಿಗಾ ಇರುವ ಪ್ರತ್ಯೇಕ ವಾರ್ಡನಲ್ಲಿರಿಸಿ, ರಕ್ತ ಹಾಗೂ ಕಫಾದ ಮಾದರಿ ಪಡೆದು ಪುಣೆಯಲ್ಲಿರುವ ಪ್ರಯೋಗ ಶಾಲೆಗೆ ಕಳುಹಿಸಲಾಗುತ್ತದೆ. ಹಾಗಾಗಿ ನಾಗರಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

    ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಪ್ರಾಣೇಶ್ ಕುಲಕರ್ಣಿ ಮಾತನಾಡಿ, ಚೀನಾದಲ್ಲಿ ಸಿಕ್ಕ ಜೀವಿಗಳನ್ನೆಲ್ಲಾ ತಿನ್ನುವ ಅನಾರೋಗ್ಯಕರ ಆಹಾರ ಪದ್ದತಿ ಇದೆ. ಇದೆ ಕಾರಣಕ್ಕೆ ಈವರೆಗೆ ಆ ದೇಶದಲ್ಲಿ ಅನೇಕ ರೋಗಗಳು ಉದಯಿಸಿವೆ ಎಂದರು.

    ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗೀರಿ ಸಾಬ್ ದಿನ್ನಿ, ರೆಡ್ ಕ್ರಾಸ್ ಸಂಸ್ಥೆಯ ವಿದ್ಯಾಸಾಗರ್ ಚಿಣಮಗೇರಿ, ಅತಾವುಲ್ಲಾ, ಪ್ರಾಧ್ಯಾಪಕರಾದ ಆರ್.ಮಲ್ಲನಗೌಡ, ಡಾ.ಶಿವಯ್ಯ ಹಿರೇಮಠ, ಮಹಾದೇವಪ್ಪ, ಪುಷ್ಪಾ, ಸ್ವಪ್ನಾ, ಇಶ್ರತ್ ಬೇಗಂ, ವಿಜಯ್ ಸರೋದೆ, ಎಂ.ರವಿ, ರಾಮಚಂದ್ರ ಗಬ್ಬೂರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts