More

    13 ಕಡೆ ಎಸ್‌ಯುಸಿಐ ಕಣಕ್ಕೆ

    ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 13 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಾಗೂ ಅಭ್ಯರ್ಥಿ ಇಲ್ಲದೇ ಇರುವ ಕ್ಷೇತ್ರಗಳಲ್ಲಿ ಹೋರಾಟದ ಹಿನ್ನೆಲೆಯುಳ್ಳ ಹಾಗೂ ಜನಪರವಾಗಿ ಕಾರ್ಯನಿರ್ವಹಿಸುವವರಿಗೆ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ವಿ.ದಿವಾಕರ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ರಾಯಚೂರು ನಗರ ಕ್ಷೇತ್ರದಿಂದ ಎನ್.ಎಸ್.ವೀರೇಶ ಸ್ಪರ್ಧಿಸಲಿದ್ದಾರೆ. ಬೆಂಗಳೂರಿನ ರಾಜಾಜಿನಗರ, ರಾಜರಾಜೇಶ್ವರಿ ನಗರ, ಬಳ್ಳಾರಿ ನಗರ, ಕಂಪ್ಲಿ, ದಾವಣಗೆರೆ ದಕ್ಷಿಣ, ಧಾರವಾಡ, ಕಲಬುರಗಿ ದಕ್ಷಿಣ ಮತ್ತು ಗ್ರಾಮೀಣ, ತುಮಕೂರು ನಗರ, ವಿಜಯಪುರ, ಯಾದಗಿರಿಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

    ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರಾಮಾಣಿಕತೆ, ನಿಷ್ಠೆ ಎಂದು ಹೇಳಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಬಹಿರಂಗವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಇದರಿಂದ ಹೊರತಾಗಿಲ್ಲ. ರಾಜಕೀಯ ಪಕ್ಷಗಳು ಯಾತ್ರೆಗಳ ಹೆಸರಿನಲ್ಲಿ ಜಾತ್ರೆ ನಡೆವೆ. ಡಬಲ್ ಇಂಜಿನ್ ಸರ್ಕಾರವೆಂದು ಹೇಳುತ್ತ ಆದಾನಿ, ಅಂಬಾನಿ ಪರವಾಗಿ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

    ಕಳೆದ 9 ವರ್ಷದಲ್ಲಿ 20 ಕ್ಷ ಕೋಟಿ ರೂ. ಕಾರ್ಪೋರೆಟ್ ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ, ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಕೊಡುಗೆ ನೀಡಲಾಗಿದೆ. ಎಡ ಪಕ್ಷಗಳು ಪರ್ಯಾಯ ಶಕ್ತಿಯಾಗಿ ನಿಲ್ಲಬೇಕಿತ್ತು. ಆದರೆ ಸಿಪಿಐ, ಸಿಪಿಐ(ಎಂ) ಕಾಂಗ್ರೆಸ್ ಪರ ಕಾರ್ಯನಿರ್ವಹಿಸುತ್ತಿವೆ ಎಂದು ಎಚ್.ವಿ.ದಿವಾಕರ್ ದೂರಿದರು. ಪದಾಧಿಕಾರಿಗಳಾದ ಎನ್.ಎಸ್.ವೀರೇಶ, ಶರಣಪ್ಪ ಉದ್ಭಾಳ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts